Love – ಸಮಾಜದಲ್ಲಿ ಪ್ರೀತಿ, ಪ್ರೇಮ, ಮದುವೆಯ ಹೆಸರಿನಲ್ಲಿ ಹಲವು ರೀತಿಯ ವಂಚನೆಗಳು ನಡೆಯುತ್ತಿರುತ್ತವೆ. ಪ್ರೀತಿಯ ಹೆಸರಿನಲ್ಲಿ ಮೋಸ ಮಾಡೋದು, ಹಣ ಪೀಕೋದು ಅಥವಾ ಬ್ಲಾಕ್ ಮೇಲ್ ಮಾಡೋದು ಈ ರೀತಿಯ ಘಟನೆಗಳು ಆಗಾಗ ಕೇಳಿಬರುತ್ತಲೇ ಇರುತ್ತದೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಪ್ರೀತಿ, ಪ್ರೇಮ, ಮದುವೆಯ ಹೆಸರಿನಲ್ಲಿ ವಂಚಿಸುತ್ತಿದ್ದ ಮಹಿಳೆ ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ. ಈ ಸಂಬಂಧ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.

ಆರೋಪಿಯನ್ನು ಫಾರ್ಹನಖಾನಂ (29) ಎಂದು ಗುರ್ತಿಸಲಾಗಿದ್ದು, ತುಮಕೂರು ಮೂಲದ ಇದ್ರೀಸ್ ಎಂಬಾತನೊಂದಿಗೆ 2014 ರಲ್ಲಿ ಮದುವೆಯಾಗಿದ್ದಳು. ಎಲ್ಲ ಕುಟುಂಬಸ್ಥರೊಂದಿಗೆ ಸೇರಿ ಶಾಸ್ತ್ರೋಕ್ತವಾಗಿ ಮದುವೆ ಮಾಡಿದ್ದರು. ಫಾರ್ಹನಖಾನಂ ಇದ್ರೀಸ್ ನ ಎರಡನೇ ಹೆಂಡತಿ. ಇದ್ರೀಸ್ ನ ಮೊದಲ ಪತ್ನಿ ಅನಾರೋಗ್ಯದ ಹಿನ್ನೆಲೆಯಲ್ಲಿ ಫಾರ್ಹನಖಾನಂಳನ್ನು ಎರಡನೇ ಮದುವೆಯಾಗಿದ್ದ. ಮದುವೆಯ ಎಲ್ಲಾ ಖರ್ಚನ್ನೂ ಇದ್ರೀಸ್ ನೋಡಿಕೊಂಡಿದ್ದ, ಜೊತೆಗೆ ಆಕೆಗೆ 1.42 ಲಕ್ಷ ಮೌಲ್ಯದ ಚಿನ್ನಾಭರಣ ಸಹ ಮಾಡಿಸಿದ್ದ ಎನ್ನಲಾಗಿದೆ.
ಇನ್ನೂ ಮದುವೆಯಾದ ಕೆಲವೇ ದಿನಗಳಲ್ಲಿ ಫಾರ್ಹಖಾನಂ ತನ್ನ ವರಸೆ ಬದಲಿಸಿದಳು. ಫಾರ್ಹನಖಾನಂ ಇದ್ರೀಸ್ ನೊಂದಿಗೆ ಮದುವೆಯಾಗುವುದಕ್ಕೂ ಮುನ್ನಾ ಜಾಕೀರ್ ಎಂಬ ವ್ಯಕ್ತಿಯನ್ನು ಮದುವೆಯಾಗಿದ್ದಳು. ಇದ್ರೀಸ್ ಜೊತೆಗೆ ಮದುವೆಯಾದ ಬಳಿಕವೂ ಜಾಕೀರ್ ಜೊತೆಗೆ ಕದ್ದು ಮುಚ್ಚಿ ಮಾತನಾಡುತ್ತಿದ್ದಳು. ಈ ವಿಚಾರ ತಿಳಿದು ಇದ್ರೀಸ್ ಗಲಾಟೆ ಸಹ ಮಾಡಿದ್ದಾನೆ. ಆದರೆ ಫಾರ್ಹನ ಖಾನಂ ಗಂಡನಾದ ಇದ್ರೀಸ್ ನನ್ನೇ ಮನೆಯಿಂದ ಹೊರಗೆ ಓಡಿಸಿದ್ದಳು. ಈ ಸಂಬಂಧ ಇದ್ರೀಸ್ ಆಕೆಯ ವಿರುದ್ದ ದೂರು ಸಹ ನೀಡಿದ್ದ. ಮದುವೆ ಹಣ ಹಾಗೂ ಚಿನ್ನಾಭರಣ ವಾಪಸ್ ಕೊಡಿಸುವಂತೆ ಇದ್ರೀಸ್ ಪೊಲೀಸರಲ್ಲಿ ಮನವಿ ಮಾಡಿದ್ದನಂತೆ. ಇನ್ನೂ ಫಾರ್ಹನಖಾನಂ ರೌಡಿಗಳನ್ನು ಕಳುಹಿಸಿ ಇದ್ರೀಸ್ ಮೇಲೆ ಹಲ್ಲೆ ಸಹ ಮಾಡಿಸಿದ್ದಳು. ಸದ್ಯ ಇದ್ರೀಸ್ ಐಜಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ. ಇನ್ನೂ ಫಾರ್ಹನಖಾನಂ ಗೆ ಮೂರು ನಾಲ್ಕು ಮಂದಿ ಪುರುಷರೊಂದಿಗೆ ಸಂಬಂಧವಿದೆ ಎಂಬ ಆರೋಪ ಸಹ ಕೇಳಿಬಂದಿದೆ.