ಕಾಡು ಪ್ರಾಣಿಗಳು ನಾಡಿಗೆ ನುಗ್ಗುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಆದರೆ ಇಲ್ಲೊಂದು ಕಡೆ ಚಿರತೆಯೊಂದು ನೇರವಾಗಿ ಪೊಲೀಸ್ ಠಾಣೆಯೊಳಗೆ ನುಗ್ಗಿ, ಅಲ್ಲಿದ್ದ ನಾಯಿಯ ಮೇಲೆ ದಾಳಿ ನಡೆಸಿರುವ ಭಯಾನಕ ಘಟನೆ ನಡೆದಿದೆ. ಈ ದೃಶ್ಯ ಇದೀಗ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ನೋಡಿದ್ರೆ ಎಂಥವರೂ ಬೆಚ್ಚಿಬೀಳುವಂತಿದೆ. ಈ ಘಟನೆಯ ಸಂಪೂರ್ಣ ವಿವರ ಇಲ್ಲಿದೆ ನೋಡಿ.

CCTV Footage – ಏನಿದು ಘಟನೆ?
ಉತ್ತರಾಖಂಡದ ನೈನಿತಾಲ್ ಜಿಲ್ಲೆಯ ಬೇತಾಲ್ ಘಾಟ್ (Betalghat) ಪೊಲೀಸ್ ಠಾಣೆಯಲ್ಲಿ ನವೆಂಬರ್ 17 ರಂದು ತಡರಾತ್ರಿ ಈ ಘಟನೆ ನಡೆದಿದೆ. ರಾತ್ರಿ ವೇಳೆ ಠಾಣೆಯ ಗೇಟ್ ತೆರೆದಿರುವುದನ್ನು ಗಮನಿಸಿದ ಚಿರತೆಯೊಂದು ಸದ್ದಿಲ್ಲದೆ ಒಳಗೆ ನುಗ್ಗಿದೆ. ಪೊಲೀಸ್ ಠಾಣೆಯ ಆವರಣದಲ್ಲಿ ಮಲಗಿದ್ದ ಸಾಕು ನಾಯಿಯೊಂದು ಚಿರತೆಯನ್ನು ಕಂಡ ತಕ್ಷಣ ಬೊಗಳಲು ಶುರು ಮಾಡಿದೆ. ಅಷ್ಟೇ ಅಲ್ಲದೆ, ತನ್ನ ಪ್ರಾಣದ ಹಂಗು ತೊರೆದು ಚಿರತೆಯ ವಿರುದ್ಧ ತಿರುಗಿಬಿದ್ದಿದೆ. Read this also : ರಾಜಸ್ಥಾನದಲ್ಲಿ ಚಿರತೆಗೆ ರಾಖಿ ಕಟ್ಟಿದ ಮಹಿಳೆ: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೋ…!
ಆದರೆ ಬಲಶಾಲಿಯಾದ ಚಿರತೆಯ ಮುಂದೆ ನಾಯಿಯ ಆಟ ನಡೆಯಲಿಲ್ಲ. ಕ್ಷಣಾರ್ಧದಲ್ಲಿ ನಾಯಿಯ ಕತ್ತನ್ನು ಕಚ್ಚಿ ಹಿಡಿದ ಚಿರತೆ, ಅದನ್ನು ಕತ್ತಲಲ್ಲಿ ಎಳೆದೊಯ್ದಿದೆ. ಈ ಎಲ್ಲಾ ದೃಶ್ಯಗಳು ಅಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ.
CCTV Footage – ನಾಯಿ ಪ್ರಾಣಾಪಾಯದಿಂದ ಪಾರಾಯಿತೇ?
ವಿಡಿಯೋದಲ್ಲಿ ಚಿರತೆ ನಾಯಿಯನ್ನು ಕಚ್ಚಿಕೊಂಡು ಹೋಗುವುದನ್ನು ನಾವು ನೋಡಬಹುದು. ಆದರೆ ಮೂಲಗಳ ಪ್ರಕಾರ, ನಾಯಿ ತೀವ್ರವಾಗಿ ಹೋರಾಡಿ ಚಿರತೆಯ ಬಾಯಿಂದ ತಪ್ಪಿಸಿಕೊಂಡು ತನ್ನ ಪ್ರಾಣ ಉಳಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ. ಅಷ್ಟೊಂದು ಭಯಂಕರ ಪ್ರಾಣಿಯ ಹಿಡಿತದಿಂದ ನಾಯಿ ಪಾರಾಗಿರುವುದು ನಿಜಕ್ಕೂ ಪವಾಡವೇ ಸರಿ!

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
CCTV Footage – ಆತಂಕದಲ್ಲಿ ಗ್ರಾಮಸ್ಥರು
ಪೊಲೀಸರು ಇರುವ ಠಾಣೆಯೇ ಸುರಕ್ಷಿತವಾಗಿಲ್ಲ ಎಂದರೆ ಸಾಮಾನ್ಯ ಜನರ ಪಾಡೇನು ಎಂಬ ಪ್ರಶ್ನೆ ಇದೀಗ ಹುಟ್ಟಿಕೊಂಡಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ. ಜನವಸತಿ ಪ್ರದೇಶಗಳಲ್ಲಿ ಹೀಗೆ ಕಾಡುಪ್ರಾಣಿಗಳು ರಾಜಾರೋಷವಾಗಿ ಓಡಾಡುತ್ತಿರುವುದು ಸುರಕ್ಷತೆಯ ಬಗ್ಗೆ ಪ್ರಶ್ನೆ ಮೂಡಿಸಿದೆ. ಅರಣ್ಯ ಇಲಾಖೆ ಇತ್ತ ಗಮನಹರಿಸಿ, ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
