Local News – ಚಿಕ್ಕಬಳ್ಳಾಪುರ ಗುಡಿಬಂಡೆ ತಾಲೂಕಿನ ಕರಿಗಾನತಮನ್ನಹಳ್ಳಿ ಗ್ರಾಮದಲ್ಲಿ ಶ್ರೀನಿವಾಸ್ ಎಂಬುವವರು ಮನೆ ನಿರ್ಮಾಣ ಮಾಡುತ್ತಿದ್ದು, (Local News) ಮನೆಯ ಮೇಲೆ ಹಾದು ಹೋಗಿರುವ ವಿದ್ಯುತ್ ಸರಬರಾಜು ಲೈನ್ ತೆರವುಗೊಳಿಸಲು ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ (Local News) ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ಬೆಸ್ಕಾಂ ಇಲಾಖೆಯ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ದಲಿತ ಸಂಘರ್ಷ ಸಮಿತಿಯ ಜಿ.ವಿ.ಗಂಗಪ್ಪ ಮಾತನಾಡಿ, (Local News) ಇಂದಿನ ಕಾಲದಲ್ಲಿ ಅಧಿಕಾರಿಗಳಿಗೆ ಸಂಘಟನೆಗಳ ಮೂಲಕ ಕೆಲಸ ಕಲಿಯಬೇಕಾ ಎಂಬ ಅನುಮಾನ ಮೂಡತೊಡಗಿದೆ. ಸುಮಾರು ತಿಂಗಳುಗಳ ಹಿಂದೆ ಕರಿಗಾನತಮ್ಮನಹಳ್ಳಿ ಗ್ರಾಮದ ಶ್ರೀನಿವಾಸ್ ಎಂಬುವವರ ಮನೆ ಅತಿವೃಷ್ಟಿಯಿಂದ ಹಾಳಾಗಿತ್ತು. (Local News) ಅವರಿಗೆ ಸರ್ಕಾರದಿಂದ ಮನೆ ಮಂಜೂರಾಗಿತ್ತು. (Local News) ಮನೆ ನಿರ್ಮಾಣ ಮಾಡುವಾಗ ವಿದ್ಯುತ್ ಸರಬರಾಜು ತಂತಿಗಳು ಮನೆಯ ಮೇಲೆ ಹಾದುಹೋಗಿರುವ ಕಾರಣ ಬೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ತೆರವುಗೊಳಿಸಲು ಮನವಿ ಮಾಡಲಾಗಿತ್ತು. ಆದರೆ ಅಧಿಕಾರಿಗಳು ಮಾತ್ರ ತೆರವುಗೊಳಿಸುವಲ್ಲಿ ವಿಫಲರಾಗಿದ್ದಾರೆ. (Local News) ದಲಿತ ಕುಟುಂಬಕ್ಕೆ ಸೇರಿದ ಶ್ರೀನಿವಾಸ್ ರವರಿಗೆ ಮನೆಯಿಲ್ಲದೇ ಅಂಬೇಡ್ಕರ್ ಸಮುದಾಯ (Local News) ಭವನದಲ್ಲಿ ವಾಸಮಾಡುತ್ತಿದ್ದಾರೆ. ಮನೆ ನಿರ್ಮಾಣ ಮಾಡಿಕೊಳ್ಳಲು ಸರ್ಕಾರ ಮಂಜೂರು ಮಾಡಿದರು ಮನೆ ನಿರ್ಮಾಣ ಮಾಡಿಕೊಳ್ಳಲು ಆಗದೇ ಪರದಾಡುವಂತಾಗಿದೆ. (Local News) ಆದ್ದರಿಂದ ಕೂಡಲೇ ದಲಿತ ಕುಟುಂಬದ ಸಮಸ್ಯೆಯನ್ನು ಬಗೆಹರಿಸಬೇಕೆಂದು ಒತ್ತಾಯಿಸಿದರು.
ಬಳಿಕ ಮುಖಂಡ ಆದಿನಾರಾಯಣಪ್ಪ ಮಾತನಾಡಿ, (Local News) ಈ ಸಮಸ್ಯೆಯ ಬಗ್ಗೆ ನಾವು ಅನೇಕ ಬಾರಿ ಮನವಿ ನೀಡಿದ್ದೇವೆ. ಮನವಿ ನೀಡಿದಾಗಲೆಲ್ಲಾ ಕಾಲಾವಕಾಶ ಕೇಳುತ್ತಾರೆ. ಬಳಿಕ ಮರೆಯುತ್ತಾರೆ. ಕಾಮಗಾರಿ ನಡೆಸಲು ಅನುದಾನದ ಕೊರತೆಯ ನೆಪ ಹೇಳುತ್ತಾರೆ. (Local News) ಪ್ರಾಣಹಾನಿ ಸಂಭವಿಸುವಂತಹ ಪ್ರಕರಣಗಳಲ್ಲಿ ಕೂಡಲೇ ಸಮಸ್ಯೆ ಬಗೆಹರಿಸಲು ಪ್ರತ್ಯೇಕವಾದ ಯೋಜನೆ ಇರುತ್ತದೆ. ಅದರ ಮೂಲಕ ಸಮಸ್ಯೆ ಬಗೆಹರಿಸಬಹುದಾಗಿತ್ತು. (Local News) ಆದರೆ ಅಧಿಕಾರಿಗಳು ಮಾತ್ರ ಈ ಕುರಿತು ಕ್ರಮ ವಹಿಸಿಲ್ಲ ಎಂದು ಆರೋಪಿಸಿದರು.
ಬಳಿಕ ಬೆಸ್ಕಾಂ ಇಲಾಖೆಯ ಅಧಿಕಾರಿ ವಿಶ್ವಾಸ್ ಕರಿಗಾನತಮ್ಮನಹಳ್ಳಿ (Local News) ಗ್ರಾಮದ ಸಮಸ್ಯೆಯನ್ನು ಒಂದು ವಾರದೊಳಗೆ ಬಗೆಹರಿಸುತ್ತೇವೆ. ನಾನು ಒಂದೂವರೆ ತಿಂಗಳ ಹಿಂದೆಯಷ್ಟೆ ಗುಡಿಬಂಡೆ ಇಲಾಖೆಗೆ ಬಂದಿದ್ದೇನೆ. (Local News) ಸಮಸ್ಯೆಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ. ಕೂಡಲೇ ಅಗತ್ಯ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಭರವಸೆ ನೀಡಿದರು. ಬೆಸ್ಕಾ ಇಲಾಖೆಯ (Local News) ಅಧಿಕಾರಿ ಭರವಸೆಯ ಬಳಿಕ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಕೈ ಬಿಟ್ಟರು. ಈ ವೇಳೆ (Local News) ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಇಸ್ಕೂಲಪ್ಪ, ಆದಿನಾರಾಯಣಪ್ಪ, ನಾರಾಯಣಸ್ವಾಮಿ, ರಾಜು ಸೇರಿದಂತೆ ಹಲವರು ಇದ್ದರು.