Monday, August 18, 2025
HomeStateKarnataka Politics : ರಾಜಣ್ಣ ಸಂಪುಟದಿಂದ ವಜಾ: ಸಿದ್ದರಾಮಯ್ಯ ಸ್ಪಷ್ಟನೆ, ಅಭಿಮಾನಿಗಳಿಗೆ ಭಾವುಕ ಪತ್ರ…!

Karnataka Politics : ರಾಜಣ್ಣ ಸಂಪುಟದಿಂದ ವಜಾ: ಸಿದ್ದರಾಮಯ್ಯ ಸ್ಪಷ್ಟನೆ, ಅಭಿಮಾನಿಗಳಿಗೆ ಭಾವುಕ ಪತ್ರ…!

Karnataka Politics – ಕರ್ನಾಟಕ ರಾಜಕಾರಣದಲ್ಲಿ ಕೆ.ಎನ್. ರಾಜಣ್ಣ ಅವರ ಸಂಪುಟದಿಂದ ವಜಾ ವಿಚಾರ ಭಾರೀ ಸಂಚಲನ ಮೂಡಿಸಿದೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಸಕಾಂಗ ಪಕ್ಷದ ಸಭೆಯಲ್ಲಿ ಮಹತ್ವದ ಮಾಹಿತಿಯನ್ನು ನೀಡಿದ್ದು, ರಾಹುಲ್ ಗಾಂಧಿ ಅವರ ನಿರ್ದೇಶನದ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಇದೇ ವೇಳೆ, ವಜಾಗೊಂಡ ನಂತರ ರಾಜಣ್ಣ ಅವರು ತಮ್ಮ ಅಭಿಮಾನಿಗಳಿಗೆ ಭಾವುಕ ಪತ್ರ ಬರೆದು ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ.

K.N. Rajanna removed from Karnataka Cabinet after Rahul Gandhi directive – CM Siddaramaiah explains decision - Karnataka Politics

Karnataka Politics – ರಾಹುಲ್ ಗಾಂಧಿ ನಿರ್ದೇಶನ: ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

ಶಾಸಕಾಂಗ ಪಕ್ಷದ ಸಭೆಯ ಆರಂಭದಲ್ಲೇ ರಾಜಣ್ಣ ಅವರ ಸಂಪುಟದಿಂದ ವಜಾ ಕುರಿತು ಮಾತನಾಡಿದ ಸಿಎಂ ಸಿದ್ದರಾಮಯ್ಯ, “ರಾಜಣ್ಣ ಅವರು ಮಾತನಾಡಿದ ಉದ್ದೇಶ ಬೇರೆಯದೇ ಆಗಿದ್ದರೂ, ಅದನ್ನು ವ್ಯಕ್ತಪಡಿಸಿದ ರೀತಿ ಸರಿ ಇರಲಿಲ್ಲ. ಈ ತಪ್ಪಿನಿಂದಾಗಿ ಅವರನ್ನು ಸಂಪುಟದಿಂದ ಕೈಬಿಡಬೇಕಾಯಿತು. ಇದು ರಾಹುಲ್ ಗಾಂಧಿ ಅವರ ನಿರ್ದೇಶನದ ಮೇರೆಗೆ ತೆಗೆದುಕೊಂಡ ನಿರ್ಧಾರ” ಎಂದು ಸ್ಪಷ್ಟಪಡಿಸಿದರು.

Karnataka Politics – ರಾಜಣ್ಣ ತಲೆದಂಡ ಆಗಿದ್ದೇಕೆ?

ಕೆ.ಎನ್. ರಾಜಣ್ಣ ಅವರು ರಾಹುಲ್ ಗಾಂಧಿ ಅವರ ‘ಮತಗಳ್ಳತನ’ ಹೇಳಿಕೆಗೆ ವ್ಯಂಗ್ಯಭರಿತವಾಗಿ ಪ್ರತಿಕ್ರಿಯಿಸಿದ್ದರು. “ನಮ್ಮ ಕಾಲದಲ್ಲೇ ಅಲ್ವಾ ವೋಟರ್ ಲಿಸ್ಟ್ ಆಗಿದ್ದು, ಆಗೇನು ಕಣ್ಣುಮುಚ್ಚಿ ಕುಳಿತಿದ್ರಾ?” ಎಂದು ಹೇಳಿಕೆ ನೀಡಿದ್ದು, ಇದು ಹೈಕಮಾಂಡ್‌ನ ಕೆಂಗಣ್ಣಿಗೆ ಕಾರಣವಾಗಿತ್ತು. ರಾಜಣ್ಣ ಈ ಹಿಂದೆ ಕೂಡ ಹಲವು ಬಾರಿ ಸರ್ಕಾರದ ವಿರುದ್ಧ ಹೇಳಿಕೆಗಳನ್ನು ನೀಡಿದ್ದು, ಈ ಬಾರಿ ರಾಹುಲ್ ಗಾಂಧಿ ಅವರ ಹೋರಾಟಕ್ಕೆ ಹಿನ್ನಡೆ ಉಂಟು ಮಾಡುವಂತಿದ್ದರಿಂದ ಹೈಕಮಾಂಡ್ ಇದನ್ನು ಗಂಭೀರವಾಗಿ ಪರಿಗಣಿಸಿ ವಜಾ ನಿರ್ಧಾರ ಕೈಗೊಂಡಿದೆ. Read this also : ಕೋಡಿಮಠ ಶ್ರೀಗಳ ಭವಿಷ್ಯ: ಕರ್ನಾಟಕ ರಾಜಕೀಯದಲ್ಲಿ ಸಂಚಲನ, ಧರ್ಮಸ್ಥಳ ಪ್ರಕರಣದ ಬಗ್ಗೆ ಗಂಭೀರ ಎಚ್ಚರಿಕೆ

ಸಿದ್ದರಾಮಯ್ಯ ಕೈ ಬಲಪಡಿಸಿ: ಅಭಿಮಾನಿಗಳಿಗೆ ರಾಜಣ್ಣ ಭಾವುಕ ಮನವಿ

ಸಂಪುಟದಿಂದ ವಜಾಗೊಂಡ ನಂತರ ರಾಜಣ್ಣ ಅಭಿಮಾನಿಗಳು ಅವರ ತವರು ಕ್ಷೇತ್ರವಾದ ಮಧುಗಿರಿಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದರು. ಈ ಘಟನೆ ನಡೆದ ಬೆನ್ನಲ್ಲೇ ರಾಜಣ್ಣ ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಮಾನಿಗಳಿಗೆ ಭಾವುಕ ಪತ್ರ ಬರೆದು, ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ. (Karnataka Politics)

K.N. Rajanna removed from Karnataka Cabinet after Rahul Gandhi directive – CM Siddaramaiah explains decision - Karnataka Politics

ರಾಜಣ್ಣ ಪತ್ರದಲ್ಲಿ ಏನಿದೆ?
  • ರಾಜಕೀಯ ಏರುಪೇರುಗಳು ಹೊಸತಲ್ಲ: “ರಾಜಕೀಯ (Karnataka Politics) ಏರುಪೇರುಗಳು ನನಗೆ ಹೊಸತಲ್ಲ. ಯಾವುದೇ ಬದಲಾವಣೆಗೆ ನಾನು ಎಂದೂ ಧೃತಿಗೆಟ್ಟಿಲ್ಲ. ಇದು ಸಹ ಹಾಗೆಯೇ ಎಂದು ಹೇಳಲು ಇಚ್ಛಿಸುತ್ತೇನೆ.”
  • ತಪ್ಪಾದ ನಿರ್ಧಾರ ಮಾಡಬೇಡಿ: “ಅಭಿಮಾನದ ಅತಿರೇಕದಲ್ಲಿ ಯಾವುದೇ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಕೆಲವು ಯುವಕರು ನೋವು ಮಾಡಿಕೊಂಡಿದ್ದು ನನಗೆ ದುಃಖ ತಂದಿದೆ.”
  • ಸಾರ್ವಜನಿಕ ಆಸ್ತಿ ಹಾಳು ಮಾಡಬೇಡಿ: “ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡುವಂತಹ ಪ್ರಯತ್ನವನ್ನು ಮಾಡಬೇಡಿ.”
  • ಸಿದ್ದರಾಮಯ್ಯ ಮತ್ತು ರಾಹುಲ್ ಗಾಂಧಿ ಬೆಂಬಲಿಸಿ: “ನಾವೆಲ್ಲರೂ ಬುದ್ಧ, ಬಸವ, ವಾಲ್ಮೀಕಿ, ಅಂಬೇಡ್ಕರ್ ಹಾದಿಯಲ್ಲಿ ನಡೆಯಬೇಕು. ರಾಹುಲ್ ಗಾಂಧಿಯವರ ನಾಯಕತ್ವದಲ್ಲಿ ಸಂವಿಧಾನ ಉಳಿಸುವ ಪ್ರಯತ್ನಕ್ಕೆ ಬಲ ತುಂಬಬೇಕು. ನಮ್ಮ ಮುಖ್ಯಮಂತ್ರಿಗಳಾದ (Karnataka Politics) ಸಿದ್ದರಾಮಯ್ಯನವರ ಕೈ ಬಲಪಡಿಸುವ ಕಡೆಗೆ ನಮ್ಮ ಚಿಂತನೆ ಇರಲಿ.”
by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular