Saturday, December 20, 2025
HomeNationalCrime: ಲಕ್ನೋದಲ್ಲಿ ಘೋರ ಕೃತ್ಯ: ಲಿವ್-ಇನ್ ಪಾರ್ಟನರ್ ಕತೆ ಮುಗಿಸಿ ಶವದ ಜೊತೆಗೇ ರಾತ್ರಿ ಕಳೆದ...

Crime: ಲಕ್ನೋದಲ್ಲಿ ಘೋರ ಕೃತ್ಯ: ಲಿವ್-ಇನ್ ಪಾರ್ಟನರ್ ಕತೆ ಮುಗಿಸಿ ಶವದ ಜೊತೆಗೇ ರಾತ್ರಿ ಕಳೆದ ಅಮ್ಮ-ಮಕ್ಕಳು!

ಪ್ರೀತಿ, ಪ್ರೇಮ, ಸಹಜೀವನ ಅಂತೆಲ್ಲಾ ಶುರುವಾದ ಸಂಬಂಧವೊಂದು ಕಡೆಗೆ ಹೀಗೆ ರಕ್ತಸಿಕ್ತವಾಗಿ ಅಂತ್ಯವಾಗುತ್ತೆ ಅಂತ ಯಾರೂ ಊಹಿಸಿರಲಿಕ್ಕಿಲ್ಲ. ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದ ಈ ಘಟನೆ ಕೇಳಿದರೆ ನಿಜಕ್ಕೂ ಶಾಕ್ ಆಗುತ್ತೆ. ಎರಡು ಮಕ್ಕಳ ತಾಯಿಯ ಸಹವಾಸ ಮಾಡಿದ 33 ವರ್ಷದ ಇಂಜಿನಿಯರ್ ಒಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಅಷ್ಟಕ್ಕೂ ಆ ರಾತ್ರಿ ಆ ಮನೆಯಲ್ಲಿ ನಡೆದಿದ್ದೇನು? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.

A Jankipuram live-in case involving a family and a 33-year-old engineer has raised key questions as police review the late-night dispute - Crime News

Crime – ಘಟನೆ ಏನು?

ಲಕ್ನೋದ ಜಾನಕಿಪುರಂನಲ್ಲಿ 33 ವರ್ಷದ ಸೂರ್ಯ ಪ್ರತಾಪ್ ಸಿಂಗ್ ಎಂಬ ಇಂಜಿನಿಯರ್ ಕೊಲೆಯಾಗಿದ್ದಾರೆ. ಈ ಕೊಲೆ ಮಾಡಿರುವುದು ಬೇರಾರೂ ಅಲ್ಲ, ಕಳೆದ ಹಲವು ವರ್ಷಗಳಿಂದ ಆತನ ಜೊತೆ ಲೀವ್-ಇನ್ ರಿಲೇಷನ್‍ಷಿಪ್‍ನಲ್ಲಿದ್ದ (Live-in Relationship) 46 ವರ್ಷದ ರತ್ನಾ ಮತ್ತು ಆಕೆಯ ಇಬ್ಬರು ಹೆಣ್ಣು ಮಕ್ಕಳು! ಡಿಸೆಂಬರ್ 7ರಂದು ರಾತ್ರಿ ಈ ಘಟನೆ ನಡೆದಿದ್ದು, ಪ್ರಿಯಕರನ ಕತೆ ಮುಗಿಸಿದ ಬಳಿಕ ಆತನ ಶವದ ಜೊತೆಯೇ ಈ ತಾಯಿ-ಮಕ್ಕಳು ಇಡೀ ರಾತ್ರಿ ಕಳೆದಿದ್ದಾರೆ ಅನ್ನೋದು ಎಂಥವರಿಗಾದರೂ ಎದೆ ನಡುಗಿಸುವ ಸಂಗತಿ.

Crime – ಕೊಲೆಗೆ ಕಾರಣವೇನು? (ಆರೋಪಿ ರತ್ನಾ ಹೇಳೋದೇನು?)

ಪೊಲೀಸರ ವಿಚಾರಣೆ ವೇಳೆ ರತ್ನಾ ಬಾಯಿಬಿಟ್ಟ ಸತ್ಯ ಅಂದ್ರೆ, ಸೂರ್ಯ ಪ್ರತಾಪ್ ಆಕೆಯ ಹಿರಿಯ ಮಗಳ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದನಂತೆ.

  • ಅತೀ ನಿಯಂತ್ರಣ: ಸೂರ್ಯ ಪ್ರತಾಪ್ ಮನೆಯಲ್ಲಿ ಬರೋಬ್ಬರಿ ಮೂರು ಸಿಸಿಟಿವಿ ಕ್ಯಾಮೆರಾಗಳನ್ನು ಹಾಕಿ ಹೆಣ್ಣುಮಕ್ಕಳ ಮೇಲೆ ನಿಗಾ ಇಟ್ಟಿದ್ದನಂತೆ. ಅವರ ಸೋಶಿಯಲ್ ಮೀಡಿಯಾ ಬಳಕೆಯ ಮೇಲೂ ನಿರ್ಬಂಧ ಹೇರಿದ್ದ.
  • ಅಸಭ್ಯ ವರ್ತನೆ: ಡಿಸೆಂಬರ್ 7ರಂದು ಹಿರಿಯ ಮಗಳ ಫೋನ್‌ನಲ್ಲಿ ಫೋಟೋವೊಂದನ್ನು ನೋಡಿದ ಸೂರ್ಯ, ಆಕೆಯನ್ನು ಎಳೆದಾಡಿದ್ದಲ್ಲದೆ, ರೂಮ್‌ಗೆ ಎಳೆದುಕೊಂಡು ಹೋಗಲು ಯತ್ನಿಸಿದ್ದನಂತೆ. ಇದನ್ನು ತಡೆಯಲು ಹೋದಾಗ ಗಲಾಟೆ ವಿಕೋಪಕ್ಕೆ ಹೋಗಿ, ರತ್ನಾ ಮತ್ತು ಮಕ್ಕಳು ಸೇರಿ ಚಾಕುವಿನಿಂದ ಇರಿದು ಆತನನ್ನು ಕೊಲೆ ಮಾಡಿದ್ದಾರೆ.

Crime – ಟ್ವಿಸ್ಟ್ ಕೊಟ್ಟ ಮೃತ ಯುವಕನ ತಂದೆ!

ಮೃತ ಸೂರ್ಯ ಪ್ರತಾಪ್ ಸಿಂಗ್ ತಂದೆ ನರೇಂದ್ರ ಸಿಂಗ್ ಅವರ ಆರೋಪವೇ ಬೇರೆ. ಅವರ ಪ್ರಕಾರ ಇದೊಂದು ಪಕ್ಕಾ ಪ್ಲಾನ್ ಮಾಡಿ ಮಾಡಿದ ಮರ್ಡರ್.

Crime – ಟ್ಯೂಷನ್ ಟೀಚರ್ ಟು ಲೀವ್-ಇನ್ ಪಾರ್ಟ್ನರ್!

ಅಸಲಿಗೆ ಈ ಕತೆ ಶುರುವಾಗಿದ್ದು 2012ರಲ್ಲಿ. ಆಗ ಸೂರ್ಯ ಪ್ರತಾಪ್, ರತ್ನಾಳ ಮಕ್ಕಳಿಗೆ ಟ್ಯೂಷನ್ ಹೇಳಿಕೊಡಲು ಹೋಗುತ್ತಿದ್ದ. ರತ್ನಾ ಮೊದಲ ಪತಿ ರಾಜೇಂದ್ರ ಕುಡಕನಾಗಿದ್ದ, ಆತನಿಂದ ದೂರವಿದ್ದ ರತ್ನಾ ಮುಂದೆ 2014ರಲ್ಲಿ ಪತಿ ತೀರಿಕೊಂಡ ಬಳಿಕ ಸೂರ್ಯನಿಗೆ ಹತ್ತಿರವಾಗಿದ್ದಳು. ಸೂರ್ಯ ತನ್ನ ಸ್ವಂತ ಜಾಗದಲ್ಲಿ ಮನೆ ಕಟ್ಟಿದ್ದ, ಅದಕ್ಕೆ ರತ್ನಾ ಕೂಡ ಹಣಕಾಸಿನ ನೆರವು ನೀಡಿದ್ದಳು ಎನ್ನಲಾಗಿದೆ. ಹೀಗೆ ಶುರುವಾದ ಇವರ ಸಹಜೀವನ ಈಗ ದುರಂತ ಅಂತ್ಯ ಕಂಡಿದೆ.

A Jankipuram live-in case involving a family and a 33-year-old engineer has raised key questions as police review the late-night dispute - Crime News

ಶವದ ಜೊತೆ ಕಳೆದ ರಾತ್ರಿ!

ರಾತ್ರಿ 11 ಗಂಟೆಗೆ ಕೊಲೆ ನಡೆದಿದೆ. ಆದರೆ, ಆರೋಪಿಗಳು ತಕ್ಷಣ ಪೊಲೀಸರಿಗೆ ಫೋನ್ ಮಾಡಿಲ್ಲ. ಬದಲಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಸೂರ್ಯನ ಶವದ ಜೊತೆಯೇ ಇಡೀ ರಾತ್ರಿ ಕಳೆದಿದ್ದಾರೆ. ಮರುದಿನ ಬೆಳಗ್ಗೆ ತಾವೇ ಪೊಲೀಸರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ವಿಚಾರಣೆ ವೇಳೆ ರತ್ನಾ ಮುಖದಲ್ಲಿ ಪಶ್ಚಾತ್ತಾಪದ ಲವಲೇಶವೂ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಸದ್ಯ ಪೊಲೀಸರು ರತ್ನಾ ಹಾಗೂ ಆಕೆಯ ಇಬ್ಬರು ಮಕ್ಕಳನ್ನು ಬಂಧಿಸಿದ್ದಾರೆ. ಇದು ಸ್ವರಕ್ಷಣೆಗಾಗಿ ನಡೆದ ಕೊಲೆಯೇ ಅಥವಾ ಆಸ್ತಿಗಾಗಿ ನಡೆದ ಸಂಚೇ ಎಂಬುದು ತನಿಖೆಯಿಂದಷ್ಟೇ ಹೊರಬರಬೇಕಿದೆ. ಆದರೆ, ಅನೈತಿಕ ಸಂಬಂಧವೊಂದು ಇಷ್ಟೊಂದು ಕ್ರೂರವಾಗಿ ಅಂತ್ಯವಾಗಿರುವುದು ಸಮಾಜ ತಲೆತಗ್ಗಿಸುವಂತಿದೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular