Saturday, October 25, 2025
HomeStateLocal News : ಕಿತ್ತೂರು ರಾಣಿ ಚೆನ್ನಮ್ಮ ನವರ ಧೈರ್ಯ ಸಾಹಸಗಳು ಮಹಿಳೆಯರಿಗೆ ಮಾದರಿ :...

Local News : ಕಿತ್ತೂರು ರಾಣಿ ಚೆನ್ನಮ್ಮ ನವರ ಧೈರ್ಯ ಸಾಹಸಗಳು ಮಹಿಳೆಯರಿಗೆ ಮಾದರಿ : ಪರಿಮಳ

Local News – ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟದ ಕಹಳೆಯನ್ನು ಊದಿ ಹೋರಾಡಿದ ವೀರವನಿತೆ ಕಿತ್ತೂರ ರಾಣಿ ಚೆನ್ನಮ್ಮ ಕರ್ನಾಟಕದ ಹೆಮ್ಮೆಯ ಪುತ್ರಿ, ಅವರ ಧೈರ್ಯ ಸಾಹಸಗಳು ಇಂದಿನ ಮಹಿಳೆಯರಿಗೆ ಮಾದರಿ ಹಾಗೂ ಆದರ್ಶವಾಗಿದೆ ಎಂದು ಗುಡಿಬಂಡೆ ನ್ಯೂ ವಿಷನ್ ಶಾಲೆಯ ಮುಖ್ಯ ಶಿಕ್ಷಕಿ ಡಿ.ಎಲ್.ಪರಿಮಳ ತಿಳಿಸಿದರು.

Kittur Rani Chennamma Jayanti Celebration in Gudibande - Local News

Local News – ಕಿತ್ತೂರು ರಾಣಿ ಚೆನ್ನಮ್ಮ ವೀರಮಹಿಳೆ

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಅವರು, ಸ್ತ್ರೀಯರು ಯಾವ ಕ್ಷೇತ್ರದಲ್ಲಾದರೂ ಸಾಧನೆ ಮಾಡಬಹುದು ಎಂಬುದಕ್ಕೆ ವೀರನಾರಿ ಕಿತ್ತೂರು ರಾಣಿ ಚೆನ್ನಮ್ಮ ಪ್ರೇರಣೆಯಾಗಿದ್ದಾರೆ. ಕಿತ್ತೂರು ರಾಣಿ ಚನ್ನಮ್ಮ ಬ್ರಿಟಿಷರ ವಿರುದ್ಧ ಸಿಡಿದೆದ್ದು ಅವರ ಅಟ್ಟಹಾಸವನ್ನು ಮಟ್ಟ ಹಾಕಿದ ವೀರಮಹಿಳೆ ಎಂದರೇ ತಪ್ಪಾಗಲಾರದು.

Read this also : ಜಾಗದಲ್ಲಿ ಫೋನ್ ಚಾರ್ಜ್ ಮಾಡ್ತೀರಾ? ನಿಮ್ಮ ಡೇಟಾ ಕಳ್ಳರ ಪಾಲಾಗಬಹುದು!

ಸುಮಾರು ೨೦೦ ವರ್ಷಗಳ ಕಾಲ ನಮ್ಮ ದೇಶವನ್ನು ಆಳಿ, ನಮ್ಮ ಸಂಪತ್ತನ್ನು ದೋಚಿ, ನಮ್ಮನ್ನು ಗುಲಾಮರಂತೆ ಕಾಣುತ್ತಿದ್ದ ಬ್ರೀಟಿಷರನ್ನು ದೇಶ ಬಿಟ್ಟು ತೊಲಗಿಸಲು ಸ್ವಾತಂತ್ರ್ಯ ಕಹಳೆ ಮೊಳಗಿಸಿದ ಮಹಾನ್ ವ್ಯಕ್ತಿಗಳಲ್ಲಿ ಚೆನ್ನಮ್ಮ ಅಗ್ರಗಣ್ಯರಾಗಿದ್ದಾರೆ. ಬ್ರೀಟಿಷರ ವಿರುದ್ದದ ಹೋರಾಟದಲ್ಲಿ ಚೆನ್ನಮ್ಮನವರ ಜೊತೆಯಲ್ಲೇ ಇದ್ದಂತಹ ಕೆಲವರು ದುಷ್ಕರ್ಮಿಗಳಿಂದ ಚೆನ್ನಮ್ಮ ಬ್ರೀಟಿಷರ ಸೆರೆಗೆ ಸಿಗಬೇಕಾಯಿತು. ಚೆನ್ನಮ್ಮ ನಂತೆ ಇಂದಿನ ಮಹಿಳೆಯರು ಸಹ ಧೈರ್ಯ ಸಾಹಸಗಳನ್ನು ಮೈಗೂಡಿಸಿಕೊಳ್ಳಬೇಕೆಂದರು.

Local News – ಚೆನ್ನಮ್ಮನವರ ಧೈರ್ಯ ಸಾಹಸ ಎಲ್ಲರಿಗೂ ಮಾದರಿ

ಬಳಿಕ ತಹಸೀಲ್ದಾರ್‍ ಸಿಗ್ಬತ್ತುಲ್ಲಾ ಮಾತನಾಡಿ, ನಾಡಿನ ಹೆಮ್ಮೆಯ ಮಗಳಾದ ಕಿತ್ತೂರ ರಾಣಿ ಚೆನ್ನಮ್ಮಳ ಆದರ್ಶ ಪಾಲಿಸಬೇಕೆಂದರು. ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಆಚರಿಸುವ ಮೂಲಕ ಅವರ ದೇಶ ಪ್ರೇಮ, ಧೈರ್ಯ, ಸಾಹಸಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯವನ್ನು ಮಾಡಬೇಕಿದೆ. ಕಿತ್ತೂರು ರಾಣಿ ಚೆನ್ನಮ್ಮ ಬಾಲ್ಯದಿಂದಲೂ ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳುತ್ತಾಳೆ. ಪುರುಷರಿಗೆ ಸರಿಸಮನಾದ ಕುದುರೆ ಸವಾರಿ ಮತ್ತಿತರೆ ಕೌಶಲ್ಯ ಕಲಿತಿದ್ದಳು. ಸ್ತ್ರೀಯರು ಛಲ ಮತ್ತು ಪ್ರತಿಭೆ ಇದ್ದಲ್ಲಿ ಯಾವ ಕ್ಷೇತ್ರದಲ್ಲಾದರೂ ಸಾಧನೆ ಮಾಡಬಹುದು ಎಂಬುದನ್ನು ಚೆನ್ನಮ್ಮನಿಂದ ನಾವು ಕಲಿಯಬೇಕು ಎಂದರು.

Kittur Rani Chennamma Jayanti Celebration in Gudibande - Local News

Local News – ಕಾರ್ಯಕ್ರಮದಲ್ಲಿ ಹಾಜರಿದ್ದವರು

ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಮುನಿಕೃಷ್ಣಪ್ಪ, ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿಯ ಆದಿರೆಡ್ಡಿ, ಕೃಷಿ ಇಲಾಖೆಯ ಕೇಶವರೆಡ್ಡಿ, ರೇಷ್ಮೆ ಇಲಾಖೆಯ ನಟರಾಜ್, ಪಶು ಇಲಾಖೆಯ ಸುಬ್ರಮಣಿ, ಮುಖಂಡರಾದ ದಪ್ಪರ್ತಿ ನಂಜುಂಡ, ಗಂಗಾಧರಪ್ಪ, ಅಂಬಿಕಾ ಸೇರಿದಂತೆ ಹಲವರು ಇದ್ದರು.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular