Karnataka – ಕರ್ನಾಟಕದ 2024-25ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ (Karnataka 2nd PUC Result) ಇಂದು (ಏಪ್ರಿಲ್ 08, 2025) ಪ್ರಕಟಗೊಂಡಿದೆ. ಈ ಬಾರಿ ರಾಜ್ಯದಲ್ಲಿ ಒಟ್ಟು 73.45% ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪರೀಕ್ಷೆಗೆ ಹಾಜರಾದ 6,37,805 ವಿದ್ಯಾರ್ಥಿಗಳಲ್ಲಿ 4,68,439 ಮಂದಿ ತೇರ್ಗಡೆಯಾಗಿದ್ದಾರೆ. ಫಲಿತಾಂಶದಲ್ಲಿ ಉಡುಪಿ ಜಿಲ್ಲೆ 93.90% ಸಾಧನೆಯೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದೆ. ಎರಡನೇ ಸ್ಥಾನವನ್ನು ದಕ್ಷಿಣ ಕನ್ನಡ (93.57%) ಪಡೆದರೆ, ಮೂರನೇ ಸ್ಥಾನಕ್ಕೆ ಬೆಂಗಳೂರು ದಕ್ಷಿಣ (85.36%) ತೃಪ್ತಿಪಟ್ಟಿದೆ. ಆದರೆ ಯಾದಗಿರಿ ಜಿಲ್ಲೆ 73.45% ಜೊತೆಗೆ ಕೊನೆಯ ಸ್ಥಾನದಲ್ಲಿದೆ.
Karnataka 2nd PUC Result – ಶ್ರೇಣಿವಾರು ಉತ್ತೀರ್ಣರ ಸಂಖ್ಯೆ:
- ಉನ್ನತ ಶ್ರೇಣಿ: 1,00,571
- ಪ್ರಥಮ ದರ್ಜೆ: 2,78,054
- ದ್ವಿತೀಯ ದರ್ಜೆ: 70,969
- ತೃತೀಯ ದರ್ಜೆ: 18,845
ವಿಭಾಗವಾರು ಸಾಧನೆ:
- ಕಲಾ ವಿಭಾಗ: 1,53,043 ಹಾಜರಾದವರಲ್ಲಿ 81,533 (53.79%) ಉತ್ತೀರ್ಣ
- ವಾಣಿಜ್ಯ ವಿಭಾಗ: 2,04,329 ಹಾಜರಾದವರಲ್ಲಿ 1,55,425 (76.07%) ಉತ್ತೀರ್ಣ
- ವಿಜ್ಞಾನ ವಿಭಾಗ: 2,80,433 ಹಾಜರಾದವರಲ್ಲಿ 2,31,461 (82.54%) ಉತ್ತೀರ್ಣ
ಮಾಧ್ಯಮವಾರು ಫಲಿತಾಂಶ:
- ಕನ್ನಡ ಮಾಧ್ಯಮ: 2,08,794 ಹಾಜರಾದವರಲ್ಲಿ 1,17,703 (56.37%) ತೇರ್ಗಡೆ
- ಇಂಗ್ಲೀಷ್ ಮಾಧ್ಯಮ: 4,29,011 ಹಾಜರಾದವರಲ್ಲಿ 3,50,736 (81.75%) ತೇರ್ಗಡೆ
ಇಂದು (April -8) ಮಧ್ಯಾಹ್ನ 12:45ಕ್ಕೆ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಮಲ್ಲೇಶ್ವರಂನ ಮಂಡಳಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಘೋಷಿಸಿದರು. ಮಧ್ಯಾಹ್ನ 1:30ರಿಂದ www.karresults.nic.in ವೆಬ್‌ಸೈಟ್‌ನಲ್ಲಿ ಫಲಿತಾಂಶ ಲಭ್ಯವಾಗಲಿದೆ.
ಪರೀಕ್ಷೆಯ ಹಿನ್ನೆಲೆ:
ದ್ವಿತೀಯ ಪಿಯುಸಿ ಪರೀಕ್ಷೆ ಮಾರ್ಚ್ 1 ರಿಂದ ಮಾರ್ಚ್ 20, 2025ರವರೆಗೆ ನಡೆದಿತ್ತು. ಒಟ್ಟು 7.13 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಉತ್ತರ ಪತ್ರಿಕೆಗಳ ಮೌಲ್ಯಮಾಪನ ತ್ವರಿತಗತಿಯಲ್ಲಿ ಪೂರ್ಣಗೊಂಡು ಇಂದು ಫಲಿತಾಂಶ ಬಿಡುಗಡೆಯಾಗಿದೆ.

Karnataka 2nd PUC Result – Rank ವಿಜೇತರು: ಅಮೂಲ್ಯ ಕಾಮತ್‌ಗೆ ಮೊದಲ ಸ್ಥಾನ!
ವಿಜ್ಞಾನ ವಿಭಾಗ:
- ಅಮೂಲ್ಯ ಕಾಮತ್ (ದಕ್ಷಿಣ ಕನ್ನಡ, ಎಕ್ಸ್‌ಪರ್ಟ್ ಪಿಯು ಕಾಲೇಜು): 600ಕ್ಕೆ 599 ಅಂಕ, ಮೊದಲ ರ್ಯಾಂಕ್
- ಆರ್. ದೀಕ್ಷಾ (ಶಿವಮೊಗ್ಗ, ವಾಗ್ದೇವಿ ಪಿಯು ಕಾಲೇಜು): 600ಕ್ಕೆ 599 ಅಂಕ, ಎರಡನೇ ರ್ಯಾಂಕ್
- ಬಿಂದು ನವಲೆ: 600ಕ್ಕೆ 598 ಅಂಕ, ಮೂರನೇ ರ್ಯಾಂಕ್
ವಾಣಿಜ್ಯ ವಿಭಾಗ:
- ದೀಪಶ್ರೀ (ದಕ್ಷಿಣ ಕನ್ನಡ, ಕೆನರಾ ಪಿಯು ಕಾಲೇಜು): 600ಕ್ಕೆ 599 ಅಂಕ, ಮೊದಲ ರ್ಯಾಂಕ್
- ಎಂ.ಎ. ತೇಜಸ್ವಿನಿ (ಮೈಸೂರು, ಕೊಪ್ಪ ಭಾರತಮ್ಮ ಪಿಯು ಕಾಲೇಜು): 600ಕ್ಕೆ 598 ಅಂಕ, ಎರಡನೇ ರ್ಯಾಂಕ್
ಕಲಾ ವಿಭಾಗ:
- ಸಂಜನಾ ಬಾಯಿ (ಬಳ್ಳಾರಿ, ಇಂದು ಪಿಯು ಕಾಲೇಜು): 600ಕ್ಕೆ 597 ಅಂಕ, ಮೊದಲ ರ್ಯಾಂಕ್
- ಕೆ. ನಿರ್ಮಲಾ (ಬಳ್ಳಾರಿ, ಶ್ರೀಪಂಚಮಸಾಲಿ ಪಿಯು ಕಾಲೇಜು): 600ಕ್ಕೆ 596 ಅಂಕ, ಎರಡನೇ ರ್ಯಾಂಕ್
Karnataka 2nd PUC Result – ಫೇಲ್ ಆದರೆ ಚಿಂತೆ ಬೇಡ: ಪರೀಕ್ಷೆ-2 ವೇಳಾಪಟ್ಟಿ ಇಲ್ಲಿದೆ!
ಮೊದಲ ಪರೀಕ್ಷೆಯಲ್ಲಿ ಉತ್ತೀರ್ಣರಾಗದ ವಿದ್ಯಾರ್ಥಿಗಳಿಗೆ ಚಿಂತೆಯಿಲ್ಲ! ದ್ವಿತೀಯ ಪಿಯುಸಿ ಪರೀಕ್ಷೆ-2 (2nd PUC Exam-2) ವೇಳಾಪಟ್ಟಿ ಪ್ರಕಟವಾಗಿದ್ದು, ಏಪ್ರಿಲ್ 24 ರಿಂದ ಮೇ 8, 2025ರವರೆಗೆ ಪರೀಕ್ಷೆಗಳು ನಡೆಯಲಿವೆ. ಈ ಅವಕಾಶವನ್ನು ಬಳಸಿಕೊಂಡು ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಉತ್ತಮಗೊಳಿಸಬಹುದು.

ಪರೀಕ್ಷೆ-2 ವೇಳಾಪಟ್ಟಿ:
- 24-04-25: ಕನ್ನಡ, ಅರೇಬಿಕ್
- 25-04-25: ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ, ಜೀವಶಾಸ್ತ್ರ
- 26-04-25: ಇತಿಹಾಸ, ಭೌತಶಾಸ್ತ್ರ
- 28-04-25: ಭೂಗೋಳಶಾಸ್ತ್ರ, ಮನಶಾಸ್ತ್ರ, ರಸಾಯನಶಾಸ್ತ್ರ
- 29-04-25: ಇಂಗ್ಲೀಷ್
- 02-05-25: ತರ್ಕಶಾಸ್ತ್ರ, ವ್ಯವಹಾರ ಶಾಸ್ತ್ರ, ಗಣಿತ
- 05-05-25: ಅರ್ಥಶಾಸ್ತ್ರ
ಪೂರ್ಣ ವೇಳಾಪಟ್ಟಿಗಾಗಿ www.karresults.nic.in ಚೆಕ್ ಮಾಡಿ!