Saturday, November 15, 2025
HomeStateLocal News : ನಿರ್ದಿಷ್ಟ ಗುರಿ, ಚಲದಿಂದ ಓದಿ, ಉತ್ತಮ ಸಾಧನೆ ಮಾಡಿ ನಾಡಿಗೆ ಕೀರ್ತಿ...

Local News : ನಿರ್ದಿಷ್ಟ ಗುರಿ, ಚಲದಿಂದ ಓದಿ, ಉತ್ತಮ ಸಾಧನೆ ಮಾಡಿ ನಾಡಿಗೆ ಕೀರ್ತಿ ತನ್ನಿ: ಶಾಸಕ ಸುಬ್ಬಾರೆಡ್ಡಿ

Local News – ಹೆಚ್ಚು ಜನ ವಿಧ್ಯಾರ್ಥಿಗಳು ಗ್ರಾಮೀಣ ಭಾಗಗಳಿಂದ ಕಾಲೇಜಿಗೆ ಬರುತ್ತೀರಿ. ಒಂದು ಗುರಿಯನ್ನು ಇಟ್ಟುಕೊಂಡು ವಿಧ್ಯಾಭ್ಯಾಸವನ್ನು ಮಾಡಿ ಅಧಿಕಾರಿಗಳಾಗಿ ಈ ಭಾಗದಲ್ಲಿ ಬಂದು ಕೆಲಸ ಮಾಡಿ ಇದರ ಋಣವನ್ನು ತೀರಿಸಿ ಎಂದು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಎಸ್ ಎನ್ ಸುಬ್ಬಾರೆಡ್ಡಿಯವರು ವಿಧ್ಯಾರ್ಥಿಗಳಿಗೆ ಸಲಹೆಯನ್ನು ನೀಡಿದರು.

MLA S. N. Subbareddy addressing students during the book launch of ‘Searching for Birsa Munda’ at Gudibande Government First Grade College - Local News

Local News – ಮಹಾನ್ ನಾಯಕರ ಬಗ್ಗೆ ತಿಳಿದುಕೊಳ್ಳಿ

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಡಾ ಕೆ ಎಂ ನಯಾಜ್ ಅಹ್ಮದ್ ರವರ ಬಿರ್ಸಾ ಮುಂಡಾ ರನ್ನ ಹುಡುಕುತ್ತಾ ಸಂಶೋಧನಾ ಕೃತಿ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಬಿರ್ಸಾ ಮುಂಡಾರವರು ಯಾರು ಎಂದು ಇದುವರೆಗೂ ನನಗೆ ಗೊತ್ತಿಲ್ಲ .ಇವರ ಕೃತಿ ಯಿಂದ ಇವರನ್ನು ತಿಳಿದುಕೊಳ್ಳುವಂತೆ ಆಯಿತ್ತು. ವಿಧ್ಯಾರ್ಥಿಗಳು ಇಂತಹ ಮಹಾನ್ ನಾಯಕರನ್ನು ಹೆಚ್ಚು ಹೆಚ್ಚು ಓದಿ ಅಧ್ಯಾಯನ ಮಾಡಿ ವಿಚಾರಗಳನ್ನು ತಿಳಿದುಕೊಳ್ಳುವಂತೆ ಆಗಬೇಕಾಗಿದೆ. ವಿಧ್ಯಾರ್ಥಿಗಳ ಶೈಕ್ಷಣಿಕ ಅವಧಿಯಲ್ಲಿ ಒಂದು ಗುರಿಯನ್ನು ಇಟ್ಟುಕೊಂಡು ಓದಿ ಕಾಟಾಚಾರಕ್ಕೆ ಓದಬೇಡಿ ಎಂದು ವಿಧ್ಯಾರ್ಥಿಗಳಿಗೆ ಮನವರಿಕೆಯನ್ನುಮಾಡಿಕೊಟ್ಟರು.

Local News – ಬುಡಕಟ್ಟು ಜನರ ಮುಕ್ತಿಗಾಗಿ ಹೋರಾಡಿದ ಬಿರ್ಸಾ ಮುಂಡಾ

ನಂತರ ಡಾ.ನಯಾಜ್ ಅಹ್ಮದ್ ಮಾತನಾಡಿ, ಜಾರ್ಖಾಂಡ್ ರಾಜ್ಯದಲ್ಲಿ ಬುಡಕಟ್ಟು ಜನರ ಅಭಿವೃದ್ಧಿ ಹಾಗೂ ಅವರು ಸ್ವಾತಂತ್ರ್ಯರಾಗಿ ಬದುಕಲು ಹೋರಾಟವನ್ನು ಮಾಡಿದ್ದಂತವರು. ಜಾರ್ಖಾಂಡ್ ರಾಜ್ಯ ದೇಶದ ಬಡತನದಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ .ಮೊದಲನೇ ಸ್ಥಾನವನ್ನು ಬಿಹಾರ ಪಡೆದುಕೊಂಡಿದೇ. ಹೆಚ್ಚು ಭ್ರಷ್ಟಾಚಾರ ಇರುವಂತಹ ರಾಜ್ಯ ಯಾವುದಾದರು ಇದೇ ಅಂದರೇ ಅದು ಬಿಹಾರ ಮಾತ್ರ . ಒಂದು ಕೋಟಿ ಯಷ್ಟು ಸರ್ಕಾರಿ ಉದ್ಯೋಗಗಳು ಖಾಲಿ ಇವೆ ಅಲ್ಲಿ ಅಷ್ಟು ದೊಡ್ಡ ಮಟ್ಟದಲ್ಲಿ ಉದ್ಯೋಗದ ಅಭದ್ರತೆ ಕಾಡುತ್ತಿದೆ. ನಮ್ಮ ರಾಜ್ಯದಲ್ಲಿ ಅನೇಕ ರೀತಿಯ ಉದ್ಯೋಗಗಳಲ್ಲಿ 4 ಲಕ್ಷ 50 ಸಾವಿರ ಜನ  ಬಿಹಾರದವರು ಇದ್ದಾರೆ. ಇಲ್ಲಿ ಅಭಿವೃದ್ಧಿಯಾಗಿಲ್ಲ ಎಂದು ಟೀಕೆ ಮಾಡುವರರನ್ನು ಪಟ್ಟಿ ಮಾಡಿಕೊಡಿ ಅಂತವರನ್ನು ನಾನು ಬಿಹಾರ್ ಗೆ ಕರೆದುಕೊಂಡು ಹೋಗಿ ತೋರಿಸಿಕೊಂಡು ಬರುತ್ತೇನೆ. ಆ ಉತ್ತರ ಭಾರತದ  ರಾಜ್ಯಗಳಿಗೆ ನಮ್ಮನ್ನು ಹೋಲಿಸದರೇ 200 ವರ್ಷಗಳಷ್ಟು ಮುಂದೆ ಅಭಿವೃದ್ಧಿ ಯಾಗಿದ್ದೇವೆ ಎಂದರು.

ಬಿರ್ಸಾ ಮುಂಡಾ ರವರು 150ನೇ ಜನ್ಮ ದಿನಾಚರಣೆಯು ಇಂದು ಆಗಿದೆ ಹಾಗಾಗಿ ನಾನು ಅವರ ವಿಚಾರದ ಕೃತಿ ಯನ್ನು ಇಂದು ಬಿಡುಗಡೆ ಮಾಡಲಾಗಿದೆ. ಇವರು ಬುಡಕಟ್ಟು ಜನಾಂಗದವರ ಮುಕ್ತಿಗಾಗಿ ಹೋರಾಟವನ್ನು ಮಾಡಿದವರು.ಈ ಕೃತಿ ಯಿಂದ ಅವರ ವಿಚಾರಗಳು ಜನರು ಮತ್ತಷ್ಟು ತಿಳಿದುಕೊಳ್ಳುವಂತೆ ಆಗಲಿ ಎಂದು ಆಶಯವನ್ನು ವ್ಯಕ್ತಪಡಿಸಿದರು.

MLA S. N. Subbareddy addressing students during the book launch of ‘Searching for Birsa Munda’ at Gudibande Government First Grade College - Local News

Local News – ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಗಣ್ಯರ ಉಪಸ್ಥಿತಿ

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಕೆ.ಎಂ.ನಯಾಜ್ ಅಹ್ಮದ್‍ ರಚಿಸಿದ ‘ಬಿರ್ಸಾ ಮುಂಡಾನನ್ನು ಹುಡುಕುತ್ತಾ’ ಎಂಬ ಸಂಶೋಧನಾ ಕೃತಿಯನ್ನು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಹಾಗೂ ಗಣ್ಯರು ಬಿಡುಗಡೆ ಮಾಡಿದರು. Read this also : KVS ನಲ್ಲಿ 14,967 ಬೋಧಕ & ಬೋಧಕೇತರ ಹುದ್ದೆಗಳ ನೇಮಕಾತಿ! ಕೂಡಲೇ ಅರ್ಜಿ ಸಲ್ಲಿಸಿ…!

ಈ  ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ. ಮಂಜುನಾಥ, ಕಾಲೇಜಿನ ಪ್ರಾಂಶುಪಾಲ   ಅಬ್ಜಲ್ ಬಿಜಲಿ, ತಹಶೀಲ್ದಾರ್ ಸಿಗ್ಬತ್ ವುಲ್ಲಾ, ಇಒ ನಾಗಮಣಿ, ವೈ ನಾರಾಯಣನ್, ಸಿಡಿಪಿಒ ರಫೀಕ್, ಹಿರಿಯ ವಕೀಲ ಎಂ ಜಿ ಸುಧಾಕರ್, ಅರಕ್ಷಕ ವೃತ್ತ ನಿರೀಕ್ಷಕ ಮುನಿಕೃಷ್ಣ, ಚಿನ್ನ ಕೈವಾರಮ್ಯ, ಅದಿರೆಡ್ಡಿ, ಡಿ ಎನ್ ಕೃಷ್ಣಾರೆಡ್ಡಿ, ಶಿವಪ್ಪ, ಸಾಹಿತಿ ವೆಂಕಟಚಲಯ್ಯ, ಸನ ನಾಗೇಂದ್ರ, ಪ್ರಕಾಶ್, ಕೃಷ್ಣೇಗೌಡ, ಸುಲೇಮಾನ್, ಹೆಚ್.ಪಿ. ಲಕ್ಷ್ಮೀನಾರಾಯಣ ಸೇರಿದ್ದಂತೆ ಕಾಲೇಜಿನ ಉಪನ್ಯಾಸಕರು ಸಿಬ್ಬಂದಿವರ್ಗದವರ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular