Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಅಂಬೇಡ್ಕರ್ ಪುತ್ಥಳಿ ಮುಂಭಾಗದಲ್ಲಿ ಬಲಿಜ ಸಂಘದ ವತಿಯಿಂದ ಕೈವಾರ ತಾತಯ್ಯ ಪುತ್ಥಳಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ವಿವಾದ ಸೃಷ್ಟಿಯಾಗಿತ್ತು. ಈ ಸಂಬಂಧ ಪುತ್ಥಳಿ ನಿರ್ಮಾಣಕ್ಕೆ ಉದ್ದೇಶಿತ ಜಾಗವನ್ನು ಮೂಲ ಖಾತೆದಾರನಿಗೆ ಮಂಜೂರು ಮಾಡಿಸಬೇಕೆಂದು ಬಲಿಜ ಸಂಘದ ವತಿಯಿಂದ ಗುಡಿಬಂಡೆ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
Local News – ಬಲಿಜ ಸಂಘದ ಬೇಡಿಕೆ ಏನು?
ಈ ವೇಳೆ ಬಲಿಜ ಸಮುದಾಯದ ಮುಖಂಡ ಅಂಬರೀಶ್ ಮಾತನಾಡಿ, ನಮ್ಮ ಸಮುದಾಯದ ಆರಾಧ್ಯ ದೈವವಾದ ಕೈವಾರ ತಾತಯ್ಯ ನವರ ಪುತ್ಥಳಿ ನಿರ್ಮಾಣಕ್ಕಾಗಿ ನಮ್ಮ ಸಮುದಾಯದ ಮುಖಂಡರಾದ ಜಿ.ಟಿ.ಶ್ರೀನಿವಾಸ್ ಎಂಬುವವರು ತಮಗೆ ಸೇರಿದ ಗುಡಿಬಂಡೆ ಸ.ನಂ 259/3 ರಲ್ಲಿ ಜಾಗ ನೀಡಿದ್ದರು. ಈ ಸ.ನಂ ನಲ್ಲಿ ಅ ಖರಾಬು 9 ಗುಂಟೆ ಹಾಗೂ ಬ ಖರಾಬು 2 ಗುಂಟೆ ಇದೆ. ಈ ಜಾಗವನ್ನು ಈ ಹಿಂದೆಯೇ ಶ್ರೀ ವೆಂಕಟೇಶ್ವರ ಚಿತ್ರ ಮಂದಿರದ ಉದ್ದೇಶಕ್ಕಾಗಿ ಭೂ ಪರಿವರ್ತನೆ ಯಾಗಿರುತ್ತದೆ. ಜೊತೆಗೆ ಅ ಮತ್ತು ಬ ಖರಾಬು ಸಹ ಮೂಲ ಖಾತೆದಾರನ ಪರವಾಗಿ ಉಚ್ಚ ನ್ಯಾಯಾಲಯದಲ್ಲಿ ಆದೇಶವಾಗಿರುತ್ತದೆ. ಇನ್ನೂ ಸರ್ಕಾರಕ್ಕೆ ಕಟ್ಟಬೇಕಾದ ಕಿಮ್ಮತ್ತು ಕಟ್ಟಲು ಸಹ ನಾವು ಮನವಿ ಸಲ್ಲಿಸಿದ್ದೆವು. ಆದರೂ ಸಹ ಇಲ್ಲಿಯವರೆಗೂ ನಮಗೆ ನೊಟೀಸ್ ಸಹ ನೀಡಿರುವುದಿಲ್ಲ. ಆದ್ದರಿಂದ ಕೂಡಲೇ ತಾಲೂಕು ಆಡಳಿತ ನಮ್ಮ ಮನವಿಗೆ ಸ್ಪಂಧಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಬಲಿಜ ಸಂಘದ ವತಿಯಿಂದ ಉಗ್ರ ಹೊರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
Local News – ಬಲಿಜ ಸಂಘದ ಅಸಮಾಧಾನಕ್ಕೆ ಕಾರಣಗಳು
ಬಲಿಜ ಸಮುದಾಯದವರಿಗೆ ಸೇರಿದ ಜಾಗದಲ್ಲಿ ಕೈವಾರ ತಾತಯ್ಯ ನವರ ಪುತ್ಥಳಿ ನೀಡಲು ಬಲಿಜ ಸಂಘದ ವತಿಯಿಂದ ತೀರ್ಮಾನಿಸಿ ಅದರಂತೆ ಪುತ್ಥಳಿ ನಿರ್ಮಾಣಕ್ಕೆ ಗುದ್ದಲಿ ಪೂಜೆ ಕಾರ್ಯಕ್ರಮವನ್ನು ಸಹ ನೆರವೇರಿಸಲಾಗಿತ್ತು. ಆದರೆ ಅಂದು ಕೆಲವೊಂದು ಕಾರಣಗಳಿಂದ ಈ ಕಾರ್ಯ ಸ್ಥಗಿತಗೊಂಡಿತ್ತು. ಬಳಿಕ ಜಿಲ್ಲಾಡಳಿತ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸ್ಥಳೀಯ ಅಧಿಕಾರಿಗಳನ್ನೊಳಗೊಂಡ ತಂಡ ಸದರಿ ಜಾಗದ ಸರ್ವೆ ಸಹ ಮಾಡಲಾಗಿತ್ತು. ಸರ್ವೆ ಕಾರ್ಯ ಮುಗಿದು ಎರಡು ತಿಂಗಳು ಕಳೆದಿದೆ. ಆದರೂ ಸಹ ಇನ್ನೂ ಈ ಕುರಿತು ನಮಗೆ ಮಾಹಿತಿ ನೀಡಿಲ್ಲ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ನಮ್ಮ ಸಮುದಾಯಕ್ಕೆ ಅನುಕೂಲವಾಗುವಂತೆ ಮಾಡಬೇಕೆಂದು ಒತ್ತಾಯಿಸಿದರು. Read this also : Gudibande : ಒಂದೇ ಜಾಗದಲ್ಲಿ ಪುತ್ಥಳಿ ನಿರ್ಮಾಣ ಮಾಡಲು ಎರಡು ಸಮುದಾಯಗಳ ನಡುವೆ ವಾಗ್ವಾದ
Local News – ಮುಖಂಡರ ಉಪಸ್ಥಿತಿ
ಈ ವೇಳೆ ತಾಲೂಕು ಬಲಿಜ ಸಂಘದ ಅಧ್ಯಕ್ಷ ವೆಂಕಟರಾಯಪ್ಪ, ಪಪಂ ಅಧ್ಯಕ್ಷ ವಿಕಾಸ್, ಬಲಿಜ ಸಮುದಾಯದ ಶ್ರೀನಿವಾಸ ನಾಯ್ಡು, ಸಾಂಬ ಮೂರ್ತಿ, ದ್ವಾರಕೀನಾಥನಾಯ್ಡು, ರಾಜಪ್ಪ, ಜಗದೀಶ್, ಜಿ.ಟಿ.ಶ್ರೀನಿವಾಸ್, ಪ್ರೆಸ್ ಶಿವಪ್ಪ, ದೇವರಾಜು, ಶ್ರೀನಾಥ್, ರಾಜೇಶ್, ಶ್ರೀನಿವಾಸ್ ಗಾಂಧಿ ಸೇರಿದಂತೆ ಹಲವರು ಇದ್ದರು.