Local News – ಗ್ರಾಮಗಳ ಆರ್ಥಿಕ ಚಟುವಟಿಕೆಗಳಿಗೆ ಜೀವ ತುಂಬುವಲ್ಲಿ ಸಹಕಾರ ಸಂಘಗಳ ಪಾತ್ರ ಅತ್ಯಂತ ದೊಡ್ಡದು. ಈ ಸಂಸ್ಥೆಗಳು ಸದೃಢವಾಗಿ, ಜೀವಂತವಾಗಿರಬೇಕೆಂದರೆ ನಮ್ಮೆಲ್ಲರ ಸಹಕಾರ ಅತಿ ಮುಖ್ಯ. ಆದ್ದರಿಂದ, ಪ್ರತಿಯೊಬ್ಬರೂ ಸಹಕಾರ ಸಂಘಗಳ ವ್ಯಾಪ್ತಿಯಲ್ಲಿರುವ ಬ್ಯಾಂಕ್‌ಗಳಲ್ಲೇ (ಉದಾಹರಣೆಗೆ ಡಿಸಿಸಿ ಬ್ಯಾಂಕ್) ತಮ್ಮ ಹಣಕಾಸು ವ್ಯವಹಾರಗಳನ್ನು ನಡೆಸಿ, ಗ್ರಾಮೀಣ ಭಾಗದ ಜನರ ಸಮಗ್ರ ಅಭಿವೃದ್ಧಿಗೆ ದಾರಿ ಮಾಡಿಕೊಡಬೇಕು ಎಂದು ಸಹಕಾರ ಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಹೆಚ್.ವಿ. ನಾಗರಾಜ್ ಅವರು ಕರೆ ನೀಡಿದರು.

Local News – ಸಹಕಾರ ಸಂಘಗಳ ಉಳಿವು ನಮ್ಮೆಲ್ಲರ ಕೈಯಲ್ಲಿದೆ
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ವಕ್ಕಲಿಗರ ಭವನದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ, ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಒಕ್ಕೂಟ ಹಾಗೂ ಇತರೆ ಸಹಕಾರ ಸಂಘಗಳ ಸಹಯೋಗದಲ್ಲಿ ಆಯೋಜಿಸಿದ್ದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಇದ್ದರೆ ಮಾತ್ರ ಅಭಿವೃದ್ದಿ ಸಾಧ್ಯ ಎಂದು ತಿಳಿಸಿದರು. ಸಹಕಾರ ಸಂಘಗಳ ಬೆಳವಣಿಗೆಗೆ ಪಕ್ಷಾತೀತವಾಗಿ ಶ್ರಮಿಸಬೇಕು. ರೈತರು ಸಹಕಾರ ಸಂಘಗಳಲ್ಲಿ ಹಣಕಾಸು ವ್ಯವಹಾರ ನಡೆಸುವುದರ ಮೂಲಕ ಸಂಘಗಳನ್ನು ಉಳಿಸಿ ಬೆಳೆಸಬೇಕಿದೆ ಎಂದರು. ನಮಗೆ ಶೂನ್ಯ ಬಡ್ಡಿದರದಲ್ಲಿ ಸಹಕಾರ ಸಂಘಗಳಿಂದ ಸಾಲ ಬೇಕು, ಆದರೆ ಹಣಕಾಸು ವ್ಯವಹಾರ ಮಾತ್ರ ಬೇರೆ ಬ್ಯಾಂಕುಗಳಲ್ಲಿ ಮಾಡುತ್ತಾರೆ. ಎಲ್ಲಾ ರೈತರು ಸಹಕಾರ ಬ್ಯಾಂಕ್‌ಗಳಲ್ಲಿ ವ್ಯವಹಾರಕ್ಕೆ ಆದ್ಯತೆ ನೀಡಬೇಕು. ಈ ಹಿಂದೆ ಗುಡಿಬಂಡೆ ಡಿಸಿಸಿ ಬ್ಯಾಂಕ್‌ನಲ್ಲಿ ಸುಮಾರು 2 ಕೋಟಿ ರೂಪಾಯಿ ಅವ್ಯವಹಾರ ನಡೆದಿದ್ದು, ದೂರು ದಾಖಲಿಸಿದ್ದರೂ, ಅವ್ಯವಹಾರ ಮಾಡಿದವರ ಪರವಾಗಿ ಯಾರೋ ನ್ಯಾಯಾಲಯದಿಂದ ತಡೆ ತರುತ್ತಿದ್ದಾರೆ. ಅವ್ಯವಹಾರ ಮಾಡದೆ ಇದ್ದರೆ ತಡೆ ತರಬೇಕಾದ ಅಗತ್ಯವೇನಿತ್ತು? ಎಂದು ಅವರು ಪ್ರಶ್ನಿಸಿದರು.

Local News – ಹೈನುಗಾರಿಕೆಗೆ ಒತ್ತು: ಡಿಸಿಸಿ ಬ್ಯಾಂಕ್ ನೆರವಿಗೆ ಮನವಿ
ಬಳಿಕ ತಾಲೂಕು ಚಿಮುಲ್ ಶಿಬಿರ ಕಚೇರಿಯ ಉಪವ್ಯವಸ್ಥಾಪಕಿ ಎಂ.ಸಿ. ನವ್ಯಶ್ರೀ ಮಾತನಾಡಿ, ಸಹಕಾರ ಸಪ್ತಾಹ 7 ದಿನಗಳ ಕಾಲ ನಡೆಯುತ್ತಿದ್ದು, ದೇಶದಲ್ಲಿ 8 ಲಕ್ಷಕ್ಕೂ ಹೆಚ್ಚು ಸಹಕಾರ ಸಂಘಗಳು, ಸುಮಾರು 30 ಲಕ್ಷ ರೈತರು ನೊಂದಾಯಿತರಾಗಿದ್ದಾರೆ. ವರ್ಷಕ್ಕೆ 8 ಲಕ್ಷ ಜನ ಡಿಪ್ಲೊಮೋ ಕೋರ್ಸ್ ಪಡೆಯುತ್ತಾರೆ. ಸಹಕಾರ ಕ್ಷೇತ್ರದಲ್ಲಿ ಪರಸ್ಪರ ಹೊಂದಾಣಿಕೆ ಇದ್ದರೆ ಮಾತ್ರ ಅಭಿವೃದ್ದಿ ಸಾಧ್ಯ ಎಂದು ಅವರು ಅಭಿಪ್ರಾಯ ಪಟ್ಟರು. ತಾಲೂಕಿನಲ್ಲಿ ಹೈನುಗಾರಿಕೆಗೆ ಉತ್ತೇಜನ ನೀಡಲು ಡಿಸಿಸಿ ಬ್ಯಾಂಕ್‌ನಿಂದ ಸಾಲ ನೀಡಿ ಹಾಲಿನ ಉತ್ಪಾದನೆ ಹೆಚ್ಚಿಸಲು ಸಹಕಾರ ಬೇಕೆಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಹೆಚ್.ಎನ್. ಮಂಜುನಾಥರೆಡ್ಡಿಯವರನ್ನು ಮನವಿ ಮಾಡಿದರು.
Local News – ಚಿಕ್ಕಬಳ್ಳಾಪುರಕ್ಕೆ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಆಗ್ರಹ
ಬಳಿಕ ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ವೈ.ಎ. ಅಶ್ವತ್ಥರೆಡ್ಡಿ ಮಾತನಾಡಿ, ನಮ್ಮ ಜಿಲ್ಲೆಯ ಎಲ್ಲಾ ಸಹಕಾರ ಸಂಘಗಳು ಬೆಳೆದಾಡಬೇಕಾದರೆ, ಡಿಸಿಸಿ ಬ್ಯಾಂಕ್ ಕೋಲಾರ ಜಿಲ್ಲೆಯಿಂದ ವಿಭಜನೆಗೊಂಡು ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರತ್ಯೇಕವಾಗಿ ರೂಪಿಸಬೇಕಿದೆ ಎಂದು ಅಭಿಪ್ರಾಯ ಪಟ್ಟರು. ಕಾರ್ಯಕ್ರಮದಲ್ಲಿ ತಾಲೂಕಿನ 62 ಡೈರಿಗಳ ಪೈಕಿ ಉತ್ತಮ ಗುಣಮಟ್ಟದ ಹಾಲು ಪೂರೈಸಿದ ಮೇಡಿಮಾಕಲಹಳ್ಳಿ ಡೈರಿ, ಎಲ್ಲೋಡು ಮಹಿಳಾ ಡೈರಿ, ಭೋಗೇನಹಳ್ಳಿ ಡೈರಿ, ಚೆಂಡೂರು ಮಹಿಳಾ ಡೈರಿಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು. Read this also : ಚಿಕ್ಕಬಳ್ಳಾಪುರದಲ್ಲಿ ‘ಮನೆ ಮನೆ ಪೊಲೀಸ್’ ಅಭಿಯಾನ: ಅಪರಾಧ ತಡೆಯಲು ಜನರ ಸಹಕಾರ ಅತಿ ಮುಖ್ಯ – SP ಕುಶಲ್ ಚೌಕ್ಸೆ

Local News – ಕಾರ್ಯಕ್ರಮದಲ್ಲಿದ್ದ ಗಣ್ಯರು
ಈ ಸಂದರ್ಭದಲ್ಲಿ ಕೋಚಿಮುಲ್ ಮಾಜಿ ನಿರ್ದೇಶ ಆದಿನಾರಾಯಣರೆಡ್ಡಿ, ಜಿಲ್ಲಾ ಸಹಕಾರ ಒಕ್ಕೂಟದ ಉಪಾಧ್ಯಕ್ಷ ಮುರಳಿ, ನಿರ್ದೇಶಕ ವೇಣುಗೋಪಾಲ್, ಸುರೇಂದ್ರರೆಡ್ಡಿ, ಟಿಎಪಿಸಿಎಂಎಸ್ ಅಧ್ಯಕ್ಷ ಎಂ. ವಿ. ಶಿವಣ್ಣ, ಪಿ.ಎಲ್.ಡಿ ಬ್ಯಾಂಕ್ ಉಪಾಧ್ಯಕ್ಷೆ ಸರಸ್ಪತಮ್ಮ, ಸಹಕಾರ ಅಭಿವೃದ್ದಿ ಅಧಿಕಾರಿ ಪ್ರೇಮ್ ಕುಮಾರ್, ಕೋಚಿಮುಲ್ ಮೇಲ್ವಿಚಾರಕಿ ಎ. ಅನ್ಸಾರಿ, ಪಿ.ಎಲ್.ಡಿ ಬ್ಯಾಂಕ್ ವ್ಯವಸ್ಥಾಪಕ ಸಂತೋಷ್, ಕೃಷಿಕ ಸಮಾಜದ ಅಧ್ಯಕ್ಷ ಮಂಜುನಾಥರೆಡ್ಡಿ ಹಾಗೂ ಇತರರು ಉಪಸ್ಥಿತರಿದ್ದರು.
