Thursday, December 12, 2024

Forest: ಮಕ್ಕಳಿಗೆ ಅರಣ್ಯದ ಕುರಿತು ಅರಿವು ಅಗತ್ಯ: ರಾಜಶೇಖರ್‍

Forest – ಪ್ರಾಕೃತಿಕ ಸಮತೋಲನ ಕಾಪಾಡುವಲ್ಲಿ ಅರಣ್ಯ ತುಂಬಾನೆ ಮಹತ್ತರ ಸ್ಥಾನ ವಹಿಸುತ್ತದೆ. ಇತ್ತೀಚಿಗೆ ಅರಣ್ಯ ನಾಶವಾಗುವ ಸ್ಥಿತಿಗೆ ತಲುಪುತ್ತಿದೆ. ಆದ್ದರಿಂದ ಮಕ್ಕಳಿಗೆ ಬಾಲ್ಯದಿಂದಲೇ ಅರಣ್ಯದ ಕುರಿತು ಅರಿವು ಮೂಡಿಸಿದಾಗ ಅರಣ್ಯದ ಮಹತ್ವವನ್ನು ತಿಳಿದು ಅರಣ್ಯವನ್ನು ಕಾಪಾಡಬಹುದಾಗಿದೆ ಎಂದು ವಲಯ ಅರಣ್ಯಾಧಿಕಾರಿ ರಾಜಶೇಖರ್‍ ತಿಳಿಸಿದರು.

Awarness about forest 0

ಗುಡಿಬಂಡೆ ವಲಯ ಅರಣ್ಯ ಇಲಾಖೆ ವತಿಯಿಂದ ತಾಲೂಕು ಬೀಚಗಾನಹಳ್ಳಿ ಕ್ರಾಸ್ ಬಳಿಯ ಆದರ್ಶ ಶಾಲೆಯ ವಿದ್ಯಾರ್ಥಿಗಳಿಗೆ ಚಿಣ್ಣರ ವನದರ್ಶನ (Forest) ಎಂಬ ಕಾರ್ಯಕ್ರಮದಡಿ ಬನ್ನೇರುಘಟ್ಟ ಪ್ರವಾಸ ಹಮ್ಮಿಕೊಂಡಿದ್ದು, ಈ ವೇಳೆ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂದಿನ ಕಾಲದಲ್ಲಿ ಪ್ರಾಕೃತಿಕ ಅಸಮತೋಲನದಿಂದ ಏನೆಲ್ಲಾ ಅನಾಹುತಗಳು ನಡೆಯುತ್ತಿವೆ ಎಂಬುದನ್ನು ನಾವೆಲ್ಲ ನೋಡುತ್ತಿದ್ದೇವೆ. ಒಂದು ಕಡೆ ಅತಿವೃಷ್ಟಿಯಾದರೇ, ಮತ್ತೊಂದು ಕಡೆ ಅನಾವೃಷ್ಟಿಯಾಗುತ್ತಿದೆ. ಇದರಿಂದಾಗಿ ಪ್ರಾಣಿ ಸಂಕುಲ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಆದ್ದರಿಂದ ಅರಣ್ಯ ಇಲಾಖೆ ವತಿಯಿಂದ ಚಿಣ್ಣರ ವನದರ್ಶನ ಎಂಬ ಕಾರ್ಯಕ್ರಮವನ್ನು ಆಯೋಜನೆ ಮಾಡಿದೆ ಎಂದರು.

guest teacher belagvi chalo
Guest Teacher: ಅತಿಥಿ ಶಿಕ್ಷಕರ ಬೆಳಗಾವಿ ಚಲೋ ಪ್ರತಿಭಟನೆಗೆ ಗುಡಿಬಂಡೆ ಅತಿಥಿ ಶಿಕ್ಷಕರ ಬೆಂಬಲ…!

ಈ ಕಾರ್ಯಕ್ರಮದಡಿ ಕೈಗೊಂಡ ಪ್ರವಾಸದಲ್ಲಿ ಅರಣ್ಯ ಸಂರಕ್ಷಣೆ, ಅರಣ್ಯಗಳ ಮಹತ್ವ, ವನ್ಯಜೀವಿಗಳ ಸಂರಕ್ಷಣೆ ಸೇರಿದಂತೆ ಹಲವು ಪ್ರಮುಖ ವಿಚಾರಗಳನ್ನು ಮಕ್ಕಳಿಗೆ ತಿಳಿಸಲಾಗುತ್ತದೆ. ಈ ಪ್ರವಾಸಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು ಇದೊಂದು ಮನರಂಜನೆ ಎಂಬಂತೆ ಕಾಣದೇ, ಮಾಹಿತಿಯನ್ನು ಅರ್ಥಗತ ಮಾಡಿಕೊಳ್ಳಬೇಕು. ಜೊತೆಗೆ ತಮ್ಮ ಗ್ರಾಮಗಳಲ್ಲಿ ಅರಣ್ಯದ ಮಹತ್ವ, ವನ್ಯ ಜೀವಿಗಳ ಸಂರಕ್ಷಣೆಯ ಕುರಿತು ಅರಿವು ಮೂಡಿಸುವ ಕೆಲಸ ಮಾಡಬೇಕು. ಎಲ್ಲದಕ್ಕಿಂತ ಮುಖ್ಯವಾಗಿ ತಾವುಗಳು ಪರಿಸರವನ್ನು ಸಂರಕ್ಷಣೆ ಮಾಡುವಂತಹ ಕೆಲಸ ಮಾಡಬೇಕೆಂದರು.

Awarness about forest 1

ಅರಣ್ಯ ಇಲಾಖೆಯಿಂದ ಆಯೋಜಿಸಿದ್ದ ಚಿಣ್ಣರ ವನದರ್ಶನ ಕಾರ್ಯಕ್ರಮದಡಿ ಆದರ್ಶ ಶಾಲೆಯ 48 ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ಅವರನ್ನು ಬನ್ನೇರುಘಟ್ಟ ವನ್ಯ ಪ್ರದೇಶದಕ್ಕೆ 2 ದಿನಗಳ ಕಾಲ ಅಧ್ಯಯನ ಪ್ರವಾಸವನ್ನು ಕೈಗೊಳ್ಳಲಾಗಿತ್ತು. ಈ ಸಮಯದಲ್ಲಿ ಅರಣ್ಯ ಇಲಾಖೆಯ ಕನಕರಾಜು, ಆದರ್ಶ ಶಾಲೆಯ ಶಿಕ್ಷಕರಾದ ಡಾ.ವಿಜಯ್ ಕುಮಾರ್‍, ದೇವೀಂದ್ರ ಯಳಾವರ್‍, ಮಹೇಶ್, ಸುಬ್ಬನಾರಾಯಣ ಸೇರಿದಂತೆ ಹಲವರು ಇದ್ದರು.

KPRS protest in gudibande
Protest: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕೆ.ಪಿ.ಆರ್.ಎಸ್ ಪ್ರತಿಭಟನೆ….!

by Admin
by Adminhttp://ismkannadanews.com
Welcome to ISM News, if you want to contact us, then feel free to say anything about www.ismkannadanews.com. We'll appreciate your feedback.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe

Latest Articles

error: Content is protected !!