KPSC Recruitment 2024 – ಕರ್ನಾಟಕ ಲೋಕಸೇವಾ ಆಯೋಗ ಒಟ್ಟು 400 ಪಶುವೈದ್ಯಾಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಕರ್ನಾಟಕದ ಪಶುಸಂಗೋಪನೆ ಹಾಗೂ ಮೀನುಗಾರಿಕೆ ಇಲಾಖೆಯಿಲ್ಲಿ ಖಾಲಿಯಿರುವ 400 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆ.12 ರಿಂದ ಅರ್ಜಿ ಸಲ್ಲಿಸಬಹುದಾಗಿದ್ದು, (KPSC Recruitment 2024) ಸೆ.12 ಕೊನೆಯ ದಿನಾಂಕವಾಗಿದೆ. ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆ ಹಾಗೂ ಇತರೆ ಪ್ರಮುಖ ಅಂಶಗಳನ್ನು ತಿಳಿಯಲು ಈ ಸುದ್ದಿ ಓದಿ…
ಕರ್ನಾಟಕ ಲೋಕಸೇವಾ ಆಯೋಗವು (KPSC Recruitment 2024) 400 ಪಶುವೈದ್ಯಾಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಮೂಲ ವೃಂದದ 342 ಹುದ್ದೆಗಳು ಹಾಗೂ ಬ್ಯಾಕ್ ಲಾಗ್ ನ 48 ಹುದ್ದೆಗಳು ಖಾಲಿಯಿದ್ದು, ಈ ಹುದ್ದೆಗಳು ಗ್ರೂಪ್ ಎ ವೃಂದದ ಹುದ್ದೆಗಳಾಗಿವೆ. ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಯಾವುದೇ ಪಶುವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯದಿಂದ ಅಥವಾ ಭಾರತದಲ್ಲಿ ಕಾನೂನು ಮೂಲಕ ಸ್ಥಾಪಿಸಲಾದ (KPSC Recruitment 2024) ಪಶು ವಿಶ್ವವಿದ್ಯಾಲಯ ಅಥವಾ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಿಂದ ಕನಿಷ್ಠ ಶೇ.50 ಅಂಕಗಳೊಂದಿಗೆ ಬಿ.ವಿ.ಎಸ್.ಸಿ ಅಥವಾ ಬಿ.ವಿ.ಎಸ್.ಸಿ ಮತ್ತು ಎ.ಹೆಚ್ ಪದವಿ ಹೊಂದಿರಬೇಕು. ಅಂಗೀಕೃತ ವಿಶ್ವ ವಿದ್ಯಾಲಯದಿಂದ ಪಶುವೈದ್ಯಕೀಯ ಪದವಿ ಪಡೆದಿರಬೇಕು. ಜೊತೆಗೆ ಕರ್ನಾಟಕ ವೆಟರನೆರಿ ಕೌನ್ಸಿಲ್ ನಲ್ಲಿ ನೊಂದಾಯಿಸಿರಬೇಕು.
ಇನ್ನೂ ಈ (KPSC Recruitment 2024) ಹುದ್ದೆಗಳಿಗೆ 52,650 ರಿಂದ 97,100 ರೂಪಾಯಿವರೆಗೆ ವೇತನ ನೀಡಲಾಗುತ್ತದೆ. ವಯೋಮಿತಿ ವಿಚಾರಕ್ಕೆ ಬಂದರೇ ಕನಿಷ್ಟ 18 ವರ್ಷ ವಯಸ್ಸಾಗಿರಬೇಕು. ಪ.ಜಾತಿ ಹಾಗೂ ಪಂಗಡ, ಪ್ರವರ್ಗ 1 ಅಭ್ಯರ್ಥಿಗಳಿಗೆ 40 ವರ್ಷ, ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಟ 38 ವರ್ಷ, ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಟ 35 ವರ್ಷ ಆಗಿರಬೇಕು. ವಯೋಮಿತಿ ಸಡಿಲಿಕೆ ಸಹ ಮೀಸಲು ವರ್ಗಗಳಿಗೆ ಇರಲಿದೆ.
ಇನ್ನೂ ಅರ್ಜಿ ಸಲ್ಲಿಸುವ (KPSC Recruitment 2024) ಅರ್ಹ ಅಭ್ಯರ್ಥಿಗಳು ನಿಗದಿತ ಶುಲ್ಕ ಪಾವತಿಸಬೇಕಾಗಿದೆ. ಎಸ್‌ಸಿ ಎಸ್‌ಟಿ, ಪ್ರವರ್ಗ 1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ, ಮಾಜಿ ಸೈನಿಕರಿಗೆ 50 ರೂಪಾಯಿ, 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 300 ರೂಪಾಯಿ, ಸಾಮಾನ್ಯ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 600 ರೂ. ನಿಗದಿ ಪಡಿಸಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಈ ನೇಮಕಾತಿ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು https://kpsc.kar.nic.in/ ಗೆ ಭೇಟಿ ನೀಡಬಹುದಾಗಿದೆ.