Legal Awareness – ಸಮಾಜದಲ್ಲಿ ಶಾಂತಿ ನೆಲೆಸಲು ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಹಾಗೂ ನೆರವು ಅಗತ್ಯವಾಗಿದ್ದು, ಪ್ರತಿಯೊಬ್ಬರಿಗೂ ಕಾನೂನಿನ ಅರಿವಿನ ಜೊತೆಗೆ ನೆರವು ನೀಡುವುದೇ ಕಾನೂನು ಸೇವಾ ಪ್ರಾಧಿಕಾರದ ಪ್ರಮುಖ ಉದ್ದೇಶವಾಗಿದೆ ಎಂದು ಗುಡಿಬಂಡೆ ಜೆಎಂಎಫ್‌ಸಿ ನ್ಯಾಯಾಧೀಶೆ ಸವಿತಾ ರುದ್ರಗೌಡ ಚಿಕ್ಕನಗೌಡರ್ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಹೊರವಲಯದ ಜೆ.ಎಂ.ಎಫ್.ಸಿ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘದ ವತಿಯಿಂದ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಮಾತನಾಡಿದರು.

Legal Awareness – ಪ್ರತಿಯೊಬ್ಬರಿಗೂ ಕಾನೂನು ಸೇವೆ ದೊರೆಯಬೇಕು
ಸಮಾಜದಲ್ಲಿ ಅನೇಕ ಬಡವರ್ಗದವರು ಕಾನೂನು ಸೇವೆ ಪಡೆಯಲು ವಿಫಲರಾಗುತ್ತಿರುತ್ತಾರೆ. ಆದ್ದರಿಂದ ಪ್ರತಿಯೊಬ್ಬರಿಗೂ ಕಾನೂನು ಸೇವೆ ದೊರೆಯಬೇಕೆಂಬ ಉದ್ದೇಶದಿಂದ ಕಾನೂನು ಸೇವಾ ಪ್ರಾಧಿಕಾರ ಸ್ಥಾಪನೆ ಮಾಡಲಾಗಿದೆ. 1987 ರಲ್ಲಿ ಪ್ರತಿಯೊಬ್ಬರಿಗೂ ಕಾನೂನು ಸೇವೆ ದೊರೆಯಬೇಕೆಂಬ ಉದ್ದೇಶದಿಂದ ಕಾನೂನು ಸೇವೆ ಕಾಯಿದೆ ರೂಪುಗೊಂಡಿತ್ತು. ಆದರೆ 1995 ಅದು ಜಾರಿಗೆ ಬಂದಿದೆ. ಸದ್ಯ ತಾಲೂಕು, ಜಿಲ್ಲೆ, ರಾಜ್ಯ ಸೇರಿದಂತೆ ರಾಷ್ಟ್ರೀಯ ಮಟ್ಟದಲ್ಲೂ ಸಹ ಕಾನೂನು ಸೇವಾ ಪ್ರಾಧಿಕಾರಗಳು ಕೆಲಸ ನಿರ್ವಹನಿಸುತ್ತಿದೆ. ಕಾನೂನಿನ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕಾನೂನು ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಕಾನೂನು ಸೇವಾ ಪ್ರಾಧಿಕಾರ ಕೆಲಸ ಮಾಡುತ್ತದೆ ಎಂದು ಕಾನೂನು ಸೇವಾ ಪ್ರಾಧಿಕಾರದ ಮಹತ್ವದ ಬಗ್ಗೆ ತಿಳಿಸಿಕೊಟ್ಟರು. Read this also : ಮೊಬೈಲ್ ಹ್ಯಾಕ್ ಆಗಿದೆಯೇ? ಇಲ್ಲಿದೆ ಪತ್ತೆ ಹಚ್ಚುವ ಮತ್ತು ಸುರಕ್ಷಿತವಾಗಿರುವ ಕಂಪ್ಲೀಟ್ ಗೈಡ್..!
Legal Awareness – ದುರ್ಬಲ ವರ್ಗದವರಿಗೆ ಉಚಿತ ನೆರವೇ ಪ್ರಮುಖ ಉದ್ದೇಶ
ಬಳಿಕ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಹಿರಿಯ ವಕೀಲ ರಾಮನಾಥ ರೆಡ್ಡಿ, ಕಾನೂನು ಸೇವೆಗಳ ದಿನವನ್ನು ಆಚರಿಸುವ ಮುಖ್ಯ ಉದ್ದೇಶವು ಸಮಾಜದ ದುರ್ಬಲ ವರ್ಗದವರಿಗೆ, ಆರ್ಥಿಕವಾಗಿ ಹಿಂದುಳಿದವರಿಗೆ, ಮಹಿಳೆಯರಿಗೆ, ವಿಕಲಚೇತನರಿಗೆ ಉಚಿತ ಕಾನೂನು ಸಹಾಯ ಮತ್ತು ಬೆಂಬಲವನ್ನು ಒದಗಿಸುವುದಾಗಿದೆ. ಮತ್ತು ಕಾನೂನು ಸೇವೆಗಳ ಪ್ರಾಧಿಕಾರಗಳ ಕಾಯಿದೆ ಮತ್ತು ಈ ಕಾಯ್ದೆಯ ಅಡಿಯಲ್ಲಿ ಲಭಿಸುವ ಉಚಿತ ಕಾನೂನು ಸೇವೆಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಕಾನೂನಿನ ಅರಿವು ಪಡೆದುಕೊಂಡು ಸಮಾಜದಲ್ಲಿ ಸನ್ನಡತೆಯಿಂದ ಬಾಳಬೇಕು ಎಂದರು.

Legal Awareness – ಕಾರ್ಯಕ್ರಮದಲ್ಲಿ ಹಾಜರಿದ್ದವರು
ಈ ವೇಳೆ ವಕೀಲರ ಸಂಘಧ ಅಧ್ಯಕ್ಷ ಟಿ.ಸಿ.ಅಶ್ವತ್ಥರೆಡ್ಡಿ, ವಕೀಲರಾದ ನಂದೀಶ್ವರ ರೆಡ್ಡಿ, ನರಸಿಂಹಪ್ಪ ನರೇಂದ್ರ, ನ್ಯಾಯಾಲಯದ ಶಿರಸ್ತೇದಾರ್ ಶ್ರೀನಿವಾಸ, ನ್ಯಾಯಾಲಯದ ಸಿಬ್ಬಂದಿ ಕಾನೂನು ಸೇವಾ ಸಮಿತಿಯ ಸುರೇಶ್, ಪ್ಯಾರಾ ಲೀಗಲ್ ವಾಲೆಂಟಿಯರ್ ಅಶ್ವತ್ಥನಾರಾಯಣ್ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು ಆಶಾ ಕಾರ್ಯಕರ್ತೆಯರು ಹಾಗೂ ಸಾರ್ವಜನಿಕರು ಹಾಜರಿದ್ದರು.
