ಸಾಮಾನ್ಯವಾಗಿ ಸಿನಿಮಾಗಳಲ್ಲಿ ಅಥವಾ ನಿಜ ಜೀವನದಲ್ಲಿ ಹುಡುಗಿಯರಿಗಾಗಿ ಹುಡುಗರು ಹೊಡೆದಾಡುವುದನ್ನು ನಾವು ನೋಡಿದ್ದೇವೆ. “ನನ್ನವಳು ನಿನಗೆ ಹೇಗೆ ಬೇಕು?” ಎಂದು ಕಾಲರ್ ಪಟ್ಟಿ ಹಿಡಿದು ಜಗಳವಾಡುವುದು ಸಾಮಾನ್ಯ. (Boyfriend) ಆದರೆ ಇಲ್ಲಿ ಸೀನ್ ಉಲ್ಟಾ ಆಗಿದೆ! ಒಬ್ಬ ಹುಡುಗನಿಗಾಗಿ ಇಬ್ಬರು ಯುವತಿಯರು ನಡುರಸ್ತೆಯಲ್ಲೇ ಪರಸ್ಪರ ಜುಟ್ಟು ಹಿಡಿದು ಬಡಿದಾಡಿಕೊಂಡ ಘಟನೆ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಇದೆಂತಾ ವಿಚಿತ್ರ ಅಲ್ವಾ? “ಅವನು ನನ್ನವನು ಅಂದರೆ ನನ್ನವನು” ಎಂದು ಬೀದಿಯಲ್ಲಿ ಇಬ್ಬರು ಯುವತಿಯರು ರಂಪಾಟ ಮಾಡಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ ಎನ್ನಲಾಗಿದೆ.
Boyfriend – ಅಸಲಿಗೆ ಅಲ್ಲಿ ನಡೆದಿದ್ದೇನು?
ವೈರಲ್ ಆಗಿರುವ ವಿಡಿಯೋ ಮತ್ತು ವರದಿಗಳ ಪ್ರಕಾರ, ಅಭಿಷೇಕ್ ಎಂಬ ಯುವಕ ಈ ಇಡೀ ಗಲಾಟೆಯ ಕೇಂದ್ರಬಿಂದು. ಅಭಿಷೇಕ್ ಮತ್ತು ಒಬ್ಬ ಯುವತಿ ಈ ಹಿಂದೆ ಪ್ರೀತಿಸುತ್ತಿದ್ದರು. ಆದರೆ ಕೆಲವು ಕಾರಣಗಳಿಂದ ಇಬ್ಬರ ನಡುವೆ ಬ್ರೇಕಪ್ (Breakup) ಆಗಿತ್ತು. ಇದಾದ ನಂತರ ಅಭಿಷೇಕ್ ಮತ್ತೊಬ್ಬ ಯುವತಿಯೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದ. ಕಥೆಯಲ್ಲಿ ಟ್ವಿಸ್ಟ್ ಸಿಗುವುದು ಇಲ್ಲೇ! ಬ್ರೇಕಪ್ ಆದರೂ ಮಾಜಿ ಪ್ರಿಯತಮೆಗೆ ಅಭಿಷೇಕ್ ಮೇಲಿನ ಪ್ರೀತಿ ಕಡಿಮೆಯಾದಂತೆ ಕಾಣುತ್ತಿಲ್ಲ. ಆಕೆ ಹಳೆಯ ಅಭ್ಯಾಸದಂತೆ ಅಭಿಷೇಕ್‌ನನ್ನು ಈಗಲೂ “ಬಾಬು” (Babu) ಎಂದು ಪ್ರೀತಿಯಿಂದ (Boyfriend) ಕರೆಯುತ್ತಿದ್ದಳಂತೆ.
“ಬಾಬು” ಅಂದಿದ್ದೇ ತಪ್ಪಾಯ್ತಾ?
ಈ ವಿಷಯ ಹೊಸ ಪ್ರಿಯತಮೆಯ ಕಿವಿಗೆ ಬಿದ್ದಿದ್ದೇ ತಡ, ಆಕೆಯ ಕೋಪ ನಶಾಲೇಗೇರಿದೆ. “ನಾನು ಪ್ರೀತಿಸುತ್ತಿರುವ ಹುಡುಗನನ್ನು ನೀನು ಹೇಗೆ ಬಾಬು ಎಂದು ಕರೆಯುತ್ತೀಯಾ?” ಎಂದು ಪ್ರಶ್ನಿಸಲು ಹೋಗಿದ್ದಾರೆ. ಕಾನ್ಪುರದ ಯಶೋದಾ ನಗರ ಬೈಪಾಸ್ ಬಳಿ ರಾತ್ರಿ ವೇಳೆ ಈ ಮೂವರು ಮುಖಾಮುಖಿಯಾಗಿದ್ದಾರೆ. Read this also : ಗಂಡ ಇಲ್ಲದಾಗ ಫೋನ್ ಬಳಕೆ? ಅನುಮಾನದಿಂದ ಹೆಂಡತಿಯ ಕೊಲೆ, ಶವ ಹೂತುಹಾಕಿದ ಭೀಕರ ಕೃತ್ಯ!
ಮಾತು ಮಿತಿಮೀರಿ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಇಬ್ಬರು ಯುವತಿಯರು ರಸ್ತೆಯಲ್ಲೇ ಪರಸ್ಪರ ಜುಟ್ಟು ಹಿಡಿದು ಎಳೆದಾಡುತ್ತಾ, ಕೆನ್ನೆಗೆ ಬಾರಿಸಿಕೊಳ್ಳುತ್ತಾ ಕಿತ್ತಾಡಿದ್ದಾರೆ. “ಅವನು ನನ್ನವನು, ನೀನು ಯಾಕೆ ಅವನನ್ನು ಬಾಬು ಅಂತ ಕರೆಯುತ್ತೀಯಾ?” ಎಂದು ಕಿರುಚಾಡುತ್ತಾ (Boyfriend) ಒಬ್ಬರನ್ನೊಬ್ಬರು ಹಿಗ್ಗಾಮುಗ್ಗಾ ಜಾಡಿಸಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
ನೆಟ್ಟಿಗರ ರಿಯಾಕ್ಷನ್ ಹೇಗಿದೆ?
ಈ ಹೈಡ್ರಾಮಾವನ್ನು ಅಲ್ಲಿದ್ದವರು ಮೊಬೈಲ್‌ನಲ್ಲಿ ಸೆರೆಹಿಡಿದು ಜಾಲತಾಣಕ್ಕೆ ಹರಿಬಿಟ್ಟಿದ್ದಾರೆ. ಸದ್ಯ ಈ ವಿಡಿಯೋ ಸಖತ್ ಸೌಂಡ್ ಮಾಡುತ್ತಿದ್ದು, ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ: “ಹುಡುಗನಿಗಾಗಿ (Boyfriend) ಈ ಮಟ್ಟಕ್ಕೆ ಇಳಿಯಬೇಕಾ?” ಎಂದು ಕೆಲವರು ಪ್ರಶ್ನಿಸಿದರೆ, ಮತ್ತೋಬ್ಬರು “ಈ ಕಾಲದಲ್ಲಿ ಪ್ರೀತಿ ಅಂದರೆ ರಸ್ತೆ ರಂಪಾಟ ಆಗಿಬಿಟ್ಟಿದೆ” ಎಂದು ಮತ್ತೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು “ಅಭಿಷೇಕ್ ಅಷ್ಟೊಂದು ಅದೃಷ್ಟವಂತನಾ?” ಎಂದು ತಮಾಷೆ ಮಾಡುತ್ತಿದ್ದಾರೆ.
ಸದ್ಯ ಈ ವಿಡಿಯೋ ಆಧರಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎನ್ನಲಾಗಿದೆ. ಏನೇ ಆಗಲಿ, ಪ್ರೀತಿಯ (Boyfriend) ಹೆಸರಿನಲ್ಲಿ ಇಂತಹ ವರ್ತನೆಗಳು ಸಮಾಜದಲ್ಲಿ ನಗುಪಾಟಲಿಗೀಡಾಗುವುದು ಮಾತ್ರ ಸುಳ್ಳಲ್ಲ.

