Local News – ಯಾವುದೇ ಸರ್ಕಾರಿ ಹುದ್ದೆಗೆ ಸೇರಿದ ನೌಕರರಿಗೆ ನಿವೃತ್ತಿ ಎಂಬುದು ಸಹಜ ಹಾಗೂ ಕಡ್ಡಾಯವಾಗಿದ್ದು, ನೌಕರರು ತಮ್ಮ ಸೇವಾವಧಿಯಲ್ಲಿ ಸೇವೆ ಮಾಡುವುದು ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ನೌಕರರು ತಮ್ಮ ಸೇವಾವಧಿಯಲ್ಲಿ ತಮ್ಮ ಕರ್ತವ್ಯ ನಿಷ್ಟೆಯನ್ನು ತೋರಬೇಕೆಂದು ಗುಡಿಬಂಡೆಯ ನಿವೃತ್ತ ಶಿಕ್ಷಕ ಹಾಗೂ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಕೆ.ವಿ.ನಾರಾಯಣಸ್ವಾಮಿ ತಿಳಿಸಿದರು.
Local News – ಸೇವಾವಧಿಗೆ ನ್ಯಾಯ ಒದಗಿಸಿದ್ದೇನೆ
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಯರಲಕ್ಕೇನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ನಿವೃತ್ತ ಶಿಕ್ಷಕ ಕೆ.ವಿ.ನಾರಾಯಣಸ್ವಾಮಿ ರವರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಾನು ಸರ್ಕಾರಿ ಸೇವೆಗೆ ಸೇರಿದಾಗಿನಿಂದ ನನ್ನ ಕರ್ತವ್ಯಕ್ಕೆ ನ್ಯಾಯ ಒದಗಿಸಿದ್ದೇನೆ. ಬಳಿಕ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಹಾಗೂ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷರಾಗಿ ಸತತವಾಗಿ ಮೂರು ಬಾರಿ ಆಯ್ಕೆಯಾಗಿದ್ದೇನೆ. ಸರ್ಕಾರಿ ನೌಕರರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಶ್ರಮಿಸಿದ್ದೇನೆ. ನನ್ನ ತಂಡ ಹಾಗೂ ಸರ್ಕಾರಿ ನೌಕರರು ನನ್ನ ಪ್ರತಿಯೊಂದು ಹೆಜ್ಜೆಯಲ್ಲೂ ಜತೆಗಿದ್ದಾರೆ. ಇಂದು ನಾನು ವಯೋನಿವೃತ್ತಿಯಾಗಿದ್ದು, ಮನಸ್ಸಿಗೆ ನೋವು ತಂದಿದೆ. ವಯೋನಿವೃತ್ತಿ ಕಡ್ಡಾಯವಾಗಿದ್ದು, ನೌಕರರು ತಮ್ಮ ಸೇವಾವಧಿಯಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಬೇಕೆಂದು ಎಂದರು.
Local News – ನಾರಾಯಣಸ್ವಾಮಿ ರವರು ನೌಕರರ ಹಿತರಕ್ಷಕ
ಬಳಿಕ ತಾಪಂ ಇಒ ನಾಗಮಣಿ ಮಾತನಾಡಿ, ಕೆ.ವಿ.ನಾರಾಯಣಸ್ವಾಮಿ ರವರು ಶಿಕ್ಷಕರಾಗಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ನೌಕರರ ಹಿತ ಕಾಯುವಲ್ಲಿ ಯಶಸ್ವಿಯಾಗಿದ್ದಾರೆ. ತಾಲೂಕಿನ ಎಲ್ಲಾ ಸರ್ಕಾರಿ ನೌಕರರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಶ್ರಮಿಸಿದ್ದಾರೆ. ಅವರು ನಿವೃತ್ತಿ ವಯಸ್ಸಾದರೂ ಸಹ ಸದಾ ನೌಕರರ ಪರ ಕೆಲಸ ಮಾಡಬೇಕು, ಜೊತೆಗೆ ಸಮಸ್ಯೆಗಳನ್ನು ಬಗೆಹರಿಸುವಂತಹ ಕೆಲಸ ಮಾಡಬೇಕು. ಅವರ ಮುಂದಿನ ದಿನಗಳು ಉತ್ತಮವಾಗಿರಲಿ ಹಾಗೂ ಸುಖಮಯವಾಗಿರಲಿ ಎಂದು ಶುಭ ಹಾರೈಸಿದರು.
Read this also : ಗೂಗಲ್‌ನಲ್ಲಿ ಈ ಪದಗಳ ಹುಡುಕಾಟ ಮಾಡಿದರೆ ಜೈಲು ಗ್ಯಾರಂಟಿ! ಎಚ್ಚರಿಕೆ ಇರಲಿ..!
Local News – ಸನ್ಮಾನಿಸಿ ಗೌರವ ಸಲ್ಲಿಸಿದ ಸಂಘ ಸಂಸ್ಥೆಗಳು
ಇನ್ನೂ ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರ ಸಂಘದ ತಾಲೂಕು ಕಾರ್ಯದರ್ಶಿ ಮುನಿಕೃಷ್ಣಪ್ಪ, ಸ್ಥಳೀಯ ಮುಖಂಡ ಕೃಷ್ಣೆಗೌಡ, ಕಾರಕೂರಪ್ಪ ಸೇರಿದಂತೆ ಹಲವರು ಕೆ.ವಿ.ನಾರಾಯಣಸ್ವಾಮಿ ರವರ ಕುರಿತು ಮಾತನಾಡಿದರು. ಇನ್ನೂ ಕಾರ್ಯಕ್ರಮದಲ್ಲಿ ನೌಕರರ ಸಂಘ, ಶಿಕ್ಷಕರ ಸಂಘ ಸೇರಿದಂತೆ ಹಲವು ಸಂಘ ಸಂಸ್ಥೆಗಳ ವತಿಯಿಂದ ಕೆ.ವಿ.ನಾರಾಯಣಸ್ವಾಮಿ ರವರನ್ನು ಆತ್ಮೀಯವಾಗಿ ಸನ್ಮಾನಿಸಿದರು.
ಈ ವೇಳೆ ತಹಸೀಲ್ದಾರ್ ಸಿಗ್ಬತ್ತುಲ್ಲಾ, ತಿರುಮಣಿ ಗ್ರಾ.ಪಂ ಅಧ್ಯಕ್ಷ ಮಮತಾ ಮಂಜುನಾಥ್, ಬಿಇಒ ಕೃಷ್ಣಕುಮಾರಿ, ವಿವಿಧ ಇಲಾಖೆಗಳ ಅಧಿಕಾರಿಗಳು, ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು, ಸರ್ಕಾರಿ ನೌಕರರು, ವಿವಿಧ ಸಂಘದ ಸಂಸ್ಥೆಗಳ ಪದಾಧಿಕಾರಿಗಳು ಸೇರಿದಂತೆ ಹಲವರು ಇದ್ದರು.