ನಟ ಕಿಚ್ಚ ಸುದೀಪ್ (Kiccha Sudeep) ಅವರ ಹುಟ್ಟುಹಬ್ಬ ಸಮೀಪಿಸುತ್ತಿದೆ, ಮತ್ತು ಈ ಬಾರಿ ಅಭಿಮಾನಿಗಳಿಗೆ ಭರ್ಜರಿ ಆಚರಣೆ ಕಾದಿದೆ. ಕೇವಲ ಬರ್ತ್‌ಡೇ ಸೆಲೆಬ್ರೇಷನ್ ಮಾತ್ರವಲ್ಲ, ಕಿಚ್ಚನಿಂದ ಬಹುನಿರೀಕ್ಷಿತ ಬಿಗ್ ಬಾಸ್ ಕನ್ನಡ’ ಹೊಸ ಸೀಸನ್ ಹಾಗೂ ಅವರ ಮುಂದಿನ ಸಿನಿಮಾ ಕೆ-47′ ಬಗ್ಗೆ ಮಹತ್ವದ ಮಾಹಿತಿ ಸಿಗುವ ಸಾಧ್ಯತೆ ಇದೆ. ಇದು ಅಭಿಮಾನಿಗಳಿಗೆ ನಿಜಕ್ಕೂ ಡಬಲ್ ಧಮಾಕ ಎಂದೇ ಹೇಳಬಹುದಾಗಿದೆ.
Kiccha Sudeep – ಬಿಗ್ ಬಾಸ್ ಕನ್ನಡ ಸೀಸನ್ 12 ದಿನಾಂಕ ಘೋಷಣೆ
ಕನ್ನಡದ ಜನಪ್ರಿಯ ರಿಯಾಲಿಟಿ ಶೋ `ಬಿಗ್ ಬಾಸ್’ ನ ಹೊಸ ಸೀಸನ್‌ಗಾಗಿ ಕಿರುತೆರೆ ವೀಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಇದೇ ಸೆಪ್ಟೆಂಬರ್ ಕೊನೆಯ ವಾರದಿಂದ ಕಾರ್ಯಕ್ರಮ ಆರಂಭವಾಗಲಿದೆ ಎಂಬ ಮಾಹಿತಿ ಇದ್ದು, ಇದರ ಅಧಿಕೃತ ಘೋಷಣೆ ಸುದೀಪ್ ಅವರ ಹುಟ್ಟುಹಬ್ಬದಂದೇ ಆಗಲಿದೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಕಾರ್ಯಕ್ರಮದ ಟೀಸರ್ ಕೂಡ ಬಿಡುಗಡೆಯಾಗುವ ಸಾಧ್ಯತೆ ಇದೆ.
Read this also : ಬಿಗ್ ಬಾಸ್ ಕನ್ನಡ ಸೀಸನ್ 12 ಸ್ಪರ್ಧಿಗಳ ಸಂಭಾವ್ಯ ಪಟ್ಟಿ: ಈ ಬಾರಿ ದೊಡ್ಮನೆಗೆ ಯಾರು ಹೋಗ್ತಾರೆ?
ಕಿಚ್ಚನ ಕಮ್ ಬ್ಯಾಕ್ ಮತ್ತು ನಿರೀಕ್ಷೆಗಳು
ಕಳೆದ ಸೀಸನ್ ನಂತರ ಬಿಗ್ ಬಾಸ್‌ನಿಂದ ದೂರ ಸರಿಯುವ ಇಂಗಿತ ವ್ಯಕ್ತಪಡಿಸಿದ್ದ ಸುದೀಪ್, ಮತ್ತೆ ಹೊಸ ಹುರುಪಿನೊಂದಿಗೆ ಶೋಗೆ ಮರಳಿದ್ದಾರೆ. ಈ ಬಾರಿ ಅವರು ಕೆಲವು ಬದಲಾವಣೆಗಳನ್ನು ಸೂಚಿಸಿದ್ದು, ಅದು ಕಾರ್ಯಕ್ರಮದ ಮೇಲೆ ಯಾವ ಪರಿಣಾಮ ಬೀರಲಿದೆ ಎಂಬುದನ್ನು ತಿಳಿಯಲು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.
Kiccha Sudeep – ಕೆ-47 ಟೈಟಲ್ ಟೀಸರ್ ಬಿಡುಗಡೆ?
ಬಿಗ್ ಬಾಸ್’ ಸುದ್ದಿ ಜೊತೆಗೆ ಸುದೀಪ್ ಅವರ ಬಹುನಿರೀಕ್ಷಿತ ಸಿನಿಮಾ **K-47’** ನ ಟೈಟಲ್ ಟೀಸರ್ ಕೂಡ ಅವರ ಹುಟ್ಟುಹಬ್ಬದ ದಿನವೇ ಬಿಡುಗಡೆಯಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಸದ್ಯಕ್ಕೆ, ಹುಟ್ಟುಹಬ್ಬದ ಈ ಎರಡು ಸುದ್ದಿಗಳಿಂದ ಸುದೀಪ್ ಅಭಿಮಾನಿಗಳು ಸಂಭ್ರಮದಲ್ಲಿದ್ದಾರೆ.