Wednesday, January 28, 2026
HomeStateLocal News : ನ್ಯಾ.ಗವಾಯಿ ರವರ ಮೇಲೆ ಶೂ ಎಸೆತ ಪ್ರಕರಣ ಖಂಡಿಸಿ ಸಿಪಿಎಂ ಪ್ರತಿಭಟನೆ

Local News : ನ್ಯಾ.ಗವಾಯಿ ರವರ ಮೇಲೆ ಶೂ ಎಸೆತ ಪ್ರಕರಣ ಖಂಡಿಸಿ ಸಿಪಿಎಂ ಪ್ರತಿಭಟನೆ

Local News – ಕೆಲವು ದಿನಗಳ ಹಿಂದೆಯಷ್ಟೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಗವಾಯಿರವರ  ಮೇಲೆ ವಕೀಲ ಕಿಶೋರ್‍ ರಾಕೇಶ್ ಎಂಬಾತ ಶೂ ಎಸೆಯಲು ಯತ್ನಿಸಿದ ಘಟನೆಯನ್ನು ಖಂಡಿಸಿ ತಾಲೂಕು ಸಿಪಿಎಂ ಪಕ್ಷದ ವತಿಯಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕು ಕಚೇರಿಯ ಮುಂಭಾಗ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆಯ ಬಳಿಕ ತಹಸೀಲ್ದಾರ್‍ ಸಿಗ್ಬತ್ತುಲ್ಲಾ ರವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.

CPM protest in Gudibande, Chikkaballapur – party members holding banners condemning shoe attack on CJI Gavai and demanding strict legal action - Local News

Local News – ದೇಶದಲ್ಲಿ ಸಂವಿಧಾನ ವಿರೋಧಿ ಕೆಲಸಗಳು ಜಾಸ್ತಿ

ಈ ವೇಳೆ ಸಿಪಿಎಂ ಪಕ್ಷದ ಚಿಕ್ಕಬಳ್ಳಾಪುರ ಜಿಲ್ಲಾ ಸಮಿತಿ ಸದಸ್ಯ ಜಯರಾಮರೆಡ್ಡಿ ಮಾತನಾಡಿ, ನಮ್ಮ ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆಗೆ ತುಂಬಾನೆ ಗೌರವವಿದೆ. ಆದರೆ ಕೆಲವು ದಿನಗಳ ಹಿಂದೆಯಷ್ಟೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ಗವಾಯಿರವರ ಮೇಲೆ ಕೋರ್ಟ್ ಸಮಯದಲ್ಲಿ ವಕೀಲ ಕಿಶೋರ್‍ ರಾಕೇಶ್ ಎಂಬುವವರು ಶೂ ಎಸೆಯಲು ಯತ್ನಿಸಿದ್ದಾರೆ. ಇದನ್ನು ಗಮನಿಸಿದರೇ ನಮ್ಮ ದೇಶದಲ್ಲಿ ಯಾವ ರೀತಿಯಲ್ಲಿ ನ್ಯಾಯಾಂಗ ವ್ಯವಸ್ಥೆಯಿದೆ ಎಂಬ ನೋವು ಕಾಡುತ್ತದೆ. ಕೂಡಲೇ ವಕೀಲ ರಾಕೇಶ್ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಮುಂದಿನ ದಿನಗಳಲ್ಲಿ ಈ ರೀತಿಯ ಕೃತ್ಯಗಳು ನಡೆಯದಂತೆ ಶಿಕ್ಷೆಯಾಗಬೇಕು.

ಇನ್ನೂ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಆಡಳಿತ ಬಂದ ಬಳಿಕ ದಲಿತರು, ಬಡವರ, ರೈತರ ವಿರೋಧಿ ಕೆಲಸಗಳನ್ನೇ ಹೆಚ್ಚಾಗಿ ಮಾಡುತ್ತಿದೆ. ದಲಿತರ ಮೇಲೆ ಹಲ್ಲೆಗಳು, ಬಡವರ ಮೇಲೆ ದೌರ್ಜನ್ಯಗಳು, ರೈತರ ಮೇಲೆ ದಬ್ಬಾಳಿಕೆ ಹೀಗೆ ಹಲವು ರೀತಿಯಲ್ಲಿ ಸಂವಿಧಾನ ವಿರೋಧಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು. Read this also : ಸುಪ್ರೀಂಕೋರ್ಟ್ ನ್ಯಾ. ಗವಾಯಿ ರವರ ಮೇಲೆ ಶೂ ಎಸೆತ ಪ್ರಕರಣ, ಗುಡಿಬಂಡೆಯಲ್ಲಿ ದಲಿತ ಸಂಘಟನೆಗಳ ಪ್ರತಿಭಟನೆ

CPM protest in Gudibande, Chikkaballapur – party members holding banners condemning shoe attack on CJI Gavai and demanding strict legal action - Local News

Local news – ನ್ಯಾಯಾಂಗ ವ್ಯವಸ್ಥೆಗೆ ಅಗೌರವ

ಬಳಿಕ ಕೆಪಿಆರ್‌ಎಸ್ ನ ಜಿಲ್ಲಾ ಸಂಚಾಲಕ ಮುನಿಸ್ವಾಮಿ ಮಾತನಾಡಿ, ನಮ್ಮ ದೇಶದಲ್ಲಿ ಇಂದು ದಲಿತರ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಇದೀಗ ನ್ಯಾಯಾಂಗದ ಮೇಲೂ ಸಹ ದೌರ್ಜನ್ಯಗಳು ನಡೆಯಲು ಶುರುವಾಗುವಂತಿದೆ. ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಮೇಲೆ ಶೂ ಎಸೆಯಲು ಯತ್ನಿಸಿದಂತಹ ವ್ಯಕ್ತಿಗೆ ಕಠಿಣ ಶಿಕ್ಷೆ ನೀಡಬೇಕು. ಆದರೆ ನೆಪ ಮಾತ್ರಕ್ಕೆ ಆತನನ್ನು ಬಂಧಿಸಿ ಬಿಡುಗಡೆ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲ ರಾಕೇಶ್ ಗೆ ಕಠಿಣ ಶಿಕ್ಷೆಯಾಗಬೇಕು. ಪ್ರಜಾಪ್ರಭುತ್ವದ ಮೂರನೇ ಅಂಗವಾದ ನ್ಯಾಯಾಂಗ ವ್ಯವಸ್ಥೆಗೆ ಇದು ಅಗೌರವ ತೋರಿದಂತೆ. ಇನ್ನು ಮುಂದೆಯಾದರೂ ಈ ರೀತಿಯ ದಾಳಿಗಳು ನಡೆಯದಂತೆ ಸರ್ಕಾರಗಳು ಕ್ರಮ ವಹಿಸಬೇಕು ಎಂದರು.

ಈ ಪ್ರತಿಭಟನೆಯಲ್ಲಿ ಸಿಪಿಎಂ ತಾಲೂಕು ಕಾರ್ಯದರ್ಶಿ ವೆಂಕಟರಾಜು, ಸದಸ್ಯರಾದ ರಮಣ, ದೇವರಾಜು, ಸೋಮಶೇಖರ್‍, ರಾಜಪ್ಪ, ಗಂಗರಾಜು, ಚಲಪತಿ ಸೇರಿದಂತೆ ಹಲವರು ಹಾಜರಿದ್ದರು.

by ISM Kannada News Deskhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular