Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಸೋಮೇನಹಳ್ಳಿ ಹೋಬಳಿ ವ್ಯಾಪ್ತಿಯ ತಿಮ್ಮಯ್ಯಗಾರ ಹಳ್ಳಿ ಗ್ರಾಮದ ಬಳಿ ಸುಮಾರು 50 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ಚೆಕ್ ಡ್ಯಾಂ ಕಾಮಗಾರಿಯನ್ನು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ರವರು ಲೋಕರ್ಪಣೆಗೊಳಿಸಿದರು.

Local News – 50 ಲಕ್ಷ ವೆಚ್ಚದಲ್ಲಿ ಚೆಕ್ ಡ್ಯಾಂ ನಿರ್ಮಾಣ
ಈ ಸಮಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಿಮ್ಮಯ್ಯಗಾರಹಳ್ಳಿ ಭಾಗದ ಗ್ರಾಮಸ್ಥರಿಗೆ ಈ ಚೆಕ್ ಡ್ಯಾಂ ನಿರ್ಮಾಣ ಅತ್ಯಂತ ಅವಶ್ಯಕವಾಗಿತ್ತು. ತಿಮ್ಮಯ್ಯಗಾರಹಳ್ಳಿ ಹಾಗೂ ಚಿನ್ನೇನಹಳ್ಳಿ ಗ್ರಾಮಸ್ಥರು ಹಾಗೂ ರೈತರು ಮಳೆ ಬಂದಾಗ ತಮ್ಮ ಜಮೀನುಗಳಿಗೆ ಹೋಗಲು ಕಷ್ಟಕರವಾಗಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಕಾಲುವೆಗೆ ಅಡ್ಡಲಾಗಿ ಚೆಕ್ ಡ್ಯಾಂ ನಿರ್ಮಾಣ ಮಾಡಲು ಮನವಿ ಮಾಡಿದ್ದರು. ಅದರಂತೆ ಇದೀಗ 50 ಲಕ್ಷ ವೆಚ್ಚದಲ್ಲಿ ಚೆಕ್ ಡ್ಯಾಂ ನಿರ್ಮಾಣವಾಗಿದ್ದು, ಜನರಿಗೆ ಅನುಕೂಲಕರವಾಗಿದೆ.
ಇನ್ನೂ ಇಲ್ಲಿ ಡ್ಯಾಂ ನಿರ್ಮಾಣವಾಗಿರುವ ಕಾರಣ ಡ್ಯಾಂ ಕೆಳಗಿನ ಭಾಗದ ರೈತರ ಜಮೀನುಗಳಿಗೆ ನೀರು ನುಗ್ಗಿತ್ತಿರುವ ಬಗ್ಗೆ ದೂರು ಬಂದಿದ್ದು, ಈ ಸಂಬಂಧ ನೀರಾವರಿ ಇಲಾಖೆಯ ಅಧಿಕಾರಿಗಳನ್ನು ಕರೆಸಿ ಚರ್ಚಿಸಲಾಗಿದೆ. ರೈತರಿಗೆ ಸಮಸ್ಯೆಯಾಗದಂತೆ ಕ್ರಮ ವಹಿಸುವಂತೆ ಸೂಚನೆ ನೀಡಿದ್ದೇನೆ. ಆದಷ್ಟು ಶೀಘ್ರವಾಗಿ ಕೆಲಸ ಆಗುತ್ತದೆ ಎಂದರು.
Local News – ಹೆಚ್.ಎನ್. ವ್ಯಾಲಿ ವಿಸ್ತರಣೆ ಮತ್ತು ರಸ್ತೆ ಅಭಿವೃದ್ಧಿಗೆ ಪ್ಲಾನ್!
ಇನ್ನೂ ಇದೇ ಸಮಯದಲ್ಲಿ ಹೆಚ್.ಎನ್.ವ್ಯಾಲಿ ಯೋಜನೆಯ ಕುರಿತು ಮಾತನಾಡಿ, ಸದ್ಯ ಗುಡಿಬಂಡೆ ತಾಲೂಕಿನಲ್ಲಿ ಮೂರು ಕೆರೆಗಳು ಈ ಯೋಜನೆಗೆ ಒಳಪಟ್ಟಿದೆ. ಮತ್ತಷ್ಟು ಕೆರೆಗಳಿಗೆ ಈ ನೀರು ಹರಿಸುವ ಯೋಜನೆ ಮಾಡಲಾಗುತ್ತಿದೆ. ಪೆಸಲಪರ್ತಿ ಎಂಬ ಗ್ರಾಮದ ಬಳಿಯಿರುವ ಅಮಾನಿ ಬೈರ ಸಾಗರ ಕೆರೆಯ ಮೂಲಕ ಗುಡಿಬಂಡೆಯ ಬೀಚಗಾನಹಳ್ಳಿ ಗ್ರಾಮದ ಮೂಲಕ ಮತ್ತಷ್ಟು ಕೆರೆಗಳಿಗೆ ಹೆಚ್.ಎನ್. ವ್ಯಾಲಿ ನೀರನ್ನು ಹರಿಸಲು ಪ್ಲಾನ್ ಮಾಡಲಾಗುತ್ತಿದೆ. ಇದೇ ತಿಂಗಳ 18 ರಂದು ನೀರಾವರಿ ಸಚಿವ ಬೋಸ್ ರಾಜ್ ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ. ಈ ಸಂಬಂಧ ಅವರನ್ನು ಸಂಪರ್ಕ ಮಾಡಿ ಈ ಯೋಜನೆಯನ್ನು ಅನುಷ್ಟಾನಗೊಳಿಸುತ್ತೇನೆ.

ಇನ್ನೂ ವರ್ಲಕೊಂಡ ಗ್ರಾಮದ ಹೆದ್ದಾರಿಯಿಂದ ಮುದ್ದರೆಡ್ಡಿಹಳ್ಳಿ ಗ್ರಾಮದಿಂದ ಗಂಗಾನಹಳ್ಳಿ ಗ್ರಾಮದ ವರೆಗಿನ ರಸ್ತೆ ಅಭಿವೃದ್ದಿ ಕಾಮಗಾರಿ ಸುಮಾರು 5 ಕೋಟಿ ವೆಚ್ಚದಲ್ಲಿ ನಡೆಯುತ್ತಿದೆ. ಆದಷ್ಟು ಶೀಘ್ರವಾಗಿ ತಾಲೂಕಿನಲ್ಲಿರುವ ಹದೆಗೆಟ್ಟ ರಸ್ತೆಗಳನ್ನು ಸರಿಪಡಿಸುವ ಕೆಲಸ ಕೈಗೆತ್ತಿಕೊಳ್ಳುತ್ತೇನೆ ಎಂದರು. Read this also : ಗೃಹಲಕ್ಷ್ಮಿ ಫಲಾನುಭವಿಗಳಿಗೆ ಬಂಪರ್ ಗುಡ್‌ನ್ಯೂಸ್: 3 ಲಕ್ಷ ರೂ.ವರೆಗೆ ಸಾಲ, ‘ಗೃಹಲಕ್ಷ್ಮಿ ಬ್ಯಾಂಕ್’ ಉದ್ಘಾಟನೆಗೆ ಮುಹೂರ್ತ ಫಿಕ್ಸ್!
Local News – ಶಾಸಕರಿಂದ ಬಾಗೀನ ಅರ್ಪಣೆ
ಈ ಸಮಯದಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಚೆಕ್ ಡ್ಯಾಂ ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಶಾಸಕ ಸುಬ್ಬಾರೆಡ್ಡಿ ಸೇರಿದಂತೆ ಸ್ಥಳೀಯರು ಬಾಗೀನ ಅರ್ಪಿಸಿದರು. ಈ ವೇಳೆ ಸ್ಥಳೀಯ ಮುಖಂಡರಾದ ಕೃಷ್ಣೇಗೌಡ, ಆದಿನಾರಾಯಣರೆಡ್ಡಿ, ಮಂಜುನಾಥ್ ಸೇರಿದಂತೆ ಹಲವರು ಇದ್ದರು.
