Local News – ವೈದ್ಯಕೀಯ ವೆಚ್ಚದ ಅನುದಾನ ಬಿಡುಗಡೆ ಸೇರಿದಂತೆ ಶಿಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕು ಘಟಕದ ವತಿಯಿಂದ ಗುಡಿಬಂಡೆ ಬಿಇಒ ಕೃಷ್ಣಕುಮಾರಿ ರವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.
Local News – ಬೋಧನೆಗಿಂತ ಬೇರೆ ಕೆಲಸಗಳೇ ಹೆಚ್ಚು
ಈ ವೇಳೆ ಸರ್ಕಾರಿ ನೌಕರರ ಸಂಘ ಗುಡಿಬಂಡೆ ತಾಲೂಕು ಅಧ್ಯಕ್ಷ ಕೆ.ವಿ.ನಾರಾಯಣಸ್ವಾಮಿ ಮಾತನಾಡಿ, ಇಂದು ಶಿಕ್ಷಕರಿಗೆ ಪಾಠ ಮಾಡುವುದಕ್ಕಿಂತ ಬೇರೆ ಕೆಲಸಗಳೇ ಹೆಚ್ಚಾಗಿದೆ. ಇದರಿಂದ ಶಿಕ್ಷಕರು ಮಕ್ಕಳಿಗೆ ಸರಿಯಾಗಿ ಪಾಠ ಮಾಡಲು ಸಾಧ್ಯವಾಗುತ್ತಿಲ್ಲ. ಜೊತೆಗೆ ಇತ್ತೀಚಿಗೆ ಆನ್ ಲೈನ್ ಕೆಲಸಗಳು ಸಹ ಹೆಚ್ಚಾಗಿದ್ದು, ಕಂಪ್ಯೂಟರ್ ಜ್ಞಾನ ತಿಳಿಯದ ಶಿಕ್ಷಕರಿಗೆ ಸಮಸ್ಯೆಯಾಗಿದೆ ಇದರಿಂದಾಗಿ ಮಾನಸಿಕವಾಗಿಯೂ ಸಹ ಶಿಕ್ಷಕರು ತುಂಬಾನೆ ಸಮಸ್ಯೆ ಎದುರಿಸುತ್ತಿದ್ದಾರೆ. ಆದ್ದರಿಂದ ಕನಿಷ್ಟ ಕ್ಲಸ್ಟರ್ ಒಬ್ಬರಂತೆ ಕಂಪ್ಯೂಟರ್ ಆಪರೇಟರ್ ಗಳನ್ನು ನೇಮಕ ಮಾಡಿಕೊಳ್ಳಬೇಕಿದೆ. ವೈದ್ಯಕೀಯ ವೆಚ್ಚ ಸಹ ಇನ್ನೂ ಹಲವು ಶಿಕ್ಷಕರಿಗೆ ದೊರೆತಿಲ್ಲ. ಆದ್ದರಿಂದ ಸರ್ಕಾರ ನಮ್ಮೆಲ್ಲಾ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಮನವಿ ಮಾಡಿದರು.
Local News – ಬೇರೆ ಕೆಲಸಗಳ ಒತ್ತಡದ ನಡುವೆ ಮಕ್ಕಳಿಗೆ ಪಾಠ ಮಾಡೋದು ಯಾವಾಗ?
ಬಳಿಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗುಡಿಬಂಡೆ ತಾಲೂಕು ಅಧ್ಯಕ್ಷ ಬಾಲಾಜಿ ಮಾತನಾಡಿ, ಈಗಾಗಲೇ ಶಿಕ್ಷಕರಿಗೆ ಶಿಕ್ಷಣ ಬಿಟ್ಟು ಬೇರೆ ಕರ್ತವ್ಯಗಳ ಜವಾಬ್ದಾರಿಯನ್ನು ಹೊರೆಸಿದ್ದಾರೆ. ಅದರಲ್ಲೂ ಪ್ರಮುಖವಾಗಿ ಬಿಸಿಯೂಟ ನಿರ್ವಹಣೆ, ದಾಖಲೆಗಳ ನಿರ್ವಹಣೆ, ವಿದ್ಯಾರ್ಥಿಗಳ ಮಾಹಿತಿ ಗಣೀಕಿಕರಣ ವ್ಯವಸ್ಥೆ ಮೊದಲಾದ ಕೆಲಸಗಳಿಂದ ಶಿಕ್ಷಕರು ಪಾಠ ಪ್ರವಚನಗಳನ್ನು ಮಾಡಲು ಆಗುತ್ತಿಲ್ಲ. ಜೊತೆಗೆ ಬಿಸಿಯೂಟ ಯೋಜನೆಯಡಿ ಮಕ್ಕಳಿಗೆ ಮೊಟ್ಟೆ ಅಥವಾ ಬಾಳೆಹಣ್ಣು ವಿತರಣೆ ಮಾಡಲು ತುಂಬಾನೆ ಕಷ್ಟವಾಗುತ್ತಿದ್ದು, ಇದರನ್ನು ಏಜೆನ್ಸಿಯವರಿಗೆ ನೀಡಿದರೇ ಶಿಕ್ಷಕರಿಗೆ ಮತ್ತಷ್ಟು ಅನುಕೂಲವಾಗಲಿದೆ ಎಂದರು.
Local News – ಪ್ರಮುಖ ಬೇಡಿಕೆಗಳು
ಶಿಕ್ಷಕರಿಗೆ ನೀಡಲು ಬಾಕಿಯಿರುವ ವೈದ್ಯಕೀಯ ವೆಚ್ಚದ ಅನುದಾನವನ್ನು ಬಿಡುಗಡೆ ಮಾಡಿಸುವುದು, ಬಿ.ಎಲ್.ಒ ಜವಾಬ್ದಾರಿಯಿಂದ ಶಿಕ್ಷಕರನ್ನು ಹೊರಗಿಡುವುದು, ಶಾಲೆಗೆ ಸಂಬಂಧಿಸಿದಂತೆ ಆನ್ ಲೈನ್ ಕಾರ್ಯಗಳನ್ನು ನಿರ್ವಹಿಸಲು ಕಂಪ್ಯೂಟರ್ ಆಪರೇಟರ್ ಸೇವೆ ನೀಡುವುದು, ವಿಮೆ ಸೌಲಭ್ಯ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಪತ್ರವನ್ನು ಸಲ್ಲಿಸಲಾಯಿತು.
Read this also : ಕಣ್ಣಿನ ಪವರ್ ಹೆಚ್ಚಿಸಲು ಸುಲಭ ಮಾರ್ಗ, ಕಣ್ಣಿನ ಆರೋಗ್ಯಕ್ಕೆ ಬೇಕಾದ 10 ಆಹಾರಗಳು…!
ಈ ವೇಳೆ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಮುನಿಕೃಷ್ಣಪ್ಪ, ಶಿಕ್ಷಕರ ಸಂಘದ ಕಾರ್ಯದರ್ಶಿ ಶ್ರೀರಾಮಪ್ಪ, ಪದಾಧಿಕಾರಿಗಳಾದ ಮಂಜುನಾಥ್, ರಾಜಶೇಖರ್, ಜಿಪಿಟಿ ಶಿಕ್ಷಕರ ಪದಾಧಿಕಾರಿಗಳಾದ ರಾಮಕೃಷ್ಣ, ಮನೋಹರ, ಆರ್.ಸುಮಿತ್ರ, ಶಿಕ್ಷಕರಾದ ರಾಮಚಂದ್ರ, ನಾರಾಯಣಸ್ವಾಮಿ, ಮುರಳಿ, ಸಿ.ವೈ.ನರಸಿಂಹಪ್ಪ, ರವೀಂದ್ರಗೌಡ, ಜಿ.ವಿ.ನಾಗರಾಜು ಸೇರಿ ಇತರರು ಇದ್ದರು.