ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆಯುತ್ತಿರುವ ಸರಣಿ ದಾಳಿಗಳು ಈಗ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿವೆ. ಅಲ್ಲಿನ ಭೀಕರ ಪರಿಸ್ಥಿತಿಯನ್ನು ಕಂಡು ಕೇವಲ ರಾಜಕಾರಣಿಗಳಷ್ಟೇ ಅಲ್ಲ, ಸಿನಿಮಾ ತಾರೆಯರೂ ಕೂಡ ಧ್ವನಿ ಎತ್ತುತ್ತಿದ್ದಾರೆ. ಇದೀಗ ಬಹುಭಾಷಾ ನಟಿ ಕಾಜಲ್ ಅಗರ್ವಾಲ್ (Kajal Aggarwal) ಅವರು ಬಾಂಗ್ಲಾ ಹಿಂದೂಗಳ ಪರವಾಗಿ ನಿಂತಿದ್ದು, ಭಾರತೀಯ ಹಿಂದೂಗಳಿಗೆ ಕಟುವಾದ ಎಚ್ಚರಿಕೆಯೊಂದನ್ನು ನೀಡಿದ್ದಾರೆ.

Kajal Aggarwal – “ಎದ್ದೇಳಿ ಹಿಂದೂಗಳೇ…” – ಕಾಜಲ್ ಆಕ್ರೋಶದ ನುಡಿಗಳು
ಕಾಜಲ್ ಅಗರ್ವಾಲ್ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಬಾಂಗ್ಲಾ ಹಿಂದೂಗಳ ಪರವಾಗಿ ಅಭಿಯಾನ ಆರಂಭಿಸಿದ್ದಾರೆ. “ಎದ್ದೇಳಿ ಹಿಂದೂಗಳೇ, ಮೌನ ನಿಮ್ಮನ್ನು ರಕ್ಷಿಸುವುದಿಲ್ಲ” ಎಂದು ಬರೆಯುವ ಮೂಲಕ ಮೌನವಾಗಿ ಕುಳಿತಿರುವ ಜನರನ್ನು ಬಡಿದೆಬ್ಬಿಸುವ ಕೆಲಸ ಮಾಡಿದ್ದಾರೆ. “ಜಗತ್ತು ಇಂದು ಬಾಂಗ್ಲಾದೇಶದ ಹಿಂದೂಗಳ ಸ್ಥಿತಿಯನ್ನು ನೋಡಿಯೂ ನೋಡದಂತೆ ನಟಿಸುತ್ತಿದೆ. ಕನಿಷ್ಠ ಭಾರತೀಯ ಹಿಂದೂಗಳಾದರೂ ಈಗ ಎದ್ದೇಳಬೇಕಿದೆ,” ಎಂದು ಅವರು ಕರೆ ನೀಡಿದ್ದಾರೆ.
‘ಆಲ್ ಐಯ್ಸ್ ಆನ್ ಬಾಂಗ್ಲಾದೇಶ’
ಕೆಲವು ತಿಂಗಳ ಹಿಂದೆ ಗಾಜಾ ಮತ್ತು ರಾಫಾ ಮೇಲೆ ನಡೆದ ದಾಳಿಯ ಸಂದರ್ಭದಲ್ಲಿ ಇಡೀ ವಿಶ್ವವೇ ‘All Eyes on Rafah’ ಎಂದು ಟ್ರೆಂಡ್ ಮಾಡಿತ್ತು. ಭಾರತದ ಬಾಲಿವುಡ್ ಸೆಲೆಬ್ರಿಟಿಗಳು ಕೂಡ ಸಾಲು ಸಾಲಾಗಿ ಪೋಸ್ಟ್ ಹಾಕಿದ್ದರು. ಆದರೆ ಈಗ ಬಾಂಗ್ಲಾದಲ್ಲಿ ಹಿಂದೂಗಳ ಮಾರಣಹೋಮ ನಡೆಯುತ್ತಿದ್ದರೂ ಅನೇಕರು ತುಟಿ ಬಿಚ್ಚುತ್ತಿಲ್ಲ. ಇದನ್ನೇ ಪ್ರಶ್ನಿಸಿರುವ ಕಾಜಲ್, “ಈಗ ಎಲ್ಲರ ಕಣ್ಣು ಬಾಂಗ್ಲಾದೇಶದ ಹಿಂದೂಗಳ ಮೇಲಿರಲಿ” ಎಂದು ಪೋಸ್ಟ್ ಮಾಡುವ ಮೂಲಕ ಪರೋಕ್ಷವಾಗಿ ದ್ವಂದ್ವ ನೀತಿಯನ್ನು (Kajal Aggarwal) ಖಂಡಿಸಿದ್ದಾರೆ.
ಬಾಂಗ್ಲಾದಲ್ಲಿ ಅಟ್ಟಹಾಸ: ಸುಡುತ್ತಿರುವ ಮನೆಗಳು, ಉರುಳುತ್ತಿರುವ ತಲೆಗಳು
ಬಾಂಗ್ಲಾದೇಶದ ಇಂದಿನ ಸ್ಥಿತಿ ನಿಜಕ್ಕೂ ಮೈನಡುಗಿಸುವಂತಿದೆ:
- ದೀಪು ಚಂದ್ರದಾಸ್: ಉದ್ರಿಕ್ತ ಗುಂಪಿನಿಂದ ಅಮಾನವೀಯವಾಗಿ ಹತ್ಯೆಯಾಗಿದ್ದಾರೆ.
- ಅಮೃತ್ ಮೊಂಡಲ್: ಕೇವಲ ಸುಲಿಗೆ ಆರೋಪ ಹೊರಿಸಿ ಇವರ ಮೇಲೆ ಭೀಕರ ದಾಳಿ ನಡೆಸಲಾಗಿದೆ.
- ಸಂಸ್ಕೃತಿಯ ಮೇಲೆ ದಾಳಿ: ಶತಮಾನಗಳಿಂದ ಪೂಜಿಸಲ್ಪಡುತ್ತಿದ್ದ ಪವಿತ್ರ ಆಲದ ಮರವನ್ನೇ ಕಡಿದು ಹಾಕಿರುವುದು ಅಲ್ಲಿನ ಅಲ್ಪಸಂಖ್ಯಾತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ. Read this also : ಬಾಂಗ್ಲಾದೇಶದಲ್ಲಿ (Bangladesh) ಕ್ರೌರ್ಯದ ಪರಮಾವಧಿ: ಧರ್ಮನಿಂದನೆ ಆರೋಪ ಹೊರಿಸಿ ಹಿಂದೂ ಯುವಕನನ್ನು ಮರಕ್ಕೆ ಕಟ್ಟಿಹಾಕಿ ಸಜೀವ ದಹನ!
ಕಾಜಲ್ ಬೆನ್ನಿಗೆ ನಿಂತ ಸೆಲೆಬ್ರಿಟಿಗಳು
ಕಾಜಲ್ ಅಗರ್ವಾಲ್ (Kajal Aggarwal) ಅವರ ಈ ದಿಟ್ಟ ನಡೆಯನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಇವರ ಬೆನ್ನಲ್ಲೇ ಬಾಲಿವುಡ್ ನಟಿ ಜಾಹ್ನವಿ ಕಪೂರ್ ಸೇರಿದಂತೆ ಬೆರಳೆಣಿಕೆಯಷ್ಟು ತಾರೆಯರು ಬಾಂಗ್ಲಾ ಹಿಂದೂಗಳ ಪರವಾಗಿ ದನಿ ಎತ್ತುತ್ತಿರುವುದು ಸಮಾಧಾನಕರ ಸಂಗತಿ.
ಬಾಂಗ್ಲಾದೇಶದಲ್ಲಿ ಮೊಹಮ್ಮದ್ ಯೂನಸ್ ನೇತೃತ್ವದ ಸರ್ಕಾರ ಬಂದ ಮೇಲೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ದೇವಸ್ಥಾನಗಳ ಧ್ವಂಸ, ಹತ್ಯೆ ಮತ್ತು ದೌರ್ಜನ್ಯಗಳು ನಿರಂತರವಾಗಿ ವರದಿಯಾಗುತ್ತಲೇ ಇವೆ.

