Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕು ಕೇಂದ್ರದಲ್ಲಿ ಬಸ್ ಡಿಪೋ ನಿರ್ಮಾಣ ಮಾಡುವಂತೆ ಒತ್ತಾಯಿಸಿ ಗುಡಿಬಂಡೆ ಸಾರಿಗೆ ಘಟಕ ಸ್ಥಾಪನಾ ಹೋರಾಟ ವೇದಿಕೆಯ ವತಿಯಿಂದ ಜು.26 ಶನಿವಾರ ರಂದು ಸಾಂಕೇತಿಕವಾಗಿ ಗುಡಿಬಂಡೆಯ ಮುಖ್ಯ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸುವುದಾಗಿ ತೀರ್ಮಾನಿಸಿದ್ದಾರೆ. ಜು.26 ರಿಂದ ಸಾಂಕೇತಿಕವಾಗಿ ಆರಂಭವಾಗುವ ಪ್ರತಿಭಟನೆ ಹಂತ ಹಂತವಾಗಿ ತೀವ್ರ ಸ್ವರೂಪಕ್ಕೆ ತೆಗೆದುಕೊಂಡು ಹೋಗುವುದಾಗಿ ಹೋರಾಟ ವೇದಿಕೆ ವತಿಯಿಂದ ತೀರ್ಮಾನ ತೆಗೆದುಕೊಳ್ಳಲಾಗಿದೆ.
Local News – 2013ರಲ್ಲೇ ಕೆ.ಎಸ್.ಆರ್.ಟಿ.ಸಿ ಇಲಾಖೆಗೆ ಜಮೀನು ಮಂಜೂರು
ಈ ಕುರಿತು ಹೋರಾಟ ವೇದಿಕೆಯ ಜಿ.ವಿ.ಗಂಗಪ್ಪ ಮಾತನಾಡಿ, ಕಳೆದ 2013 ರಲ್ಲೇ ತಾಲೂಕಿನ ಪಲ್ಲೈಗಾರಹಳ್ಳ ಗ್ರಾಮದ ಬಳಿ 10 ಎಕರೆ ಜಮೀನನ್ನು ಶೇ.50 ರ ರಿಯಾಯತಿ ದರದಲ್ಲಿ ಸಾರಿಗೆ ಇಲಾಖೆಗೆ ಹಸ್ತಾಂತರಿಸಲಾಗಿರುತ್ತದೆ. ಜಮೀನು ಹಸ್ತಾಂತರಗೊಂಡು ಸುಮಾರು 11 ವರ್ಷಗಳು ಕಳೆದಿದೆ. ಆದರೂ ಸಹ ಡಿಪೋ ನಿರ್ಮಾಣ ಕನಸಾಗಿಯೇ ಉಳಿಯುವಂತಾಗಿದೆ. ಗುಡಿಬಂಡೆ ತಾಲೂಕು ಎಂದ ಕೂಡಲೇ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳಿಗೆ ಕೀಳು ಭಾವನೆ, ನಿರ್ಲಕ್ಷ್ಯ ಧೋರಣೆ ಉಕ್ಕಿ ಬರುತ್ತದೆ. ಈಗಾಗಲೇ ಬಸ್ ಡಿಪೋ ಸೇರಿದಂತೆ ತಾಲೂಕಿಗೆ ಸಮರ್ಪಕ ಬಸ್ ಸಂಚಾರಕ್ಕೆ ಪ್ರತಿಭಟನೆಗಳನ್ನೂ ಸಹ ಹಮ್ಮಿಕೊಳ್ಳಲಾಗಿದೆ. ಅಂದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನೀಡಿದ ಭರವಸೆಗಳು ಮಾತ್ರ ಹಾಗೆಯೇ ಉಳಿದಿದೆ ಎಂದು ಬೇಸರ ವ್ಯಕ್ತಪಡಿಸಿದರು.
Local News – ವಿಶೇಷ ದಿನಗಳಂದು ಬಸ್ ಗಳು ಬರೋದೇ ಇಲ್ಲ
ಇನ್ನೂ ಗುಡಿಬಂಡೆಗೆ ಬರುವಂತಹ ಬಸ್ ಗಳು ಒಮ್ಮೊಮ್ಮೆ ಸರಿಯಾಗಿ ಬರುವುದೇ ಇಲ್ಲ. ಒಮ್ಮೊಮ್ಮೆ ಮದುವೆಗಳು, ದೊಡ್ಡ ದೊಡ್ಡ ಕಾರ್ಯಕ್ರಮಗಳು, ರಾಜಕೀಯ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಗುಡಿಬಂಡೆಗೆ ಬರುವ ಬಸ್ ಗಳನ್ನೆ ಕಳುಹಿಸುತ್ತಾರೆ. ಆ ಸಮಯದಲ್ಲಿ ಗುಡಿಬಂಡೆಯಿಂದ ಬೇರೆ ಕಡೆಗೆ ಹೋಗುವಂತಹ ಪ್ರಯಾಣಿಕರು, ವಿದ್ಯಾರ್ಥಿಗಳು ತುಂಬಾನೆ ಸಮಸ್ಯೆ ಅನುಭವಿಸಬೇಕಾಗುತ್ತದೆ. ಬಸ್ ಸಮಸ್ಯೆ ಆದರೇ ನಾವು ಹೋರಾಟ ಮಾಡಬೇಕು, ಹೋರಾಟ ಮಾಡಿದ ಬಳಿಕ ಬಸ್ ಗಳನ್ನು ಕಳುಹಿಸುತ್ತಾರೆ. ಕೆಲವು ದಿನಗಳಾದ ಬಳಿಕ ಪುನಃ ಅದೇ ಸಮಸ್ಯೆ ಉದ್ಬವಿಸುತ್ತದೆ. ಈ ಸಮಸ್ಯಗೆ ಶಾಶ್ವತ ಪರಿಹಾರಕ್ಕಾಗಿ ಇಂದು ನಾವೆಲ್ಲಾ ಒಗ್ಗಾಟ್ಟಾಗಿ ಹೋರಾಡಬೇಕಿದೆ ಎಂದರು.
Local News – ವಿನೂತನ ಹೋರಾಟಕ್ಕೆ ಸಿದ್ದತೆ
ಇನ್ನೂ ಗುಡಿಬಂಡೆಯಲ್ಲಿ ಬಸ್ ಡಿಪೋ ನಿರ್ಮಾಣ ಸೇರಿದಂತೆ ಸಮಪರ್ಕವಾಗಿ ಬಸ್ ಗಳ ಸಂಚಾರಕ್ಕೆ ಸಂಬಂಧಿಸಿದಂತೆ ಮೊದಲ ಹಂತವಾಗಿ ಜು.26 ಶನಿವಾರದಂದು ಸಾಂಕೇತಿಕವಾಗಿ ಗುಡಿಬಂಡೆ ಮುಖ್ಯ ರಸ್ತೆ ತಡೆ ನಡೆಸಿ ಪ್ರತಿಭಟಿಸಲಾಗುತ್ತದೆ. ಅದಾದ ಬಳಿಕ ಅಂದೇ ಎಲ್ಲರೂ ಸಭೆ ಸೇರಿ ಮುಂದಿನ ಹೋರಾಟದ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ನಮ್ಮ ಸಮಸ್ಯೆ ಬಗೆಹರಿಸದೇ ಇದ್ದರೇ, ಒಂದು ತಿಂಗಳ ಒಳಗೆ ಈ ಹೋರಾಟ ಉಗ್ರ ಸ್ವರೂಪ ಪಡೆದುಕೊಳ್ಳುತ್ತದೆ. ಈ ಬಾರಿ ನಮ್ಮ ಸಮಸ್ಯೆ ಈಡೇರುವ ತನಕ ನಮ್ಮ ಹೋರಾಟ ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂದರು.
Read this also : Moharram : ಗುಡಿಬಂಡೆಯಲ್ಲಿ ತ್ಯಾಗ ಬಲಿದಾನಗಳ ವಿಶೇಷ ಮೊಹರಂ ಆಚರಣೆ, ದೇಹದಂಡನೆ, ನೂರಾರು ಜನ ಭಾಗಿ…!
ಹೋರಾಟಕ್ಕೆ ಎಲ್ಲರೂ ಸಹಕರಿಸಿ
ಇನ್ನೂ ಈ ಹೋರಾಟಕ್ಕೆ ತಾಲೂಕಿನ ಎಲ್ಲಾ ಸಂಘ ಸಂಸ್ಥೆಗಳು, ಸಂಘಟನೆಗಳು, ವಿದ್ಯಾರ್ಥಿಗಳು, ಎಲ್ಲಾ ಪಕ್ಷಗಳ ಮುಖಂಡರುಗಳು, ಕಾರ್ಯಕರ್ತರು ಬೆಂಬಲ ನೀಡಬೇಕು. ಬಸ್ ಡಿಪೋ ನಿರ್ಮಾಣ ಹಾಗೂ ಸಮರ್ಪಕ ಬಸ್ ಸಂಚಾರ ಆಗುವ ತನಕ ಎಲ್ಲರೂ ಹೋರಾಟಕ್ಕೆ ಕೈ ಜೋಡಿಸಬೇಕೆಂದು ಮನವಿ ಮಾಡಿದರು.