ನಾಯಿ ಎಂದರೆ ಕೇವಲ ಸಾಕುಪ್ರಾಣಿಯಲ್ಲ, ಅದು ನಿಸ್ವಾರ್ಥ ಪ್ರೀತಿಯ ಜೀವಂತ ಸಾಕ್ಷಿ. “ನಾಯಿಯ ಪ್ರಾಮಾಣಿಕತೆ” ಎಂಬ ಮಾತಿಗೆ ಮತ್ತೊಮ್ಮೆ ಉದಾಹರಣೆಯಾದ ಘಟನೆಯೊಂದು ಹಿಮಾಚಲ ಪ್ರದೇಶದಲ್ಲಿ ನಡೆದಿದೆ. ಮೈ ನಡುಗಿಸುವ ಹಿಮಪಾತ, ತಿನ್ನಲು ಆಹಾರವಿಲ್ಲದಿದ್ದರೂ ತನ್ನ ಯಜಮಾನನ ಶವವನ್ನು ಬಿಟ್ಟು ಕದಲದ (Loyal Dog) ನಾಯಿಯ ಈ ಕಥೆ ಈಗ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಕಣ್ಣಾಲಿಗಳನ್ನು ಒದ್ದೆಯಾಗಿಸುತ್ತಿದೆ.

Loyal Dog – ಹಿಮದ ಬೆಟ್ಟದಲ್ಲಿ ನಡೆದ ದುರಂತ
ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯ ಭರ್ಮೋರ್ ಉಪವಿಭಾಗದ ಹೋಳಿ ಎಂಬ ಪ್ರದೇಶದಲ್ಲಿ ಈ ಮನಕಲಕುವ ಘಟನೆ ಸಂಭವಿಸಿದೆ. ಚಾರಣಕ್ಕೆ ಹೋಗಿದ್ದ ಇಬ್ಬರು ಯುವಕರು ತೀವ್ರ ಹಿಮಪಾತದ ನಡುವೆ ನಾಪತ್ತೆಯಾಗಿದ್ದರು. ಅವರು ತೀವ್ರ ಚಳಿಯಿಂದಾಗಿ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಸಿಕ್ಕ ನಂತರ, ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆಯ (SDRF) ಹೆಲಿಕಾಪ್ಟರ್ ಶೋಧ ಕಾರ್ಯ ಆರಂಭಿಸಿತ್ತು. ಬೆಟ್ಟದ ತುದಿಯಲ್ಲಿ ಹೆಪ್ಪುಗಟ್ಟಿದ ಹಿಮದ ಅಡಿಯಲ್ಲಿ ಯುವಕರ ಶವ ಪತ್ತೆಯಾದಾಗ, ರಕ್ಷಣಾ ಸಿಬ್ಬಂದಿಗೂ ಅಲ್ಲಿನ ದೃಶ್ಯ ಕಂಡು ಅಚ್ಚರಿಯಾಯಿತು.
ನಾಲ್ಕು ದಿನಗಳ ನಿರಂತರ ಕಾವಲು
ಮೃತಪಟ್ಟ ಯುವಕರ ಪಕ್ಕದಲ್ಲೇ ಅವರ ಸಾಕುಪ್ರಾಣಿ ಪಿಟ್‌ಬುಲ್ ನಾಯಿ ಮೌನವಾಗಿ ಕುಳಿತಿತ್ತು. ಕಳೆದ ನಾಲ್ಕು ದಿನಗಳಿಂದ ಮೈಕೊರೆಯುವ ಚಳಿಯಿದ್ದರೂ ನಾಯಿ ಆ ಜಾಗದಿಂದ ಒಂದು Loyal Dog) ಇಂಚೂ ಕದಲಿಲ್ಲ. ಕಾಡುಪ್ರಾಣಿಗಳು ಶವಕ್ಕೆ ಹಾನಿ ಮಾಡದಂತೆ ಈ ನಾಯಿ ಕಾವಲು ಕಾದಿತ್ತು. ಹಸಿವು ಮತ್ತು ಹವಾಮಾನ ವೈಪರೀತ್ಯದಿಂದ ನಾಯಿ ಅಕ್ಷರಶಃ ಹೆಪ್ಪುಗಟ್ಟಿದ್ದರೂ, ತನ್ನ ಯಜಮಾನನಿಗಾಗಿ ತೋರಿದ ಆ ಪ್ರೀತಿ ಮಾತ್ರ ಕರಗಿರಲಿಲ್ಲ. Read this also : ಸೈಕಲ್ ಏರಿ ಹೊರಟ ಮಾಲೀಕನನ್ನು ತಡೆದು ನಿಲ್ಲಿಸಿದ ಆನೆಯ ಮುದ್ದಾದ ವಿಡಿಯೋ ವೈರಲ್!
ರಕ್ಷಣಾ ಸಿಬ್ಬಂದಿಗೂ ತಡೆಯೊಡ್ಡಿದ ಸಾಕುನಾಯಿ
ಹೆಲಿಕಾಪ್ಟರ್ ಮೂಲಕ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ತಲುಪಿದಾಗ, ನಾಯಿ Loyal Dog) ಮೊದಲು ಅವರನ್ನು ಹತ್ತಿರ ಸೇರಿಸಲೇ ಇಲ್ಲ. ತನ್ನ ಯಜಮಾನನಿಗೆ ಅವರು ತೊಂದರೆ ಕೊಡಲು ಬಂದಿದ್ದಾರೆಂದು ಭಾವಿಸಿ ಜೋರಾಗಿ ಬೊಗಳುತ್ತಾ ರಕ್ಷಣಾ ಸಿಬ್ಬಂದಿಗೆ ಪ್ರತಿರೋಧ ಒಡ್ಡಿತು. ಕೊನೆಗೆ ಸಿಬ್ಬಂದಿ ಬಹಳ ಹೊತ್ತು ನಾಯಿಯನ್ನು ಸಮಾಧಾನಪಡಿಸಿ, ತಾವು ಸಹಾಯಕ್ಕೆ ಬಂದಿದ್ದೇವೆ ಎಂದು ನಂಬಿಕೆ ಮೂಡಿಸಿದ ಮೇಲೆ ನಾಯಿ ದೂರ ಸರಿದು ಶವಗಳನ್ನು ಹೆಲಿಕಾಪ್ಟರ್‌ಗೆ ತುಂಬಲು ಅವಕಾಶ ಮಾಡಿಕೊಟ್ಟಿತು.

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
ನಾಯಿಯ ನಿಷ್ಠೆಗೆ ನೆಟ್ಟಿಗರ ಸಲಾಂ
ಸದ್ಯ ಈ ಘಟನೆಯ Loyal Dog) ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೇಗವಾಗಿ ಹರಡುತ್ತಿದ್ದು, ಪ್ರಾಣಿ ಪ್ರೇಮಿಗಳು ಭಾವುಕರಾಗಿದ್ದಾರೆ. ಹಿಮದಲ್ಲಿ ನಡುಗುತ್ತಾ ನಿಂತಿರುವ ನಾಯಿಯ ದೃಶ್ಯ ನೋಡುಗರ ಎದೆ ಕರಗಿಸುವಂತಿದೆ. ಪ್ರಸ್ತುತ ನಾಯಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದ್ದು, ಅದು ಚೇತರಿಸಿಕೊಳ್ಳುತ್ತಿದೆ. ಮನುಷ್ಯ ಸಂಬಂಧಗಳಿಗಿಂತಲೂ ಮಿಗಿಲಾದ ಪ್ರೀತಿ ಪ್ರಾಣಿಗಳಲ್ಲಿದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.
