ಮದುವೆ ಅಂದ್ರೆನೇ ನೂರಾರು ಕನಸು, ಸಂಭ್ರಮ. ಇನ್ನೇನು ಕೆಲವೇ ಕ್ಷಣಗಳಲ್ಲಿ ತಾಳಿ ಕಟ್ಟಬೇಕು ಅನ್ನುವಾಗ ಏನಾದರೂ ಅಚಾತುರ್ಯ ನಡೆದರೆ ಹೇಗಿರುತ್ತೆ ಊಹಿಸಿ? ಕೇರಳದಲ್ಲಿ ಇಂತಹದ್ದೇ ಒಂದು ಘಟನೆ ನಡೆದಿದೆ. ಮದುವೆಗೆ ರೆಡಿಯಾಗಲು ಪಾರ್ಲರ್‌ಗೆ ಹೋಗುತ್ತಿದ್ದ ವಧುವಿಗೆ ಅಪಘಾತ ಸಂಭವಿಸಿದೆ. ಆದರೆ, ವಿಧಿಯ ಆಟದ ಮುಂದೆ ಪ್ರೀತಿ ಗೆದ್ದಿದೆ. ಆಸ್ಪತ್ರೆಯ ಬೆಡ್ ಮೇಲೆಯೇ ಈ ಜೋಡಿ ಹಸೆಮಣೆ ಏರಿದೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

Kerala Bride – ಅಷ್ಟಕ್ಕೂ ಅಲ್ಲಿ ನಡೆದಿದ್ದೇನು?
ಕೇರಳದ ಅಲಪ್ಪುಳದಲ್ಲಿ ಈ ಘಟನೆ ನಡೆದಿದೆ. ವಧು ಅವನಿ ಮತ್ತು ವರ ಶಾರನ್ ಅವರ ಮದುವೆ ನಿಶ್ಚಯವಾಗಿತ್ತು. ಇನ್ನೇನು ಕೆಲವೇ ಗಂಟೆಗಳಲ್ಲಿ ಮುಹೂರ್ತವಿತ್ತು. ವಧು ಅವನಿ ಮದುವೆಗೆ ರೆಡಿಯಾಗಲು, ಮೇಕಪ್ ಮಾಡಿಸಿಕೊಳ್ಳಲೆಂದು ಕಾರಿನಲ್ಲಿ ತೆರಳುತ್ತಿದ್ದರು. ಆದರೆ, ತಣ್ಣೀರ್‌ಮುಕ್ಕಂ ಎಂಬಲ್ಲಿ ಇವರು ಪ್ರಯಾಣಿಸುತ್ತಿದ್ದ ಕಾರು ಮತ್ತು ಮತ್ತೊಂದು ವಾಹನದ ನಡುವೆ ಭೀಕರ ಅಪಘಾತ ಸಂಭವಿಸಿದೆ.
Kerala Bride – ಮಂಟಪದ ಬದಲು ಆಸ್ಪತ್ರೆ ಸೇರಿದ ವಧು
ಅಪಘಾತದ ರಭಸಕ್ಕೆ ವಧು ಅವನಿಗೆ ಗಂಭೀರ ಗಾಯಗಳಾಗಿವೆ. ತಕ್ಷಣವೇ ಅವರನ್ನು ಕೊಚ್ಚಿಯ ಲೇಕ್ ಶೋರ್ ಆಸ್ಪತ್ರೆಗೆ ದಾಖಲಿಸಲಾಯಿತು. ಪರೀಕ್ಷಿಸಿದ ವೈದ್ಯರು ವಧುವಿನ ಬೆನ್ನುಮೂಳೆಗೆ ಪೆಟ್ಟಾಗಿದೆ ಮತ್ತು ಕಾಲಿನ ಎಲುಬು ಮುರಿದಿದೆ ಎಂದು ತಿಳಿಸಿದ್ದಾರೆ. ಅಲ್ಲದೆ, ಮರುದಿನವೇ ಶಸ್ತ್ರಚಿಕಿತ್ಸೆ ಮಾಡಬೇಕೆಂದು ವೈದ್ಯರು ಸೂಚಿಸಿದ್ದಾರೆ. ವಧುವಿನ ಜೊತೆಗಿದ್ದ ಇನ್ನಿತರ ಮೂವರಿಗೂ ಗಾಯಗಳಾಗಿದ್ದು, ಅವರು ಕೂಡ ಚಿಕಿತ್ಸೆ ಪಡೆಯುತ್ತಿದ್ದಾರೆ. Read this also : ಡೆಲಿವರಿ ಕೆಲಸದ ನಡುವೆ ಮಗಳ ವಿದ್ಯಾಭ್ಯಾಸಕ್ಕೆ ಸಮಯ ಕೊಡುವ ‘ಅಲ್ಟಿಮೇಟ್ ಸ್ವಿಗ್ಗಿ ಡ್ಯಾಡ್’ಗೆ ಸಲಾಂ ಹೊಡೆದ ನೆಟ್ಟಿಗರು..!
Kerala Bride – ಮುಹೂರ್ತ ತಪ್ಪಿಸದ ಕುಟುಂಬಸ್ಥರು
ಸಾಮಾನ್ಯವಾಗಿ ಇಂತಹ ಘಟನೆ ನಡೆದರೆ ಮದುವೆ ಮುಂದೂಡಲಾಗುತ್ತದೆ. ಆದರೆ ಇಲ್ಲಿ ವರ ಶಾರನ್ ಮತ್ತು ಎರಡೂ ಕುಟುಂಬದವರು ತೆಗೆದುಕೊಂಡ ನಿರ್ಧಾರ ಎಲ್ಲರ ಹುಬ್ಬೇರಿಸಿದೆ. ವೈದ್ಯರು ವಧುವಿಗೆ ಪ್ರಾಣಾಪಾಯವಿಲ್ಲ ಎಂದು ಹೇಳಿದ ಕೂಡಲೇ, ಕುಟುಂಬಸ್ಥರು ನಿಗದಿತ ಮುಹೂರ್ತದಲ್ಲೇ ಮದುವೆ ಮಾಡಲು ನಿರ್ಧರಿಸಿದರು. ಮಧ್ಯಾಹ್ನ 12.12 ರಿಂದ 12.25 ರ ನಡುವೆ ಮುಹೂರ್ತ ನಿಗದಿಯಾಗಿತ್ತು. ಹೀಗಾಗಿ ಅಲಪ್ಪುಳದ ಶಕ್ತಿ ಆಡಿಟೋರಿಯಂನಲ್ಲಿ ನಡೆಯಬೇಕಿದ್ದ ಮದುವೆಯನ್ನು ನೇರವಾಗಿ ಆಸ್ಪತ್ರೆಯ ಐಸಿಯು (ICU) ವಾರ್ಡ್‌ಗೆ ಶಿಫ್ಟ್ ಮಾಡಲಾಯಿತು.

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
Kerala Bride – ವೈರಲ್ ಆಯ್ತು ಆಸ್ಪತ್ರೆ ಮದುವೆ
ಗಾಯಗೊಂಡು ಬೆಡ್ ಮೇಲೆ ಮಲಗಿದ್ದ ವಧು ಅವನಿಗೆ, ವರ ಶಾರನ್ ವೈದ್ಯರು ಹಾಗೂ ಹತ್ತಿರದ ಸಂಬಂಧಿಗಳ ಸಮ್ಮುಖದಲ್ಲಿ ತಾಳಿ ಕಟ್ಟಿದ್ದಾರೆ. ನೋವಿನ ನಡುವೆಯೂ ಒಂದಾದ ಈ ಜೋಡಿಯನ್ನು ಕಂಡು ನೆಟ್ಟಿಗರು ಭಾವುಕರಾಗಿದ್ದಾರೆ. ಇನ್ನು ಕಲ್ಯಾಣ ಮಂಟಪಕ್ಕೆ ಬಂದಿದ್ದ ಅತಿಥಿಗಳಿಗೆ ಅಲ್ಲಿಯೇ ಊಟದ ವ್ಯವಸ್ಥೆ ಮಾಡಿ ಕುಟುಂಬಸ್ಥರು ಉಪಚರಿಸಿದ್ದಾರೆ. ಸಿನಿಮಾಗಳಲ್ಲಿ ನಡೆಯುವಂತೆ ನಡೆದ ಈ ರಿಯಲ್ ಲೈಫ್ ಮದುವೆಯ ವಿಡಿಯೋ ಈಗ ಇಂಟರ್ನೆಟ್‌ನಲ್ಲಿ ಧೂಳೆಬ್ಬಿಸುತ್ತಿದೆ. ಏನೇ ಆಗಲಿ, ನವಜೋಡಿ ಆದಷ್ಟು ಬೇಗ ಚೇತರಿಸಿಕೊಂಡು ಸುಖವಾಗಿರಲಿ ಎಂದು ಹಾರೈಸೋಣ.
