Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಯರ್ರಲಕ್ಕೇನಹಳ್ಳಿ ವ್ಯಾಪ್ತಿಯಲ್ಲಿ ನಿವೇಶನ ರಹಿತರರಿಗೆ ನಿವೇಶನ ನೀಡಲು ಕೇವಲ 20 ಗುಂಟೆ ಜಮೀನು ನೀಡಿದ್ದು, ಈ ಜಮೀನು ಸಾಕಾಗುವುದಿಲ್ಲ, ಮತ್ತಷ್ಟು ಜಮೀನು ನೀಡಲು ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ರವರಿಗೆ ಯರ್ರಲಕ್ಕೇನಹಳ್ಳಿ ಗ್ರಾಮಸ್ಥರು ಮನವಿ ಪತ್ರ ಸಲ್ಲಿಸಿದರು.

Local News – ನಿವೇಶನಗಳಿಗೆ ಭೂಮಿ ಸಾಲುತ್ತಿಲ್ಲ
ಈ ವೇಳೆ ಯರ್ರಲಕ್ಕೇನಹಳ್ಳಿ ಗ್ರಾಮಸ್ಥ ಪಾಪಿರೆಡ್ಡಿ ಮಾತನಾಡಿ, ತಾಲೂಕು, ಸೋಮೇನಹಳ್ಳಿ ಹೋಬಳಿ ವ್ಯಾಪ್ತಿಯ ಯರ್ರಲಕ್ಕೇನಹಳ್ಳಿ ಗ್ರಾಮದ ಸರ್ವೆ ನಂಬರ್-119 ರಲ್ಲಿ 20 ಗುಂಟೆ ಜಮೀನನ್ನು ನಿವೇಶನಗಳಿಗಾಗಿ ಕಾಯ್ದಿರಿಸಿದ್ದು, ಕೇವಲ 20 ಗುಂಟೆ ಜಮೀನಿನಲ್ಲಿ ಅರ್ಹ ಫಲಾನುಭವಿಗಳಿಗೆ ನಿವೇಶನಗಳನ್ನು ಹಂಚಿಕೆ ಮಾಡಲು ಸಾಧ್ಯವಾಗುವುದಿಲ್ಲ, ಸುಮಾರು 100 ಕ್ಕು ಹೆಚ್ಚು ಫಲಾನುಭವಿಗಳಿದ್ದು, ಒಬ್ಬರಿಗೆ ನಿವೇಶನ ನೀಡಿದರೆ ಇನ್ನೊಬ್ಬರಿಗೆ ಅನ್ಯಾಯವಾಗುತ್ತದೆ. ಜತೆಗೆ ಗ್ರಾಮದಲ್ಲಿ ಗಲಾಟೆಗಳು ಆಗುವ ಸಾಧ್ಯತೆಗಳಿವೆ.
Local News – ಹೆಚ್ಚುವರಿ ಭೂಮಿಗಾಗಿ ಬೇಡಿಕೆ
ಆದ್ದರಿಂದ ಈಗಾಗಲೇ ಮಂಜೂರು ಮಾಡಿರುವ 20 ಗುಂಟೆ ಜಮೀನನ್ನು ಸಮುದಾಯ ಭವನಕ್ಕೆ ಮಿಸಲಿಟ್ಟು, ಇದೇ ಸೋಮೇನಹಳ್ಳಿ ಹೋಬಳಿ ವ್ಯಾಪ್ತಿಯ ರಾಮಗಾನಹಳ್ಳಿ ಗ್ರಾಮದ ಸರ್ವೆ ನಂಬರ್ 35 ರಲ್ಲಿ ಸುಮಾರು 5 ಎಕರೆಗೂ ಹೆಚ್ಚು ಗೋಮಾಳ ಜಮೀನಿದ್ದು, ಸದರಿ ಜಮೀನಿನಲ್ಲಿ ನಮ್ಮ ಯರ್ರಲಕ್ಕೇನಹಳ್ಳಿ ಗ್ರಾಮಸ್ಥರ ನಿವೇಶನಗಳಿಗಾಗಿ ಕಾಯ್ದಿರಿಸಬೇಕು. ಈಗಾಗಲೇ ಸದರಿ ಜಮೀನು ರಾಜಕೀಯ ಪ್ರಾಭಾವಿತರು ಒತ್ತುವರಿ ಮಾಡಿಕೊಂಡಿದ್ದು ಸಂಬಂಧಿಸಿದ ಅಧಿಕಾರಿಗಳು ಸರ್ಕಾರಿ ಗೋಮಾಳ ಜಮಿನು ಒತ್ತುವರಿ ತೆರವು ಮಾಡಿಸಬೇಕೆಂದು ಒತ್ತಾಯಿಸಿದರು. Read this also : IBPS PO Prelims ಫಲಿತಾಂಶ 2025: ಶೀಘ್ರದಲ್ಲೇ ಪ್ರಕಟ? ಅಭ್ಯರ್ಥಿಗಳಿಗೆ ಇಲ್ಲಿದೆ ಮುಂದಿನ ಹಂತದ ಮಾಹಿತಿ!
Local News – ಅಧಿಕಾರಿಗಳ ಸ್ಪಂದನೆ
ಇನ್ನು ಈ ಬಗ್ಗೆ ತಾ.ಪಂ.ಇಒ ನಾಗಮಣಿ ಪ್ರತಿಕ್ರಯಿಸಿ ಯರ್ರಲಕ್ಕೇನಹಳ್ಳಿ ಗ್ರಾಮಸ್ಥರು ಮನವಿ ಪತ್ರ ನೀಡಿದ್ದು, ಪಂಚಾಯತಿ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದುಕೊಂಡು ಮುಂದಿನ ಕ್ರಮ ಜರುಗಿಸಲಾಗುತ್ತದೆಂದು ತಿಳಿಸಿದರು. ಈ ವೇಳೆ ಯರ್ರಲಕ್ಕೇನಹಳ್ಳಿ ಗ್ರಾಮಸ್ಥರಾದ ಸಿದ್ದಲಿಂಗ, ವೆಂಕಟರೆಡ್ಡಿ, ವೆಂಕಟೇಶ್, ವೆಂಕಟರೋಣಪ್ಪ, ಲಕ್ಷ್ಮಣ, ಗಂಗಿರೆಡ್ಡಿ, ಕುಮಾರ್, ರಾಮಾಣ್ಣ, ಮಂಜು, ಮಂಜುನಾಥ, ವೆಂಕಟರಮಣಪ್ಪ, ಮೂರ್ತಿ , ಚನ್ನಪ್ಪ, ನರಸಿಂಹಪ್ಪ ಸೇರಿ ಇತರರು ಇದ್ದರು.

