ಮನುಷ್ಯತ್ವವೇ ತಲೆತಗ್ಗಿಸುವಂತಹ ಘಟನೆಯೊಂದು ಮಧ್ಯಪ್ರದೇಶದಲ್ಲಿ (Madhya Pradesh Crime) ನಡೆದಿದೆ. ನಂಬಿ ಹೋದ ಯುವತಿಯೊಬ್ಬಳಿಗೆ ಬ್ಯೂಟಿ ಪಾರ್ಲರ್ ತರಬೇತಿ ನೀಡುವ ನೆಪದಲ್ಲಿ ಸ್ವತಃ ಮಹಿಳೆಯೇ ತನ್ನ ಗಂಡನ ಕಾಮದ ಹಸಿವಿಗೆ ದೂಡುತ್ತಿದ್ದ ಆಘಾತಕಾರಿ ಸತ್ಯ ಈಗ ಬಯಲಾಗಿದೆ. ಮಧ್ಯಪ್ರದೇಶದ ಗುನಾ ಜಿಲ್ಲೆಯ ಕೈಂಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಕೇಳಿದರೆ ಎದೆ ನಡುಗುವಂತಿದೆ.

Madhya Pradesh Crime – ಏನಿದು ಘಟನೆ? ಅಸಲಿ ಸತ್ಯ ಏನು?
ಗುಲಾಬಗಂಜ್ ನಿವಾಸಿಯಾಗಿರುವ ಯಾಸ್ಮೀನ್ ಖಾನ್ ಎಂಬಾಕೆ ಬ್ಯೂಟಿ ಪಾರ್ಲರ್ ತರಬೇತಿ ನೀಡುತ್ತಿದ್ದಳು. ಅಲ್ಲಿಗೆ ಬರುತ್ತಿದ್ದ ಯುವತಿಯೊಬ್ಬಳನ್ನು ನಂಬಿಸಿ, ಸುಮಾರು ನಾಲ್ಕು ತಿಂಗಳ ಹಿಂದೆ ತನ್ನ ಮನೆಗೆ ಬರುವಂತೆ ಹೇಳಿದ್ದಾಳೆ. ಸಂತ್ರಸ್ತೆ ನಂಬಿಕೆಯಿಂದ ಮನೆಗೆ ಹೋದಾಗ ಅಲ್ಲಿ ಯಾಸ್ಮೀನ್ ಇರಲಿಲ್ಲ, ಬದಲಾಗಿ ಆಕೆಯ ಪತಿ ಶರೀಫ್ ಖಾನ್ ಹೊಂಚು ಹಾಕಿ ಕುಳಿತಿದ್ದ. ಯಾಸ್ಮೀನ್‌ಗಾಗಿ ಕಾಯುತ್ತಿದ್ದ ಯುವತಿಯ ಮೇಲೆ ಶರೀಫ್ ಬಲವಂತವಾಗಿ ಅತ್ಯಾಚಾರ ಎಸಗಿದ್ದಾನೆ. Read this also : ಪತ್ನಿಯನ್ನು ತವರಿಗೆ ಕಳುಹಿಸಿ ಪ್ರೇಯಸಿಯನ್ನು ಮನೆಗೆ ಕರೆದವನು ಮಾಡಿದ್ದೇನು?
ಪತ್ನಿಯೇ ಇಲ್ಲಿ ದೊಡ್ಡ ವಿಲನ್!
ಸಾಮಾನ್ಯವಾಗಿ ಇಂತಹ ಘಟನೆ ನಡೆದಾಗ ಪತ್ನಿ ನ್ಯಾಯ ಕೊಡಿಸುತ್ತಾಳೆ ಎಂಬ ನಂಬಿಕೆ ಇರುತ್ತದೆ. ಆದರೆ ಇಲ್ಲಿ ಕಥೆಯೇ ಬೇರೆ. ಸಂತ್ರಸ್ತೆ ಈ ವಿಷಯವನ್ನು ಯಾಸ್ಮೀನ್ ಬಳಿ ಹೇಳಿಕೊಂಡಾಗ, ಆಕೆ ಅದನ್ನು (Madhya Pradesh Crime) ಗಂಭೀರವಾಗಿ ಪರಿಗಣಿಸಲಿಲ್ಲ. ಬದಲಾಗಿ, “ನನ್ನ ಗಂಡನ ಜೊತೆ ಮಲಗಲೇಬೇಕು” ಎಂದು ಬೆದರಿಸಿ ಯುವತಿಯನ್ನು ಪದೇ ಪದೇ ಮನೆಗೆ ಕರೆಸಿಕೊಳ್ಳುತ್ತಿದ್ದಳು.
ಹೊರಗೆ ಪತ್ನಿ ಕಾವಲು, ಒಳಗೆ ಪತಿ ಕಾಮಕಾಂಡ! ಪೊಲೀಸ್ ವರಿಷ್ಠಾಧಿಕಾರಿ ಹಿತಿಕ ವಾಸ್ಲಾ ನೀಡಿರುವ ಮಾಹಿತಿ ಪ್ರಕಾರ, ಶರೀಫ್ ಖಾನ್ ಯುವತಿಯ ಮೇಲೆ ಅತ್ಯಾಚಾರ ಮಾಡುತ್ತಿದ್ದಾಗ ಪತ್ನಿ ಯಾಸ್ಮೀನ್ ಮನೆಯ ಗೇಟ್ ಬಳಿ ಯಾರೂ ಬರದಂತೆ ಕಾವಲು ನಿಲ್ಲುತ್ತಿದ್ದಳಂತೆ! ಒಬ್ಬ ಮಹಿಳೆಯಾಗಿ ಮತ್ತೊಬ್ಬ ಯುವತಿಗೆ ಈ ರೀತಿ ದ್ರೋಹ ಬಗೆದಿರುವುದು ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿಸಿದೆ.
Read this also : “ನನ್ನ ಗೆಳತಿಯ ಜೊತೆಗೂ ದೈಹಿಕ ಸಂಬಂಧ ಹೊಂದು!” ಪತ್ನಿಯ ವಿಕೃತ ಕಾಮಕ್ಕೆ ಪತಿ ಕಂಗಾಲು
ಮೈದುನ ಮತ್ತು ಹೆಂಡತಿಯ ಮುಂದೆಯೇ ದೌರ್ಜನ್ಯ
ಕಳೆದ ಶನಿವಾರ ಆರೋಪಿ ಶರೀಫ್ ಖಾನ್ ಯುವತಿಗೆ ಫೋನ್ ಮಾಡಿ ಮನೆಗೆ ಕರೆಯಿಸಿದ್ದಾನೆ. ಬರದಿದ್ದರೆ ಹಳೆಯ ವಿಷಯಗಳನ್ನು ಬಹಿರಂಗಪಡಿಸುವುದಾಗಿ ಬ್ಲ್ಯಾಕ್ ಮೇಲ್ ಮಾಡಿದ್ದಾನೆ. ಯುವತಿ ಮನೆಗೆ (Madhya Pradesh Crime) ಹೋದಾಗ ಅಲ್ಲಿ ಯಾಸ್ಮೀನ್ ಮಾತ್ರವಲ್ಲದೆ, ಶರೀಫ್‌ನ ತಮ್ಮ ಮುವೀನ್ ಖಾನ್ ಕೂಡ ಇದ್ದನು. ಅವರಿಬ್ಬರ ಮುಂದೆಯೇ ಯುವತಿಯನ್ನು ಕೋಣೆಗೆ ಎಳೆದುಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.
ಆಗ ಯುವತಿ ಪ್ರತಿರೋಧ ಒಡ್ಡಿದಾಗ ನಡೆದ (Madhya Pradesh Crime) ಗಲಾಟೆಯಲ್ಲಿ ಆರೋಪಿ ಶರೀಫ್ ಕೆಳಗೆ ಬಿದ್ದು ಗಾಯಗೊಂಡಿದ್ದಾನೆ. ಇದೇ ಸಮಯಕ್ಕೆ ಗಾಬರಿಗೊಂಡ ಯುವತಿ ಮನೆಯವರಿಗೆ ಫೋನ್ ಮಾಡಿದ್ದಾಳೆ. ಕುಟುಂಬಸ್ಥರು ಸ್ಥಳಕ್ಕೆ ಬರುತ್ತಿದ್ದಂತೆಯೇ ತಪ್ಪಿಸಿಕೊಳ್ಳಲು ಯತ್ನಿಸಿದ ಮೂವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ.

