Karnataka Budget 2025 – ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು (ಮಾರ್ಚ್ 7) 2025-26ನೇ ಸಾಲಿನ ರಾಜ್ಯ ಆಯವ್ಯಯ (ಬಜೆಟ್) ಅನ್ನು ವಿಧಾನಸಭೆಯಲ್ಲಿ ಮಂಡಿಸಿದ್ದಾರೆ. 4.08 ಲಕ್ಷ ಕೋಟಿ ರೂಪಾಯಿ ಗಾತ್ರದ ಈ ಬಜೆಟ್ನಲ್ಲಿ ರಾಜ್ಯದ ಸಮಗ್ರ ಅಭಿವೃದ್ಧಿಗೆ ಹಲವು ಹೊಸ ಯೋಜನೆಗಳು, ಅನುದಾನಗಳು ಮತ್ತು ಕಾರ್ಯಕ್ರಮಗಳನ್ನು ಘೋಷಿಸಲಾಗಿದೆ. ಇದು ಸಿದ್ದರಾಮಯ್ಯ ಅವರ 16ನೇ ಬಜೆಟ್ ಆಗಿದ್ದು, ರಾಜಕೀಯ ಇತಿಹಾಸದಲ್ಲಿ ದಾಖಲೆಯನ್ನು ಸೃಷ್ಟಿಸಿದೆ.
ಸುದೀರ್ಘ ಮೂರುಕಾಲು ಗಂಟೆಗಳ ಕಾಲ 2025-26ನೇ ಸಾಲಿನ ಆಯವ್ಯಯವನ್ನು ಸಿಎಂ ಸಿದ್ದರಾಮಯ್ಯ ಅವರು ಇಂದು ವಿಧಾನಸಭೆಯಲ್ಲಿ ಮಂಡಿಸಿದರು. ನಿಂತುಕೊಂಡು ಭಾಷಣ ಆರಂಭಿಸಿದ ಅವರು ನಂತರ ಕಾಲುನೋವಿನ ಕಾರಣದಿಂದ ಕುಳಿತುಕೊಂಡೇ ಬಜೆಟ್ ಮಂಡಿಸಿದರು.

Karnataka Budget 2025 – ರಾಜ್ಯ ಬಜೆಟ್ನ ಪ್ರಮುಖ ಘೋಷಣೆಗಳು:
- ರಾಜ್ಯ ನಾಗರಿಕ ಸೇವೆಗಳಲ್ಲಿ 13 ಬುಡಕಟ್ಟು ಸಮುದಾಯಗಳಿಗೆ ನೇರ ಉದ್ಯೋಗಾವಕಾಶ ನೀಡಲಾಗುವುದು.
- ಬಾದಾಮಿ ಮತ್ತು ಚಿತ್ರದುರ್ಗದಲ್ಲಿ ಹೊಸ ಟ್ರಾಮಾ ಕೇರ್ ಕೇಂದ್ರಗಳನ್ನು ಸ್ಥಾಪಿಸಲಾಗುವುದು.
- ಮಂಡ್ಯದಲ್ಲಿ ಹೊಸ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆಗೆ ಯೋಜನೆ ರೂಪಿಸಲಾಗಿದೆ.
- ಈ ವರ್ಷದ ಒಟ್ಟು ಸಾಲ 1.16 ಲಕ್ಷ ಕೋಟಿ ರೂಪಾಯಿಗಳನ್ನು ಮುಟ್ಟಿದೆ.
- ತುಮಕೂರಿನಲ್ಲಿ ಜಪಾನೀಸ್ ಕೈಗಾರಿಕಾ ಉದ್ಯಾನವನ ಅಭಿವೃದ್ಧಿಗೆ ಯೋಜನೆ ಹಾಕಿಕೊಳ್ಳಲಾಗಿದೆ.
- ಸಾವಯವ ಮತ್ತು ರಾಗಿ ಕೃಷಿಗೆ 20 ಕೋಟಿ ರೂಪಾಯಿಗಳ ಬೆಂಬಲ ನೀಡಲಾಗುವುದು.
- ನೇಕಾರರಿಗೆ 100 ಕೋಟಿ ರೂಪಾಯಿಗಳ ನೆರವು ಒದಗಿಸಲಾಗುವುದು.
- 20 ಎಚ್ಪಿ (10 ಎಚ್ಪಿಯಿಂದ ಹೆಚ್ಚಳ) ವರೆಗೆ ಸೆಟಪ್ ಹೊಂದಿರುವ ಪವರ್ಲೂಮ್ ನೇಕಾರರು ಈಗ ಸಬ್ಸಿಡಿ ಮತ್ತು ಬೆಂಬಲಕ್ಕೆ ಅರ್ಹರಾಗಿದ್ದಾರೆ.
- ಉದ್ಯಮಶೀಲತಾ ಯೋಜನೆಯಡಿಯಲ್ಲಿ SC ಯುವಕರಿಗೆ ಫಾಸ್ಟ್ ಫುಡ್ ಟ್ರಕ್ಗಳ ಸಹಾಯ ನೀಡಲಾಗುವುದು.
- ಕಾರ್ಕಳ, ರಾಣೆಬೆನ್ನೂರು, ರಾಯಚೂರು, ಕಡೂರು ಮತ್ತು ಚಿಕ್ಕಮಗಳೂರಿನಲ್ಲಿ ಹೊಸ ಜವಳಿ ಉದ್ಯಾನವನಗಳನ್ನು ಸ್ಥಾಪಿಸಲಾಗುವುದು.
- 120 ಕೋಟಿ ರೂಪಾಯಿಗಳ ಯೋಜನೆಯಡಿ 47,859 ಬುಡಕಟ್ಟು ಕುಟುಂಬಗಳಿಗೆ ಪೌಷ್ಟಿಕ ಆಹಾರ ಕಿಟ್ಗಳನ್ನು ಪೂರೈಸಲಾಗುವುದು.
- ಅಜೀಂ ಪ್ರೇಮ್ ಜೀ ಫೌಂಡೇಷನ್ ಸಹಯೋಗದಲ್ಲಿ ಶಾಲಾ ಮಕ್ಕಳಿಗೆ ವಾರದಲ್ಲಿ ಆರು ದಿನ ಮೊಟ್ಟೆ ಮತ್ತು ಬಾಳೆಹಣ್ಣು ವಿತರಣೆಗೆ 1,500 ಕೋಟಿ ರೂಪಾಯಿಗಳನ್ನು ಮೀಸಲಾಗಿರಿಸಲಾಗಿದೆ.
- 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಅನ್ನ ಸುವಿಧಾ ಯೋಜನೆಯನ್ನು ಜಾರಿಗೆ ತರಲಾಗುವುದು.
- ಕರಾವಳಿಯ ಮೂರು ಜಿಲ್ಲೆಗಳಲ್ಲಿ ಕಡಲಕೊರೆತ ತಪ್ಪಿಸಲು 200 ಕೋಟಿ ರೂಪಾಯಿಗಳ ಅನುದಾನ ನೀಡಲಾಗುವುದು.
- ಎತ್ತಿನಹೊಳೆ ಯೋಜನೆಗೆ 553 ಕೋಟಿ ರೂಪಾಯಿಗಳ ಅನುದಾನ ಮೀಸಲಾಗಿರಿಸಲಾಗಿದೆ.
- ಮಹಿಳಾ ಉದ್ದೇಶಿತ ಕಾರ್ಯಕ್ರಮಗಳಿಗೆ 94,000 ಕೋಟಿ ರೂಪಾಯಿಗಳನ್ನು ಮೀಸಲಾಗಿರಿಸಲಾಗಿದೆ.

Karnataka Budget 2025 – ಯಾವ ಇಲಾಖೆಗೆ ಎಷ್ಟು ಅನುದಾನ?
- ₹3,977 ಕೋಟಿ ಪಶುಸಂಗೋಪನೆ & ಮೀನುಗಾರಿಕೆ
- ₹7,145 ಕೋಟಿ ಕೃಷಿ & ತೋಟಗಾರಿಕೆ ಇಲಾಖೆ
- ₹8,275 ಆಹಾರ ನಾಗರಿಕ ಸರಬರಾಜು ಇಲಾಖೆ
- ₹11,841 ಲೋಕೋಪಯೋಗಿ ಇಲಾಖೆ
- ₹16,955 ಕೋಟಿ ಸಮಾಜ ಕಲ್ಯಾಣ ಇಲಾಖೆ
- ₹17,201 ಕೋಟಿ ಕಂದಾಯ ಇಲಾಖೆ
- ₹17,475 ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆ
- ₹45,286 ಕೋಟಿ ಶಿಕ್ಷಣ ಇಲಾಖೆ
- ₹34,955 ಮಹಿಳಾ ಮತ್ತು ಮಕ್ಕಳ ಕಲ್ಯಾಣ
- ₹26,896 ಇಂಧನ ಇಲಾಖೆ ಇಲಾಖೆ
- ₹26,735 ಗ್ರಾಮೀಣಾಭಿವೃದ್ಧಿ ಇಲಾಖೆ
- ₹22,181 ನೀರಾವರಿ ಇಲಾಖೆ
- ₹21,405 ನಗರಾಭಿವೃದ್ಧಿ, ವಸತಿ ಇಲಾಖೆ
- ₹20,625 ಒಳಾಡಳಿತ & ಸಾರಿಗೆ ಇಲಾಖೆ