US Vice President J.D. Vance – ಭಾರತ ವಿರುದ್ದ ಸುಂಕ ಸಮರ ಸಾರಿರುವ ಅಮೇರಿಕಾದ ಉಪಾಧ್ಯಕ್ಷ ಜೆ.ಡಿ.ವಾನ್ಸ್ ಭಾರತಕ್ಕೆ ಭೇಟಿ ನೀಡಿರುವುದನ್ನು ಖಂಡಿಸಿ ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ಗುಡಿಬಂಡೆ ಪಟ್ಟಣದ ಮುಖ್ಯರಸ್ತೆಯಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಗೋ ಬ್ಯಾಕ್ ಜೆ.ಡಿ.ವಾನ್ಸ್ ಎಂಬ ಘೋಷಣೆಗಳನ್ನು ಕೂಗುತ್ತಾ ಆಕ್ರೋಷ ಹೊರಹಾಕಿದರು.
US Vice President J.D. Vance – ಅಮೇರಿಕಾದ ಸುಂಕ ಸಮರ: ರೈತರ ಮೇಲೆ ಪರಿಣಾಮ
ಪ್ರತಿಭಟನೆಯಲ್ಲಿ ಸಿಪಿಎಂ ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಜಯರಾಮರೆಡ್ಡಿ ಮಾತನಾಡಿ, ಈಗಾಗಲೇ ಅಮೇರಿಕಾ ಅಧ್ಯಕ್ಷ ಡೊನಾಲ್ಟ್ ಟ್ರಂಪ್ ಭಾರತದ ಹಲವು ವಸ್ತುಗಳ ಮೇಲೆ ಸುಂಕ ಸಮರವನ್ನು ಸಾರಿದ್ದಾರೆ. ಆದರೆ ಕೃಷಿ ಹೈನುಗಾರಿಕೆ ಸೇರಿದಂತೆ ವಿವಿಧ ಉತ್ಪನ್ನಗಳಿಗೆ ಸುಂಕ ರಹಿತ ಸೇರಿದಂತೆ ಹಲವು ವಾಣಿಜ್ಯ ಮಾತುಕತೆಗಾಗಿ ಅಮೇರಿಕಾದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ರನ್ನು ಭಾರತಕ್ಕೆ ಕಳುಹಿಸಿದ್ದಾರೆ. ಈ ಭೇಟಿ ಭಾರತದ ಆರ್ಥಿಕತೆಗೆ ದೊಡ್ಡ ಪೆಟ್ಟು ಎಂದೇ ಭಾವಿಸಬಹುದಾಗಿದೆ. ಜೊತೆಗೆ ದೇಶದ ರೈತಾಪಿ ವರ್ಗದ ಮೇಲೆ ದೊಡ್ಡ ಹೊಡೆತ ಬೀಳಲಿದೆ ಎಂದು ಆಕ್ರೋಷ ಹೊರಹಾಕಿದರು.
US Vice President J.D. Vance – ದೇಶಕ್ಕೆ ಅನ್ನ ನೀಡುವ ರೈತ ದಿವಾಳಿಯಾಗುತ್ತಿದ್ದಾನೆ
ಇನ್ನೂ ದೇಶದಲ್ಲಿ ನಮ್ಮನ್ನು ಆಳುತ್ತಿರುವಂತಹ ಸರ್ಕಾರಗಳು ರೈತ ವಿರೋಧಿ ನೀತಿಗಳನ್ನು ಜಾರಿ ಮಾಡುವ ಮೂಲಕ ರೈತರನ್ನು ಬೀದಿಪಾಲು ಮಾಡುತ್ತಿದೆ. ಕ್ರಿಮಿಕೀಟನಾಶಕ ಸೇರಿದಂತೆ ಹಲವು ಕೃಷಿ ಸಂಬಂಧಿತ ವಸ್ತುಗಳಿಗೆ ಕಾರ್ಪೋರೇಟ್ ಕಂಪನಿಗಳು ಹಾಕುವ ಬೆಲೆಯೇ ಅಂತಿಮವಾಗಿದೆ. ದೇಶಕ್ಕೆ ಅನ್ನ ನೀಡುತ್ತಿರುವ ರೈತ ಇದೀಗ ದಿವಾಳಿಯಾಗುತ್ತಿದೆ. ತನ್ನ ಬೆಳೆಗೆ ಸರಿಯಾದ ಬೆಲೆ ಸಿಗದೇ ಆತ್ಮಹತ್ಯೆ ಮಾಡಿಕೊಳ್ಳುವ ದುಸ್ಥಿತಿಗೆ ಬಂದಿದ್ದಾನೆ. ಇದು ಸಾಲದು ಎಂಬಂತೆ ಇದೀಗ ಅಮೇರಿಕಾಗೆ ನಮ್ಮ ದೇಶದಿಂದ ಕಳುಹಿಸುವಂತಹ ವಸ್ತುಗಳ ಮೇಲಿನ ಸುಂಕವನ್ನು ಕಡಿಮೆ ಮಾಡಿ ಎಂದು ಅಮೇರಿಕಾದ ಉಪಾಧ್ಯಕ್ಷರು ಬಂದಿದ್ದಾರೆ. ಕೂಡಲೇ ಆತ ಭಾರತದಿಂದ ಹೊರಹೋಗಬೇಕು. ಕೇಂದ್ರ ಸರ್ಕಾರ ಸಹ ಅಮೇರಿಕಾ ಮಾದರಿಯಲ್ಲೇ ರಪ್ತು ಮಾಡುವ ವಸ್ತುಗಳಿಗೆ ಸುಂಕ ವಿಧಿಸಬೇಕು ಎಂದು ಒತ್ತಾಯಿಸಿದರು.
US Vice President J.D. Vance – ಕೇಂದ್ರ ಸರ್ಕಾರದ ವಿರುದ್ಧ ಆಕ್ಷೇಪ
ಬಳಿಕ ಕೆ.ಪಿ.ಆರ್.ಎಸ್ ನ ತಾಲೂಕು ಸಮಿತಿ ಸದಸ್ಯ ದೇವರಾಜ್ ಮಾತನಾಡಿ, ಸದ್ಯದ ಪರಿಸ್ಥಿತಿಯಲ್ಲಿ ಅನ್ನ ನೀಡುವ ರೈತನ ಪರಿಸ್ಥಿತಿ ಅದೋಗತಿಗೆ ತಲುಪಿದೆ. ತಾನು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಸಿಗದೇ ಸಾಲದ ಸುಳಿಯಲ್ಲಿ ಸಿಲುಕಿದ್ದಾನೆ. ದೇಶವನ್ನು ಆಳುತ್ತಿರುವ ಕೇಂದ್ರ ಸರ್ಕಾರ ದೊಡ್ಡ ಉದ್ಯಮಿಗಳ ರಪ್ತು ವ್ಯವಹಾರಕ್ಕಾಗಿ ಹಾಗೂ ಬಹುರಾಷ್ಟ್ರೀಯ ಕಂಪನಿಗಳ ಹಿತಾಸಕ್ತಿಗಾಗಿ ಕೋಟ್ಯಂತರ ರೈತರ ಜೀವನವನ್ನು ಒತ್ತೆಯಿಡುತ್ತಿದೆ. ಸದ್ಯ ಭಾರತಕ್ಕೆ ಬಂದಿರುವ ಅಮೇರಿಕಾದ ಉಪಾಧ್ಯಕ್ಷರ ಜೊತೆ ಕೇಂದ್ರ ಸರ್ಕಾರ ಯಾವುದೇ ಮಾತುಕತೆ ನಡೆಸಬಾರದು. ಕೂಡಲೇ ಆತ ದೇಶದಿಂದ ಹೊರಹೋಗಬೇಕು. ಸದ್ಯ ಅಮೇರಿಕಾ ವಸ್ತುಗಳ ಮೇಲೆ ಹಾಕುತ್ತಿರುವ ಸುಂಕವನ್ನು ಕಡಿಮೆ ಮಾಡುವಂತೆ ಕೇಂದ್ರ ಸರ್ಕಾರ ಒತ್ತಾಯಿಸಬೇಕು ಎಂದು ಆಗ್ರಹಿಸಿದರು. Read this also : Donald Trump – ಪಾಕಿಸ್ತಾನಕ್ಕೆ ಟ್ರಂಪ್ ದೊಡ್ಡ ಆಘಾತ, 41 ದೇಶಗಳ ಜನರಿಗೆ ಅಮೆರಿಕಾ ಪ್ರವೇಶ ನಿಷೇಧ; ಪೂರ್ಣ ಪಟ್ಟಿ ಇಲ್ಲಿದೆ…!
US Vice President J.D. Vance – ಪ್ರತಿಭಟನೆಯಲ್ಲಿದ್ದವರು
ಪ್ರತಿಭಟನೆಯಲ್ಲಿ ಸಿಪಿಎಂ ಪಕ್ಷದ ಕಾರ್ಯದರ್ಶಿ ವೆಂಕಟರಾಜು, ಮುಖಂಡರಾದ ಶಿವಪ್ಪ, ರಮಣ, ದೇವರಾಜು, ನರೇಗಾ ಸೀನಪ್ಪ, ಆದಿನಾರಾಯಣಸ್ವಾಮಿ, ಡಿ.ವೈ.ಎಫ್.ಐ ಕಾರ್ಯದರ್ಶಿ ಉಪ್ಪಾರಹಳ್ಳಿ ಶ್ರೀನಿವಾಸ್ ಸೇರಿದಂತೆ ಹಲವು ರೈತ ಮುಖಂಡರು ಭಾಗವಹಿಸಿದ್ದರು. ಪ್ರತಿಭಟನಾಕಾರರು ಜೆ.ಡಿ.ವಾನ್ಸ್ ಅವರ ಭೇಟಿಯನ್ನು ತೀವ್ರವಾಗಿ ಖಂಡಿಸಿ, ಕೇಂದ್ರ ಸರ್ಕಾರವು ರೈತರ ಹಿತಾಸಕ್ತಿಯನ್ನು ರಕ್ಷಿಸಬೇಕೆಂದು ಒತ್ತಾಯಿಸಿದರು.