Lok Sabha: ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮುಂಗಾರು ಅಧಿವೇಶನದ ಕಲಾಪದಲ್ಲಿ ಕೇಂದ್ರ ಬಜೆಟ್ ಕುರಿತಂತೆ ಕೇಂದ್ರ ಸರ್ಕಾರದ ವಿರುದ್ದ ಟೀಕೆ ಮಾಡಿದರು. ಈ ವೇಳೆ ಅವರು ಮಹಾಭಾರತದ ಚಕ್ರವ್ಯೂಹದ ಉದಾಹರಣೆಯನ್ನೂ ಸಹ ನೀಡಿದರು. ಚಕ್ರವ್ಯೂಹದಲ್ಲಿ ಅಭಿಮನ್ಯ ವೀರಮರಣ ಹೊಂದಿದ ಘಟನೆಯನ್ನು ಉಲ್ಲೇಖಿಸಿದರು. ಅಭಿಮನ್ಯವಿನ ರೀತಿಯಲ್ಲಿ ಭಾರತದ ಜನರಿಗೆ ಮಾಡಲಾಗುತ್ತಿದೆ. ಚಕ್ರವ್ಯೂಹ ಕಮಲದ ಆಕಾರದಲ್ಲಿದೆ ಎಂದು ತೀವ್ರ ವಾಗ್ದಾಳಿ ನಡೆಸಿದರು. ಈ ನಡುವೆ ರಾಗ ಆಡಿ ಒಂದು ಮಾತಿಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮುಖ ಮುಚ್ಚಿಕೊಂಡು ನಕ್ಕಿದ ಸನ್ನಿವೇಶ ನಡೆದಿದೆ.
ಸಂಸತ್ ಕಲಾಪದಲ್ಲಿ ರಾಹುಲ್ ಗಾಂಧಿ ಕೇಂದ್ರ ಬಜೆಟ್ ವಿರೋಧಿಸುತ್ತಾ ಕೆಲವೊಂದು ಟೀಕೆಗಳನ್ನು ಮಾಡಿದರು. ಇದೇ ಸಮಯದಲ್ಲಿ ಹಲ್ವಾ ಸಮಾರಂಭದ ಚಿತ್ರವೊಂದನ್ನು ತೋರಿಸಿದರು. ಬಜೆಟ್ ಹಲ್ವಾ ಹಂಚಲಾಗುತ್ತಿದೆ. ಈ ಚಿತ್ರದಲ್ಲಿ ಒಬ ಒಬಿಸಿ ಅಧಿಕಾರಿಯೂ ಕಾಣಿಸುತ್ತಿಲ್ಲ, ಒಬ್ಬ ಬುಡಕಟ್ಟು ಅಧಿಕಾರಿ, ದಲಿತ ಅಧಿಕಾರಿಯೂ ಕಾಣಿಸುತ್ತಿಲ್ಲ. ದೇಶದ ಹಲ್ವಾ ಹಂಚಲಾಗುತ್ತಿದೆ. ಅದರಲ್ಲಿ ಒಬ್ಬೇ ಒಬ್ಬ ಹಿಂದುಳಿದ ಅಧಿಕಾರಿಯಿಲ್ಲ ಎಂದು ಹಲ್ವಾ ಹಂಚಿಕೆಯ ಪೊಟೋ ತೋರಿಸುತ್ತಿದ್ದರು. ಈ ವೇಳೆ ಲೋಕಸಭಾ ಸ್ಪೀಕರ್ ಇದು ನಿಯಮಕ್ಕೆ ವಿರುದ್ದವಾಗಿದೆ ಎಂದು ಪೊಟೋ ತೋರಿಸುವುದನ್ನು ತಡೆಹಿಡಿದರು. ಈ ಸಮಯದಲ್ಲಿ ರಾಹುಲ್ ಗಾಂಧಿ ಹಲ್ವಾ ಪೊಟೋ ತೋರಿಸಿದ ಆಡಿದ ಮಾತುಗಳಿಗೆ ನಿರ್ಮಲಾ ಸೀತಾರಾಮನ್ ಮುಖಕ್ಕೆ ಕೈ ಇಟ್ಟುಕೊಂಡು ನಗಾಡಿದರು.
https://x.com/ANI/status/1817852378198274537
ಬಳಿಕ ಸದನದಲ್ಲಿ ಗಲಾಟೆ ಸಹ ಶುರುವಾಯ್ತು. ಗದ್ದಲದ ನಡುವೆಯೇ ರಾಹುಲ್ ಗಾಂಧಿ ಭಾಷಣ ಮುಂದುವರೆಸಿದರು. ಸಾರ್ ನೀವು ಹಲ್ವಾ ತಿನ್ನುತ್ತಿದ್ದೀರಿ. ಉಳಿದವರಿಗೆ ಅದು ಸಿಗ್ತಾ ಇಲ್ಲ. 20 ಅಧಿಕಾರಿಗಳು ಬಜೆಟ್ ಸಿದ್ದಪಡಿಸಿದ್ದಾರೆ ಎಂದು ನಾವು ಕಂಡುಕೊಂಡಿದ್ದೇವೆ. ನಾನು ಆ ಅಧಿಕಾರಿಗಳ ಹೆಸರನ್ನು ಸಹ ನೀಡುತ್ತೇನೆ ಎಂದರು. ಬಳಿಕ ಈ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ರಾಗಾ ಇಂದು ನಾನು ಸಂಸತ್ತಿನ ಕಲಾಪದಲ್ಲಿ ಜಾತಿ ಗಣತಿ ವಿಷಯವನ್ನು ಪ್ರಸ್ತಾಪಿಸಿದಾಗ ಹಣಕಾಸು ಸಚಿವರು ನಗ್ತಾ ಇದ್ದರು. ಗಂಭೀರ ವಿಷಯವನ್ನು ಪ್ರಸ್ತಾಪಿಸಿದಾಗ ಲೇವಡಿ ಮಾಡಿದರು. ದೇಶದ 90 ರಷ್ಟು ಜನಸಂಖ್ಯೆಯ ಜೀವನಕ್ಕೆ ಸಂಬಂಧಿಸಿದ ಪ್ರಮುಖ ವಿಷಯಕ್ಕೆ ಇಂತಹ ಪ್ರತಿಕ್ರಿಯೆ ಸಿಕ್ಕಿದೆ. ಇದು ಬಿಜೆಪಿಯವರ ಮನಸ್ಥಿತಿ, ಉದ್ದೇಶಗಳನ್ನು ಬಹಿರಂಗಪಡಿಸಿದೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.