Kanakadasa Jayanthi – ಅಂದಿನ ಕಾಲದಲ್ಲಿದ್ದ ಅಸ್ಪೃಶ್ಯತೆ, ಅಸಮಾನತೆ ತೊಡೆದು ಹಾಕುವಲ್ಲಿ ಶ್ರಮಿಸಿದಂತಹ ಮಹಾನ್ ನಾಯಕ ಕನಕದಾಸರ ಆದರ್ಶಗಳನ್ನು ನಾವೆಲ್ಲರೂ ಪಾಲನೆ ಮಾಡಿದಾಗ ಮಾತ್ರ ಕನಕದಾಸರ ಜಯಂತಿ ಆಚರಣೆಗೆ ಅರ್ಥ ಬರುತ್ತದೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ 537ನೇ ಕನಕದಾಸರ ಜಯಂತೋತ್ಸವ (Kanakadasa Jayanthi) ಕಾರ್ಯಕ್ರಮದಲ್ಲಿ ಮಾತನಾಡಿದರು.
Kanakadasa Jayanthi – ಕನಕದಾಸರು ಜಾತಿ ವ್ಯವಸ್ಥೆಯ ಬಗ್ಗೆ ಹೋರಾಡಿದಂತಹ ಮಹನೀಯ ವ್ಯಕ್ತಿ. ಅವರ ಆದರ್ಶಗಳನ್ನು ನಾವೆಲ್ಲರೂ ಪಾಲನೆ ಮಾಡಬೇಕು. ಅಂತಹ ಮಹನೀಯರನ್ನು ಕೇವಲ ಜಾತಿಗೆ ಸೀಮಿತ ಮಾಡಬಾರದು. ಸಮುದಾಯದವರ ಬೇಡಿಕೆಯಂತೆ ಮುಂದಿನ ವರ್ಷದೊಳಗೆ ಕನಕ ಭವನಕ್ಕೆ ಜಾಗ ಮಂಜೂರು ಮಾಡಿಸುತ್ತೇನೆ. ಮನೆ ಇಲ್ಲದ ಸಮುದಾಯದ ಬಡವರಿಗೆ ಅತ್ಯವಶ್ಯಕವಾಗಿ ಬೇಕಾದ ನಿವೇಶನಗಳನ್ನು ನೀಡಿದಾಗ (Kanakadasa Jayanthi) ಕನಕದಾಸರ ಸೇವೆ ಮಾಡಿದಂತಾಗುತ್ತದೆ. ಭವನ ನಿರ್ಮಾಣ ಮಾಡಿದಷ್ಟು ಖುಷಿ ಆಗುತ್ತದೆ. ಅಂದಿನ ಕಾಲಕ್ಕೆ ಕನಕದಾಸರು ಸಮಾಜದ ಅಭಿವೃದ್ಧಿಗೆ ಶ್ರಮಿಸಿದ ರೀತಿಯಲ್ಲಿ ಇಂದು ಸಿಎಂ ಸಿದ್ದರಾಮಯ್ಯ (Siddaramaiah) ಸಹ ಹೋರಾಟ ಬಡವರ ಪರ ಹೋರಾಟ ನಡೆಸುತ್ತಿದ್ದಾರೆ, ಅನೇಕ ಯೋಜನೆಗಳ ಮೂಲಕ ಬಡವರ ಆಶಾಕಿರಣರಾಗಿದ್ದು ನಾವು ನೀವೆಲ್ಲ ಆವರ ಕೈ ಬಳಪಡಿಸ ಬೇಕಿದೆ. ಅಂತಹ ನಾಯಾಕರನ್ನು ಉಳಿಸಿಕೊಳ್ಳಲು ನಾವು ಹೋರಾಟ ಮಾಡಬೇಕಿದೆ. ಕುರುಬ ಸಮುದಾಯದ ಏಳ್ಗೆಗಾಗಿ, ಬಡವರ ಹಾಗೂ ಶ್ರಮಿಕರ ಬಗ್ಗೆ ಸದಾ ಚಿಂತಿಸುವ ವ್ಯಕ್ತಿ ಸಿದ್ದರಾಮಯ್ಯ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯಭಾಷಣಕಾರರಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ನಯಾಜ್ ಮಾತನಾಡಿ, (Kanakadasa Jayanthi) ಬೆಳಕು ಕತ್ತಲೆಯನ್ನು ಕಳೆಯುವಂತೆ ಮಹಾನ್ ದಾರ್ಶನಿಕರು, ಸಂತರು, ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಮೂಲಕ ಸಮಾಜದಲ್ಲಿದ್ದ ಜಾತಿ ವ್ಯವಸ್ಥೆ, ಮೂಢನಂಬಿಕೆ, ಬಡತನ, ಅಜ್ಞಾನ (Kanakadasa Jayanthi)ಹೋಗಲಾಡಿಸುವ ಮೂಲಕ ಸಮಾಜದ ಅಭಿವೃದ್ಧಿಗಾಗಿ ತಮ್ಮ ಜೀವನವನ್ನು ಮೂಡಿಪಾಗಿಟ್ಟ ಶ್ರೇಷ್ಠ ನಾಯಕರು ಯಾವುದೇ ಜಾತಿಯಲ್ಲಿ ಹುಟ್ಟಿದರೂ ಅವರನ್ನು ಆಯಾ ಜಾತಿಗೆ ಸೀಮಿತ ಮಾಡಿ ಜಾತಿ ನಾಯಕರನ್ನಾಗಿ ಮಾಡಬೇಡಿ ಅವರನ್ನು (Kanakadasa Jayanthi) ವಿಶ್ವ ನಾಯಕರನ್ನಾಗಿ ಇರಲು ಬಿಡಿ. ಕನಕರು ಸಮಾಜದ ಅಸ್ಪೃಶ್ಯತೆ ಮತ್ತು ಅಸಮಾನತೆಯನ್ನು ಹೋಗಲಾಡಿಸಲು ಸಾಕಷ್ಟು ಶ್ರಮಿಸಿದ್ದಾರೆ. ಕನಕದಾಸರು ನಾಟಕಕಾರರಾಗಿ, ಸಂಗೀತಗಾರರಾಗಿ ನಾಡಿಗೆ ನಾನಾ ಕೊಡುಗೆ ನೀಡಿದ್ದು, ಅವರ ಜೀವನ ಚರಿತ್ರೆ ಹಾಗೂ ಸಿದ್ಧಾಂತವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅವರ (Kanakadasa Jayanthi) ಚಿಂತನೆಗಳನ್ನು ಅನುಸರಿಸಿಕೊಂಡು ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಬದುಕಬೇಕು ಎಂದು ಹೇಳಿದರು.
ಕಾರ್ಯಕ್ರಮಕ್ಕೂ (Kanakadasa Jayanthi) ಮುನ್ನ ಪಟ್ಟಣದ ಮುಖ್ಯ ಬೀದಿಯಲ್ಲಿ ಕನಕದಾಸರ ಭಾವಚಿತ್ರವುಳ್ಳ ಬೆಳ್ಳಿ ರಥಗಳ ಮೆರವಣಿಗೆ ನಡೆಸಲಾಯಿತು. ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಹಾಗೂ ಸಮುದಾಯದ ಮುಖಂಡರನ್ನು ಸನ್ಮಾಸಿದರು. ಈ ವೇಳೆ (Kanakadasa Jayanthi) ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಸಿಗ್ಬತ್ ವುಲ್ಲಾ, ಬಿಇಒ ಕೃಷ್ಣಪ್ಪ, ಪಪಂ ಅಧ್ಯಕ್ಷ ವಿಕಾಸ್, ಸಿಪಿಐ ಗಣೇಶ್ ನಾಯಕ್, ಪಪಂ ಉಪಾಧ್ಯಕ್ಷ ಗಂಗರಾಜು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಕೆ.ವಿ.ನಾರಾಯಣ ಸ್ವಾಮಿ, ಕಸಾಪ ಅಧ್ಯಕ್ಷ ಮಂಜುನಾಥ್, ತಾಲೂಕು ಕುರುಬರ ಸಂಘದ ಅಧ್ಯಕ್ಷ ಅಶ್ವಥ್ ಗೌಡ, ಸಮುದಾಯದ ಮುಖಂಡರಾದ ಮಮತ ಮಂಜುನಾಥ್, ನವೀನ್ ಗೌಡ, ಮಂಜುನಾಥ್, ಶಿವಪ್ಪ, ಮಹದೇವಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ವಿವಿಧ ಸಂಘಟನೆಗಳ ಮುಖಂಡರು ಹಾಗೂ ಸಾರ್ವಜನಿಕರು ಹಾಜರಿದ್ದರು.