Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಬೀಚಗಾನಹಳ್ಳಿ ಕ್ರಾಸ್ ಬಳಿ ನಾವು ಖರೀದಿಸಿದ ನಿವೇಶನದಲ್ಲಿ ಕುಂಬಾರಿಕೆ ವೃತ್ತಿಯನ್ನು ಮಾಡಿಕೊಂಡು ಜೀವನ ಸಾಗಿಸುತ್ತಿರುವ ನಮಗೆ ರಾಜಕೀಯ ವ್ಯಕ್ತಿಗಳ ಕುಮ್ಮಕ್ಕಿನಿಂದ ಪಂಚಾಯತಿ ಅಧಿಕಾರಿಗಳು ದೌರ್ಜನ್ಯ ಎಸಗುತ್ತಿದ್ದಾರೆ. ವಿನಾಕಾರಣ ಹಿಂಸೆ ಕೊಡುತ್ತಿದ್ದಾರೆ ಎಂದು ಕಿರುಕುಳಕ್ಕೆ ಒಳಗಾದ ಆದಿನಾರಾಯಣಪ್ಪ ಎಂಬುವವರು ಆರೋಪಿಸಿದ್ದಾರೆ.

Local News – ವಿನಾ ಕಾರಣ ನಮಗೆ ಕಿರುಕುಳ
ಈ ಸಂಬಂಧ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ತಾಲೂಕಿನ ತಿರುಮಣಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಜೆ.ಪಿ.ನಗರ (ಬೀಚಗಾನಹಳ್ಳಿ ಕ್ರಾಸ್) ದಲ್ಲಿ ನಿವೇಶನವನ್ನು ಖರೀದಿಸಿ ಮನೆ ನಿರ್ಮಿಸಿಕೊಂಡಿದ್ದೇವು. ನಮ್ಮ ನಿವೇಶನದ ಪಕ್ಕದಲ್ಲಿರುವ 10 ಅಡಿ ಜಾಗವನ್ನು ಸಹ ತಿರುಮಣಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮಂಜೂರು ಮಾಡಿ ನಮಗೆ ಹೌಸ್ ಲೀಸ್ಟ್ ಸಹ ನೀಡಿದ್ದಾರೆ. ಜತೆಗೆ 2005 ರಿಂದ ನಮ್ಮಿಂದ ತೆರಿಗೆಯನ್ನು ಸಹ ಪಾವತಿ ಮಾಡಿದ್ದೇವೆ. ಆದರೆ ಇಷ್ಟು ವರ್ಷಗಳು ಇಲ್ಲದೇ ಇರುವ ಒತ್ತುವರಿ ಈಗ ಹೇಗೆ ಬಂದು, ನಮ್ಮಕುಟುಂಬವನ್ನು ತಿರುಮಣಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ಪತಿ ತನ್ನ ಪತ್ನಿಯ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಒತ್ತಡ ಏರಿ ನಮಗೆ ಯಾವುದೇ ನೋಟಿಸ್ ನೀಡದೇ ಜೆಸಿಬಿ ಯಂತ್ರಗಳನ್ನು ಕರೆಸಿ ನಮ್ಮ ಮನೆಯನ್ನು ತೆರವು ಮಾಡಲು ಮುಂದಾಗಿದ್ದಾರೆ.
Local News – ಬಡವರ ಮಾತಿಗೆ ಬೆಲೆ ಇಲ್ಲ
ಈ ಬಗ್ಗೆ ನಾವು ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳನ್ನು ಮತ್ತು ತಾ.ಪಂ ಇಒ ರವರನ್ನು ಕೇಳಿದರೆ ನಿಮ್ಮ ಬಳಿ ಇರುವ ದಾಖಲೆಗಳು ನಕಲಿ ಎಂದು ಉತ್ತರಿಸುತ್ತಾರೆ. ಈಗಾಗಲೇ ನಮ್ಮ ಬಳಿ ಇರುವ ದಾಖಲೆಗಳೊಂದಿಗೆ ನ್ಯಾಯಾಲಯದ ಮೊರೆ ಹೋಗಿದ್ದೇವೆ. ಪ್ರಕರಣ ನ್ಯಾಯಾಲಯದಲ್ಲಿದ್ದರು ಸಹ ಅದನ್ನು ಲೆಕ್ಕಿಸದೇ ನಮ್ಮ ಮನೆಗಳನ್ನು ತೆರವು ಮಾಡಲು ಮುಂದಾಗುತ್ತಿದ್ದಾರೆ. ಅಧಿಕಾರಿಗಳು ಕೇವಲ ಪ್ರಬಲರು ಹೇಳಿದ ಹಾಗೇ ಕೇಳುತ್ತಾರೆ ನಮ್ಮಂತಹ ಬಡಪಾಯಿಗಳ ಮಾತುಗಳು ಲೆಕ್ಕಕ್ಕೆ ಇಲ್ಲ ಎಂದು ಆರೋಪಿಸಿದರು.

Local News – ನಮ್ಮ ಜಾಗ ನಮಗೆ ಬಿಟ್ಟು ಕೊಡಿ
ಬಳಿಕ ಮತ್ತೋರ್ವ ಸಂತ್ರಸ್ಥ ರವಿಕುಮಾರ್ ಮಾತನಾಡಿ, ನಮ್ಮತಂದೆ 2005 ರಲ್ಲಿ ನಿವೇಶನ ಖರೀದಿ ಮಾಡಿ, ಮನೆ ನಿರ್ಮಿಸಿಕೊಂಡು ಕುಂಬಾರರಾದ ನಾವು ಮಡಿಕೆಗಳನ್ನು ಮಾರಾಟ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ. ನಮ್ಮ ಮನೆಯ ಪಕ್ಕದಲ್ಲಿರುವ ಖಾಲಿ ನಿವೇಶನದಲ್ಲಿ ನಾವು ಅಂಗಡಿಗಳನ್ನು ಹಾಕಿಕೊಂಡು ಮಡಿಕೆಗಳನ್ನು ಮಾರಾಟ ಮಾಡಿಕೊಂಡಿದ್ದೇವೆ. ಆದರೆ ನಾವು ಸ್ವಾಧೀನದಲ್ಲಿರುವ ಜಾಗ ಸರ್ಕಾರಿ ಎಂದು ಹೇಳಿ ನಮಗೆ ಕಿರುಕುಳ ನೀಡುತ್ತಿದ್ದಾರೆ. ನಾವು ಬಡವರಾಗಿದ್ದು, ಕುಂಬಾರ ಕಸುಬನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಇಂತಹ ವೇಳೆ ನಮಗೆ ಕಿರುಕುಳ ನೀಡುವುದು ಎಷ್ಟು ಸರಿ. ಅಧಿಕಾರಿಗಳು ನಮ್ಮಲ್ಲಿ ಇರುವ ದಾಖಲೆಗಳನ್ನು ಪರಿಗಣಿಸಿ ನಮ್ಮಜಾಗವನ್ನು ನಮಗೆ ಬಿಟ್ಟುಕೊಡಬೇಕೆಂದು ಮನವಿ ಮಾಡಿದರು.
ಈ ವೇಳೆ ಕುಂಬಾರ ಸಮುದಾಯದ ಅಧ್ಯಕ್ಷ ಶ್ರೀನಿವಾಸ, ಕುಟುಂಬಸ್ಥರಾದ ವಿಜಯಲಕ್ಷ್ಮೀ, ಹರೀಶ್, ಶ್ರಾವಣಿ, ಸಾವಿತ್ರಮ್ಮ, ಶಿವಕುಮಾರ್, ಗೋಪಾಲಕೃಷ್ಣ, ಶ್ರೀನಿವಾಸ ಸೇರಿದಂತೆ ಹಲವರು ಇದ್ದರು.
