Friday, August 1, 2025
HomeStateLocal News : ಗುಡಿಬಂಡೆ ರಾಮಪಟ್ಟಣ ರಸ್ತೆ ಅಗಲೀಕರಣ: 20 ಅಡಿನಾ? 43 ಅಡಿನಾ?

Local News : ಗುಡಿಬಂಡೆ ರಾಮಪಟ್ಟಣ ರಸ್ತೆ ಅಗಲೀಕರಣ: 20 ಅಡಿನಾ? 43 ಅಡಿನಾ?

Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಹೃದಯ ಭಾಗದ ಮೂಲಕ ಹಾದು ಹೋಗುವಂತಹ ರಾಮಪಟ್ಟಣ ರಸ್ತೆ ತುಂಬಾ ಕಿರಿದಾಗಿದ್ದು, ವಾಹನ ಸಂಚಾರ ತುಂಬಾನೆ ಕಷ್ಟಕರವಾಗಿದ್ದು, ರಸ್ತೆ ಅಗಲೀಕರಣ ಎಲ್ಲಾ ಸಿದ್ದತೆಗಳು ನಡೆದಿತ್ತು. ಆದರೆ ಇದೀಗ ಕೆಲವೊಂದು ಕಾರಣಗಳಿಂದ ಇದು ಸ್ಥಗಿತಗೊಂಡಿದ್ದು, ರಸ್ತೆ ಅಗಲೀಕರಣ 20 ಅಡಿಯಾಗುತ್ತಾ ಅಥವಾ 43 ಅಡಿ ಆಗುತ್ತಾ ಎಂಬ ಚರ್ಚೆ ಶುರುವಾಗಿದೆ.

Ramapattana Road Widening Dispute in Gudibande – Local News

Local News – ಕಿರಿದಾದ ರಸ್ತೆಯಿಂದ ಜನರಿಗೆ ಸಮಸ್ಯೆ

ಗುಡಿಬಂಡೆ ಪಟ್ಟಣದ ಹೃದಯಭಾಗದ ಮೂಲಕ ಹಾದುಹೋಗುವ ರಾಮಪಟ್ಟಣ ರಸ್ತೆ ಸ್ಥಳೀಯರಿಗೆ ಮಾತ್ರವಲ್ಲದೇ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಾಗಿದೆ. ಆದರೆ ಈ ರಸ್ತೆ ತುಂಬಾ ಕಿರಿದಾದ ಕಾರಣದಿಂದ ಸುಮಾರು ವರ್ಷಗಳಿಂದ ಈ ರಸ್ತೆಯಲ್ಲಿ ಸಂಚರಿಸುವ ಜನರಿಗೆ ಕಿರಿಕಿರಿಯಾಗಿತ್ತು. ಕಳೆದೆರಡು ತಿಂಗಳ ಹಿಂದೆಯಷ್ಟೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿಯವರು ರಾಮಪಟ್ಟಣ ರಸ್ತೆ ಅಗಲೀಕರಣಕ್ಕೆ ಅಸ್ತು ಎಂದಿದ್ದರು. ಅದರಂತೆ ಆರಂಭಿಕ ಪ್ರಕ್ರಿಯೆಗಳೂ ಸಹ ಶುರುವಾಯ್ತು. ಬಳಿಕ ಪಪಂ ಅಧಿಕಾರಿಗಳು ಈ ರಸ್ತೆಯಲ್ಲಿ ಮಾಲೀಕರ ಆಸ್ತಿ ಎಷ್ಟು ಅಡಿ ಹೋಗಬಹುದು ಎಂಬ ಮಾಹಿತಿಗಾಗಿ ಮಾರ್ಕಿಂಗ್ ಹಾಕಲು ಮುಂದಾಗಿದ್ದರು. ಆದರೆ ಅಲ್ಲಿದ್ದ ಸ್ಥಳೀಯರು ನೊಟೀಸ್ ನೀಡದೇ ಅಗಲೀಕರಣಕ್ಕೆ ನಾವು ಬಿಡುವುದಿಲ್ಲ ಎಂದು ಗಲಾಟೆ ಮಾಡಿದ ಬಳಿಕ ಈ ಕಾರ್ಯ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ರಾಮಪಟ್ಟಣ ರಸ್ತೆ ಅಗಲೀಕರಣದ ಚರ್ಚೆ ಶುರುವಾಗಿದೆ.

Local News – 15 ಅಡಿ ರಸ್ತೆ ಅಗಲೀಕರಣಕ್ಕೆ ಸ್ಥಳೀಯರ ಮನವಿ

ಕೆಲವೊಂದು ಬಲ್ಲ ಮೂಲಗಳ ಮಾಹಿತಿಯಂತೆ, ರಾಮಪಟ್ಟಣ ರಸ್ತೆಯ ಮಧ್ಯಭಾಗದಿಂದ 20 ಅಡಿ ರಸ್ತೆ ಅಗಲೀಕರಣ ಮಾಡಲು ತೀರ್ಮಾನಿಸಲಾಗಿತ್ತು. ಆದರೆ ಈ ರಸ್ತೆಯ ಅಕ್ಕಪಕ್ಕ ಬರುವಂತಹ ಆಸ್ತಿ ಮಾಲೀಕರು ಶಾಸಕರನ್ನು ಭೇಟಿ ಮಾಡಿ 20 ಅಡಿ ರಸ್ತೆ ಅಗಲೀಕರಣವಾದರೇ ನಮ್ಮ ಆಸ್ತಿಗಳು ಹೋಗುತ್ತವೆ ಮಧ್ಯ ರಸ್ತೆಯಿಂದ 15 ಅಡಿ ಅಗಲೀಕರಣ ಮಾಡಿಸುವಂತೆ ಮನವಿ ಮಾಡಿದ್ದರು.

Ramapattana Road Widening Dispute in Gudibande – Local News

Local News – ಕೆಡಿಪಿ ಸಭೆಯಲ್ಲಿ ಶಾಸಕರು ಹೇಳಿದ್ದೇನು?

ಇನ್ನೂ ಕಳೆದೆರಡು ದಿನಗಳ ಹಿಂದೆ ಗುಡಿಬಂಡೆ ಪಟ್ಟಣದಲ್ಲಿ ನಡೆದಂತಹ ಕೆಡಿಪಿ ಸಭೆಯಲ್ಲಿ ರಾಮಪಟ್ಟಣ ರಸ್ತೆ ಅಗಲೀಕರಣ ವಿಚಾರ ಚರ್ಚೆಯಾಗಿದ್ದು, ಈ ವೇಳೆ ಶಾಸಕ ಸುಬ್ಬಾರೆಡ್ಡಿಯವರು ಈ ರಸ್ತೆಯ ಭಾಗದಲ್ಲಿ ಬರುವಂತಹ ಮನೆಯ ಮಾಲೀಕರು ಮಧ್ಯ ರಸ್ತೆಯಿಂದ 20 ಅಡಿ ಅಗಲೀಕರಣಕ್ಕೆ ಒಪ್ಪುತ್ತಿಲ್ಲ. 20 ಅಡಿ ರಸ್ತೆ ಅಗಲೀಕರಣಕ್ಕೆ ಹಿಂದೆಯೂ ನಾನು ಹೇಳಿದ್ದು, ಅದನ್ನು ಅವರು ಒಪ್ಪದೇ ಇದ್ದರೇ ಸರ್ಕಾರದ ಮಾರ್ಗಸೂಚಿಯಂತೆ ಮಧ್ಯ ರಸ್ತೆಯಿಂದ 43 ಅಡಿ ಅಗಲೀಕರಣ ಮಾಡುತ್ತಾರೆ. ಆಗ ಬಂದು ನನಲ್ಲಿ ಮನವಿ ಮಾಡಿದರೂ ಏನೂ ಮಾಡಲು ಆಗಲ್ಲ.

Read this also : ಗುಡಿಬಂಡೆ ರಾಮಪಟ್ಟಣ ರಸ್ತೆ ಅಗಲೀಕರಣ: ಸ್ಥಳೀಯರಿಂದ ವಿರೋಧ, ಕಾರಣವೇನು?

ಈಗಾಗಲೇ ಗುಡಿಬಂಡೆಯಿಂದ ರಾಮಪಟ್ಟಣದ ವರೆಗೆ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆಯನ್ನು ಸಹ ನೆರವೇರಿಸಿದ್ದು, ರಸ್ತೆ ಅಗಲೀಕರಣ ಆಗದೇ ಇದ್ದರೇ ರಾಮಪಟ್ಟಣ ಸರ್ಕಲ್ ನಿಂದ ಕಾಮಗಾರಿ ಆರಂಭಿಸಬೇಕಾಗುತ್ತದೆ. ಸರ್ಕಾರಕ್ಕೆ ಮಧ್ಯ ರಸ್ತೆಯಿಂದ 43 ಅಡಿ ಅಗಲೀಕರಣಕ್ಕೆ ಪ್ರಸ್ತಾವನೆ ಸಲ್ಲಿಸಿ ಎಂದು ಅಧಿಕಾರಿಗಳಿಗೆ ಶಾಸಕರು ತಿಳಿಸಿದರು.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular