Local News – ಎಲ್ಲಾ ವೃತ್ತಿಗಳಲ್ಲಿ ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದುದು, ಈ ವೃತ್ತಿಯನ್ನು ಪ್ರಮಾಣಿಕವಾಗಿ ನಿರ್ವಹಿಸದಾಗ ಎಲ್ಲಾ ಕಡೆ ಗೌರವ ಸಲ್ಲುತ್ತದೆ, ಇದಕ್ಕೆ ಗುಡಿಬಂಡೆ ಪಟ್ಟಣದ ಪಿಎಂ ಶ್ರೀ ಶಾಲೆಯ ಮುಖ್ಯ ಶಿಕ್ಷಕ ಎಂ.ಶಂಕರ್ ರವರೇ ಉತ್ತಮ ಉದಾಹರಣೆ ಎಂದು ಪಪಂ ನಾಮಿನಿ ಸದಸ್ಯ ಅಂಬರೀಶ್ ತಿಳಿಸಿದರು.

Local News – ಪ್ರಮಾಣಿಕ ಸೇವೆಗೆ ಸಂದ ಗೌರವ: ಅಂಬರೀಶ್ ಮಾತು
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ನ್ಯೂ ವಿಷನ್ ಪಬ್ಲಿಕ್ ಶಾಲೆಯಲ್ಲಿ ಪಿಎಂ ಶ್ರೀ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎಂ.ಶಂಕರ್ ರವರಿಗೆ ರಾಜ್ಯ ಮಟ್ಟದ ವಾಲ್ಮೀಕಿ ರತ್ನ ಪ್ರಶಸ್ತಿ ಬಂದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ಸಾಧಕನ ಹಿಂದೆ ಓರ್ವ ಶಿಕ್ಷಕ ಇರುತ್ತಾನೆ. ಒಬ್ಬ ಶಿಕ್ಷಕನಿಂದ ಏನು ಬೇಕಾದರೂ ಬದಲಾವಣೆ ಮಾಡಲು ಸಾಧ್ಯ. ಅಂತಹ ಶಿಕ್ಷಕರು ತಮ್ಮ ಕರ್ತವ್ಯವನ್ನು ಪ್ರಮಾಣಿಕವಾಗಿ ನಿರ್ವಹಿಸಿದಾಗ ಎಲ್ಲರಲ್ಲೂ ಗೌರವ ಸಿಗುತ್ತದೆ.
Local News – ಶಿಕ್ಷಕ ಶಂಕರ್ ರವರಿಗೆ ಮತ್ತಷ್ಟು ಪ್ರಶಸ್ತಿಗಳು ದೊರಯಲಿ
ಇದಕ್ಕೆ ಉತ್ತಮ ಉದಾಹರಣೆ ಎಂಬಂತೆ ಗುಡಿಬಂಡೆ ಪಟ್ಟಣದ ಪಿಎಂ ಶ್ರೀ ಶಾಲೆಯ ಮುಖ್ಯ ಶಿಕ್ಷಕ ಎಂ.ಶಂಕರ್ ರವರು ಸುಮಾರು ವರ್ಷಗಳಿಂದ ತಾಲೂಕಿನಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಸವಾಲಿರುವಂತಹ ಶಾಲೆಗಳಲ್ಲಿಯೇ ಕೆಲಸ ಮಾಡಿ ಆ ಶಾಲೆಯ ಅಭಿವೃದ್ದಿಗೆ ಶ್ರಮಿಸುತ್ತಿದ್ದಾರೆ. ಅವರ ಸೇವೆಗೆ ಈಗಾಗಲೇ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಇದೀಗ ದೊಡ್ಡಬಳ್ಳಾಪುರದಲ್ಲಿ ಇತ್ತೀಚಿಗೆ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ವಾಲ್ಮೀಕಿ ರತ್ನ ಪ್ರಶಸ್ತಿ ಪಡೆದುಕೊಂಡು ತಾಲೂಕಿನ ಕೀರ್ತಿ ಹೆಚ್ಚಿಸಿದ್ದಾರೆ. ಅವರ ಸೇವೆಗೆ ಮತ್ತಷ್ಟು ಪ್ರಶಸ್ತಿಗಳು, ಗೌರವ ಸಿಗಲಿ ಎಂದು ಶುಭ ಹಾರೈಸಿದರು.
Read this also : ಅಮರಾವತಿ ಅಮರೇಶ್ವರ ದೇಗುಲದಲ್ಲಿ 3 ರಾತ್ರಿ ಇರಬೇಕು ಅನ್ನೋದು ಯಾಕೆ ಗೊತ್ತಾ? ಮೋಕ್ಷ ನೀಡುವ ಗುಟ್ಟು ಇಲ್ಲಿದೆ!

Local News – ಸ್ವಂತ ಖರ್ಚಿನಲ್ಲಿ ಶಾಲೆಗಳ ಅಭಿವೃದ್ಧಿ
ಬಳಿಕ ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿಕ್ಷಕ ಎಂ.ಶಂಕರ್, ನಾನು ಕರ್ತವ್ಯಕ್ಕೆ ಸೇರಿದಾಗಿನಿಂದ ಶಿಕ್ಷಕ ವೃತ್ತಿಗೆ ನ್ಯಾಯ ಸಲ್ಲಿಸಿದ್ದೇನೆ. ನನ್ನ ಕೈಯಲಾದಷ್ಟು ಸ್ವಂತ ಹಣದಿಂದ ಶಾಲೆಗಳನ್ನು ಅಭಿವೃದ್ದಿ ಮಾಡಿದ್ದೇನೆ. ಕೋವಿಡ್ ಸಮಯದಲ್ಲಿ ಸಿಕ್ಕ ಸಮಯವನ್ನು ಬಳಸಿಕೊಂಡು ತಾಲೂಕಿನ ಬೀಚಗಾನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಅಭಿವೃದ್ದಿಗೊಳಿಸಿದ್ದೇನೆ. ಗೋಡೆಗಳಿಗೆ ಸ್ವತಃ ನಾನೇ ವಿವಿಧ ಕಲಾಕೃತಿಗಳನ್ನು ಬಿಡಿಸಿ ಸುಂದರವಾಗಿ ಬದಲಿಸಿದ್ದೇನೆ. ಜೊತೆಗೆ ಶಾಲೆಯ ಆವರಣದಲ್ಲಿ ಹಸಿರು ವನ ಮಾಡಿದ್ದೇನೆ. ನನ್ನ ಈ ಎಲ್ಲಾ ಕೆಲಸಗಳನ್ನು ಮೆಚ್ಚಿ ಇದೀಗ ವಾಲ್ಮೀಕಿ ರತ್ನ ಪ್ರಶಸ್ತಿ ದೊರೆತಿದ್ದು, ಇದು ಎಲ್ಲರ ಸಹಕಾರದಿಂದ ಬಂದಿದೆ ಎಂದು ಹೇಳುತ್ತೇನೆ. ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದಿಂದ ಮತ್ತಷ್ಟು ಸೇವೆ ಮಾಡುತ್ತೇನೆ ಎಂದರು.

Local News – ಶುಭ ಹಾರೈಸಿದ ಗಣ್ಯರು
ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಮುನಿಕೃಷ್ಣಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಾಲಾಜಿ, ನಿವೃತ್ತ ಉಪನ್ಯಾಸಕ ಬಿ.ಅಮೀರ್ ಜಾನ್, ನೌಕರರ ಸಂಘದ ಎ.ಕೃಷ್ಣಪ್ಪ, ಪಪಂ ಮಾಜಿ ಅಧ್ಯಕ್ಷ ರಿಯಾಜ್ ಸೇರಿದಂತೆ ಹಲವರು ಮಾತನಾಡಿದರು. ಈ ಸಮಯದಲ್ಲಿ ಪಪಂ ಅಧ್ಯಕ್ಷ ವಿಕಾಸ್, ವಾಲ್ಮೀಕಿ ಸಂಘದ ಗಂಗಾಧರ್, ಗುಂಪು ಮರದ ಆನಂದ್, ಶಿಕ್ಷಕರಾದ ಶ್ರೀರಾಮರೆಡ್ಡಿ, ರಾಮಾಂಜಿನೇಯ, ವಿಜಯ್ ಸೇರಿದಂತೆ ಹಲವರು ಇದ್ದರು.
