Monday, January 26, 2026
HomeNationalKurnool Nurse : ಮಾಜಿ ಪ್ರಿಯಕರನ ಪತ್ನಿ ಮೇಲೆ ನರ್ಸ್ ಭೀಕರ ಸೇಡು: ಅಪಘಾತ ಮಾಡಿಸಿ...

Kurnool Nurse : ಮಾಜಿ ಪ್ರಿಯಕರನ ಪತ್ನಿ ಮೇಲೆ ನರ್ಸ್ ಭೀಕರ ಸೇಡು: ಅಪಘಾತ ಮಾಡಿಸಿ ಎಚ್‌ಐವಿ (HIV) ರಕ್ತ ಇಂಜೆಕ್ಟ್ ಮಾಡಿದ ಕಿರಾತಕಿ!

ಸಿನಿಮಾ ಕಥೆಗಳನ್ನೂ ಮೀರಿಸುವಂತ ಭೀಕರ ಘಟನೆಯೊಂದು ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ನಡೆದಿದೆ. ಪ್ರೀತಿ ಹಳೆಯದಾದರೂ ಸೇಡು ಮಾತ್ರ ಆರದ ವಿಕೃತ ಮನಸ್ಸಿನ ನರ್ಸ್‌ ಒಬ್ಬಳು, ತನ್ನ ಮಾಜಿ ಪ್ರಿಯಕರನ ಸಂಸಾರವನ್ನೇ ನಾಶ ಮಾಡಲು ಹೋಗಿ ಈಗ ಜೈಲು ಪಾಲಾಗಿದ್ದಾಳೆ. ಪ್ರೀತಿ ನಿರಾಕರಿಸಿದವನ (Kurnool Nurse) ಪತ್ನಿಯನ್ನೇ ಗುರಿಯಾಗಿಸಿಕೊಂಡು ಆಕೆ ನಡೆಸಿದ ಸ್ಕೆಚ್ ಕೇಳಿದರೆ ಮೈ ನಡುಗುತ್ತದೆ.

Kurnool nurse Boya Vasundara arrested for injecting HIV-infected blood into her former lover’s wife after staging a road accident.

Kurnool Nurse – ಪ್ರೀತಿ ಮುರಿದು ಬಿದ್ದಿದ್ದಕ್ಕೆ ವರ್ಷಗಳ ಬಳಿಕ ಸೇಡು!

ಆರೋಪಿ ಬೋಯಾ ವಸುಂದರ (34) ಎಂಬಾಕೆ ವೃತ್ತಿಯಲ್ಲಿ ನರ್ಸ್. ಈಕೆ ಹಿಂದೆ ಒಬ್ಬ ವ್ಯಕ್ತಿಯನ್ನು ಪ್ರೀತಿಸುತ್ತಿದ್ದಳು. ಆದರೆ ಕೆಲವು ಕಾರಣಗಳಿಂದ ಇವರ ಬ್ರೇಕ್ ಅಪ್ ಆಗಿತ್ತು. ಬಳಿಕ ಆತ ಒಬ್ಬ ಮಹಿಳಾ ವೈದ್ಯೆಯನ್ನು ಮದುವೆಯಾಗಿ ಸುಖ ಸಂಸಾರ ನಡೆಸುತ್ತಿದ್ದ. ಇದನ್ನು ಸಹಿಸದ ವಸುಂದರ, ಹೇಗಾದರೂ ಮಾಡಿ ಅವರನ್ನು ದೂರ ಮಾಡಬೇಕು ಎಂದು ಪ್ಲಾನ್ ಮಾಡಿದ್ದಳು. ಸುಮಾರು ಒಂದು ವರ್ಷ ಕಾಲ ಪ್ರಯತ್ನಿಸಿದರೂ ಏನೂ ಸಾಧ್ಯವಾಗದಿದ್ದಾಗ, ಅವಳು ಆರಿಸಿಕೊಂಡ ದಾರಿ ಅತ್ಯಂತ ಭಯಾನಕವಾಗಿತ್ತು.

ಸಿನಿಮಾ ಶೈಲಿಯಲ್ಲಿ ಸಂಚು ರೂಪಿಸಿದ ನರ್ಸ್

ತನ್ನ ಗೆಳತಿ ಹಾಗೂ ಸಹೋದ್ಯೋಗಿ ಜ್ಯೋತಿ (40) ಮತ್ತು ಇತರ ಇಬ್ಬರ ಸಹಾಯ ಪಡೆದ ವಸುಂದರ, ಮೊದಲು ಮಾಜಿ ಪ್ರಿಯಕರನ ಪತ್ನಿಗೆ (ವೈದ್ಯೆ) ಅಪಘಾತ ಮಾಡಿಸಿದ್ದಾಳೆ. ವೈದ್ಯೆ ಕೆಲಸಕ್ಕೆ ಹೋಗುತ್ತಿದ್ದ ವೇಳೆ ಸಂಚು ರೂಪಿಸಿ ಡಿಕ್ಕಿ ಹೊಡೆಸಲಾಗಿದೆ. ಆಕೆ ರಸ್ತೆಯ ಮೇಲೆ ಗಾಯಗೊಂಡು ಬಿದ್ದಾಗ, ಸಹಾಯ ಮಾಡುವ (Kurnool Nurse) ನೆಪದಲ್ಲಿ ವಸುಂದರ ಮತ್ತು ಜ್ಯೋತಿ ಅಲ್ಲಿಗೆ ಧಾವಿಸಿದ್ದಾರೆ.

ಆಸ್ಪತ್ರೆಯಿಂದ ಎಚ್‌ಐವಿ ಸ್ಯಾಂಪಲ್ ಕಳವು!

ಅಪಘಾತಕ್ಕೀಡಾದ ವೈದ್ಯೆಯನ್ನು ಆಟೋ ರಿಕ್ಷಾಗೆ ಹತ್ತಿಸುವಾಗ, ವಸುಂದರ ತನ್ನ ಬಳಿ ಇದ್ದ ಚುಚ್ಚುಮದ್ದನ್ನು ಆಕೆಗೆ ನೀಡಿದ್ದಾಳೆ. ಅದು ಸಾಮಾನ್ಯ ಇಂಜೆಕ್ಷನ್ ಆಗಿರಲಿಲ್ಲ! ತಾನು ಕೆಲಸ ಮಾಡುತ್ತಿದ್ದ ಆಸ್ಪತ್ರೆಯ ಕೋಲ್ಡ್ ಸ್ಟೋರೇಜ್‌ನಿಂದ ಕಳವು ಮಾಡಿದ್ದ ಎಚ್‌ಐವಿ (HIV) ಸೋಂಕಿತ ರಕ್ತವನ್ನು ವೈದ್ಯೆಯ ದೇಹಕ್ಕೆ (Kurnool Nurse) ಇಂಜೆಕ್ಟ್ ಮಾಡಿದ್ದಾಳೆ. ಆಕೆಗೆ ಚಿಕಿತ್ಸೆ ನೀಡುವ ನಾಟಕವಾಡಿ ಅಲ್ಲಿಂದ ಪರಾರಿಯಾಗಿದ್ದಾರೆ.

Kurnool nurse Boya Vasundara arrested for injecting HIV-infected blood into her former lover’s wife after staging a road accident.

ಪೊಲೀಸರ ಬಲೆಗೆ ಬಿದ್ದ ಆರೋಪಿಗಳು

ಸಂತ್ರಸ್ತ ವೈದ್ಯೆಗೆ (Kurnool Nurse)ತನಗೆ ನೀಡಿದ ಇಂಜೆಕ್ಷನ್ ಬಗ್ಗೆ ಅನುಮಾನ ಬಂದು ಪೊಲೀಸರಿಗೆ ದೂರು ನೀಡಿದ್ದಾರೆ. ವೈದ್ಯಕೀಯ ತಪಾಸಣೆ ನಡೆಸಿದಾಗ ಆಕೆಯ ದೇಹದಲ್ಲಿ ಎಚ್‌ಐವಿ ಅಂಶ ಪತ್ತೆಯಾಗಿರುವುದು ದೃಢಪಟ್ಟಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕರ್ನೂಲ್ ಪೊಲೀಸರು ತನಿಖೆ ನಡೆಸಿ, ಸಿಸಿಟಿವಿ ದೃಶ್ಯಾವಳಿ ಮತ್ತು ಆಸ್ಪತ್ರೆಯ ದಾಖಲೆಗಳ ಆಧಾರದ ಮೇಲೆ ವಸುಂದರ, ಜ್ಯೋತಿ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ. Read this also : ಬೆಂಗಳೂರಿನಲ್ಲಿ ಯುವತಿಗೆ ಬೆತ್ತಲೆ ವ್ಯಕ್ತಿಯಿಂದ ಕಿರುಕುಳ; ‘ಯಾರೂ ಸಹಾಯಕ್ಕೆ ಬರಲಿಲ್ಲ’ ಎಂದು ಕಣ್ಣೀರಿಟ್ಟ ಮಹಿಳೆ!

ಕುಟುಂಬದ ಆತಂಕ

ಒಂದೆಡೆ ಅಪಘಾತದ ಗಾಯ, ಮತ್ತೊಂದೆಡೆ ಜೀವನಪರ್ಯಂತ ಕಾಡುವ ಎಚ್‌ಐವಿ ಸೋಂಕು – ಈ ಘಟನೆಯಿಂದ ವೈದ್ಯೆ ಮತ್ತು ಆಕೆಯ ಕುಟುಂಬ ಮಾನಸಿಕವಾಗಿ ಜರ್ಜರಿತವಾಗಿದೆ. ಪ್ರೀತಿ ಹತಾಶೆಯಾದಾಗ ಮನುಷ್ಯ ಎಷ್ಟು ಕ್ರೂರಿಯಾಗಬಲ್ಲ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.

by ISM Kannada News Deskhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular