Saturday, October 25, 2025
HomeStateLocal News : ಜಿ.ಎಸ್.ಟಿ ಸರಳೀಕರಣದಿಂದ ಬಡ, ಮಧ್ಯಮ ವರ್ಗದ ಜನತೆಗೆ ಅನುಕೂಲ: ಮುನಿರಾಜು

Local News : ಜಿ.ಎಸ್.ಟಿ ಸರಳೀಕರಣದಿಂದ ಬಡ, ಮಧ್ಯಮ ವರ್ಗದ ಜನತೆಗೆ ಅನುಕೂಲ: ಮುನಿರಾಜು

Local News – ಪ್ರಧಾನಿ ನರೇಂದ್ರ ಮೋದಿಯವರು ಜಿ.ಎಸ್.ಟಿ ಅಡಿಯಲ್ಲಿ ಬರುವಂತಹ ಕೆಲ ವಸ್ತುಗಳ ಜಿ.ಎಸ್.ಟಿಯನ್ನು ಕಡಿಮೆ ಮಾಡಿ ದಸರಾ, ದೀಪಾವಳಿ ಹಬ್ಬದ ಕೊಡುಗೆ ನೀಡಿದೆ. ಇದರಿಂದ ಬಡ ಹಾಗೂ ಮಧ್ಯಮ ವರ್ಗದ ಜನತೆಗೆ ತುಂಬಾ ಅನುಕೂಲವಾಗಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜು ತಿಳಿಸಿದರು.

Prime Minister Narendra Modi’s GST reduction benefits poor and middle-class citizens; BJP leaders at a free health check-up camp in Gudibande - Local News

Local News – ಜಿ.ಎಸ್.ಟಿ ಸರಳೀಕರಣದಿಂದ ಎಲ್ಲರಿಗೂ ಅನುಕೂಲ

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಗಜನಾಣ್ಯ ಕಲ್ಯಾಣ ಮಂಟಪದಲ್ಲಿ ಬಿಜೆಪಿ ತಾಲೂಕು ಮಂಡಲ ಹಾಗೂ ದೇವನಹಳ್ಳಿಯ ಆಕಾಶ್ ಆಸ್ಪತ್ರೆಯ ಸಹಯೋಗದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಇಡೀ ವಿಶ್ವವೇ ನಮ್ಮ ಭಾರತದತ್ತ ನೋಡುವಂತಾಗಿದೆ. ಕೆಲವು ದಿನಗಳ ಹಿಂದೆಯಷ್ಟೆ ಜಿ.ಎಸ್.ಟಿ ಸರಳೀಕರಣ ಗೊಳಿಸಿ ಒಂದು ವರ್ಗ ಅಥವಾ ಒಬ್ಬರಿಗೆ ಮಾತ್ರ ಸೀಮಿತವಾಗದೇ ಬಡ ಹಾಗೂ ಮದ್ಯಮ ವರ್ಗದ ಜನತೆಗೆ ಅನುಕೂಲವಾಗುವಂತೆ ಮಾಡಿದ್ದಾರೆ. ಅದರಲ್ಲೂ ವಿಮೆ ಪಡೆಯಲು ಶೂನ್ಯ ಜಿ.ಎಸ್.ಟಿ ನಿಗಧಿ ಮಾಡಲಾಗಿದೆ. ಸಾಮಾನ್ಯ ರೈತ ಸಹ ಬೈಕ್ ಖರೀದಿಸಲು ಕಷ್ಟಕರವಾಗಿತ್ತು. ಇದೀಗ ಎಲ್ಲರಿಗೂ ಅನುಕೂಲವಾಗಿದೆ.

ಮುಖ್ಯವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಕೇಂದ್ರ ಸರ್ಕಾರದಿಂದ ತೆರೆಯಲಾಗಿದ್ದ ಜನೌಷಧಿ ಕೇಂದ್ರವನ್ನು ಇದೀಗ ಅಲ್ಲಿಂದ ತೆಗೆದಿದ್ದಾರೆ. ಇದರಿಂದಾಗಿ ಬಡವರಿಗೆ ಅನಾನುಕೂಲವಾಗಿದೆ. ಇದಕ್ಕೆ ಆದಷ್ಟು ಶೀಘ್ರ ಪ್ರಧಾನಿ ಮೋದಿಯವರು ಉತ್ತರ ನೀಡಲಿದ್ದಾರೆ. ಜನತೆ ಸಹ ರಾಜ್ಯ ಕಾಂಗ್ರೇಸ್ ಸರ್ಕಾರಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದರು. Read this also : ಗ್ರಾಹಕರಿಗೆ ಸಂತಸ, ಕೆಲವು ವಸ್ತುಗಳ ಬೆಲೆ ಹೆಚ್ಚಳ, ಇಲ್ಲಿದೆ ಸಂಪೂರ್ಣ ಮಾಹಿತಿ…!

Prime Minister Narendra Modi’s GST reduction benefits poor and middle-class citizens; BJP leaders at a free health check-up camp in Gudibande - Local News

Local News – ಎಲ್ಲರಿಗೂ ಅನುಕೂಲವಾಗಲಿದೆ ಮೋದಿಯವರ ಯೋಜನೆಗಳು

ಇದೇ ಸಮಯದಲ್ಲಿ ಬಿಜೆಪಿಯ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರೇಗೌಡ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ಜಿಎಸ್‌ಟಿ ಸರಳೀಕರಣಗೊಳಿಸಿ ಎಲ್ಲರಿಗೂ ಅನುಕೂಲವಾಗುವಂತೆ ಮಾಡಿದ್ದಾರೆ. ಕಾಂಗ್ರೇಸ್ ಸರ್ಕಾರದ ಮಾದರಿಯಲ್ಲಿ ನಾವು ಸುಳ್ಳು ಆಶ್ವಾಸನೆಗಳನ್ನು ಕೊಡುವುದಿಲ್ಲ. ಚುನಾವಣೆಯ ಸಮಯದಲ್ಲಿ ಪಂಚ ಗ್ಯಾರಂಟಿಗಳನ್ನು ಕೊಡ್ತೀವಿ ಅಂತಾ ಅಧಿಕಾರಕ್ಕೆ ಬಂದು ಇದೀಗ ಸರಿಯಾಗಿ ಕೊಡುತ್ತಿಲ್ಲ. ಮಹಿಳೆಯರಿಗೆ 2 ಸಾವಿರ ಹಣ ನೀಡ್ತೀವಿ ಅಂತಾ ಹೇಳಿ, ಚುನಾವಣಾ ಬಳಿಕ ಕೇವಲ ಮನೆಯ ಯಜಮಾನಿಗೆ ಮಾತ್ರ ಕೊಡ್ತೀವಿ ಅಂತಾ ಮನೆಯನ್ನು ಒಡೆಯುವ ಕೆಲಸ ಮಾಡಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಯೊಂದು ಯೋಜನೆ ಎಲ್ಲರಿಗೂ ಅನುಕೂಲವಾಗುವಂತಿದೆ. ಮುಂದಿನ ದಿನಗಳಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಜನರೇ ತಕ್ಕ ಪಾಠ ಕಲಿಸುತ್ತಾರೆ. ಇನ್ನೂ ವಿವಿಧ ಸಂಘ ಸಂಸ್ಥೆಗಳು ಆಯೋಜಿಸುವಂತಹ ಉಚಿತ ಆರೋಗ್ಯ ತಪಾಸಣಾ ಶಿಬಿರಗಳಲ್ಲಿ ಭಾಗವಹಿಸಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

Local News – ಜಿ.ಎಸ್.ಟಿ ಕುರಿತು ಅರಿವು

ಇನ್ನೂ ಜಿ.ಎಸ್.ಟಿ. ಇಳಿಕೆಯ ಕುರಿತಂತೆ ಪಟ್ಟಣದ ಅಂಗಡಿ ಮಳಿಗೆಗಳಿಗೆ ತೆರಳಿ ಅಂಗಡಿ ಮಾಲೀಕರಿಗೆ ಹಾಗೂ ಗ್ರಾಹಕರಿಗೆ ಅರಿವು ಮೂಡಿಸಿದರು. ಜನರಿಗೆ ಜಿ.ಎಸ್.ಟಿ. ಇಳಿಕೆಯಾಗಿರುವ ಬಗ್ಗೆ ಬಿಜೆಪಿ ಕಾರ್ಯಕರ್ತರೂ ಸೇರಿದಂತೆ ಅಂಗಡಿಯವರೂ ಸಹ ಮಾಹಿತಿ ನೀಡಬೇಕು ಎಂದು ಸೂಚಿಸಿದರು. ಬಳಿಕ ಗುಡಿಬಂಡೆಯಲ್ಲಿ ದಸರಾ ಹಬ್ಬದ ಪ್ರಯುಕ್ತ ಪ್ರತಿಷ್ಟಾಪಿಸಿರುವ ಗಣೇಶ ಹಾಗೂ ದುರ್ಗಾ ಮಾತೆಗೆ ವಿಶೇಷ ಪೂಜೆ ಸಲ್ಲಿಸಿದರು.

Prime Minister Narendra Modi’s GST reduction benefits poor and middle-class citizens; BJP leaders at a free health check-up camp in Gudibande - Local News

Local News – ಕಾರ್ಯಕ್ರಮದಲ್ಲಿ ಹಾಜರಿದ್ದವರು

ಈ ವೇಳೆ ಬಿಜೆಪಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಧುಸೂರ್ಯನಾರಾಯಣರೆಡ್ಡಿ, ಗುಡಿಬಂಡೆ ಬಿಜೆಪಿ ಅಧ್ಯಕ್ಷ ಗಂಗಿರೆಡ್ಡಿ, ಬಾಗೇಪಲ್ಲಿಯ ಪ್ರತಾಪ್ ರೆಡ್ಡಿ, ಗೌರಿಬಿದನೂರು ಬಿಜೆಪಿ ಅಧ್ಯಕ್ಷ ರಮೇಶ್, ಸ್ಥಳೀಯ ಮುಖಂಡರಾದ ಗಜನಾಣ್ಯ ನಾಗರಾಜು, ಆಶಾಜಯಪ್ಪ, ಅಮರೇಶ್, ಮಧು, ಲೋಕೇಶ್, ಶಿವಪ್ಪ, ರಾಜಗೋಪಾಲ್, ರವಿ ಸೇರಿದಂತೆ ಹಲವರು ಇದ್ದರು.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular