Viral Video – ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿರುವ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ನಾಯಕ ಕೈಶ್ ಖಾನ್, ಪೊಲೀಸರಿಂದ ತಪ್ಪಿಸಿಕೊಳ್ಳಲು ಹಾಸಿಗೆ ಕೆಳಗೆ ಅಡಗಿ ಕುಳಿತಿದ್ದಾಗ ಬಂಧನಕ್ಕೊಳಗಾಗಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

Viral Video – ಘಟನೆಯ ವಿವರಗಳು
ಸಮಾಜವಾದಿ ಪಕ್ಷದ ಮಾಜಿ ಖಜಾಂಚಿ ಮತ್ತು ಅಖಿಲೇಶ್ ಯಾದವ್ ಅವರ ಆಪ್ತರಾದ ಕೈಶ್ ಖಾನ್ ವಿರುದ್ಧ ಕನೌಜ್ ಜಿಲ್ಲೆಗೆ ಪ್ರವೇಶಿಸದಂತೆ ನ್ಯಾಯಾಲಯ ಗಡಿಪಾರು ಆದೇಶ ಹೊರಡಿಸಿತ್ತು. ಈ ಆದೇಶವನ್ನು ಉಲ್ಲಂಘಿಸಿ ಜಿಲ್ಲೆಗೆ ಮರಳಿದ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ಬಂಧಿಸಲು ಅವರ ಸಹೋದರನ ಮನೆಗೆ ಸರ್ಚ್ ವಾರಂಟ್‌ನೊಂದಿಗೆ ತೆರಳಿದ್ದರು.
ಕೈಶ್ ಖಾನ್ ಪೊಲೀಸರು ಬರುತ್ತಿರುವ ವಿಷಯ ತಿಳಿದು, ತನ್ನ ಸಹೋದರನ ಮನೆಯ ಮೇಲಂತಸ್ತಿನಲ್ಲಿರುವ ಕೋಣೆಯೊಂದರ ಹಾಸಿಗೆಯ ಕೆಳಗೆ ಅಡಗಿ ಕುಳಿತಿದ್ದಾನೆ. ಆದರೆ, ಪೊಲೀಸರು ನಡೆಸಿದ ತೀವ್ರ ಶೋಧ ಕಾರ್ಯಾಚರಣೆಯ ನಂತರ ಆತನನ್ನು ಪತ್ತೆಹಚ್ಚಿ ವಶಕ್ಕೆ ಪಡೆದರು. ಈ ವೇಳೆ, ಆತ ಹಾಸಿಗೆ ಕೆಳಗೆ ಅಡಗಿದ್ದ ದೃಶ್ಯವನ್ನು ಪೊಲೀಸರು ವೀಡಿಯೋ ಮಾಡಿದ್ದು, ಅದು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. Read this also : ಅತ್ಯಾ*ಚಾರ ಆರೋಪಿ ಪಂಜಾಬ್ ಆಮ್ ಆದ್ಮಿ ಪಕ್ಷದ ಶಾಸಕನಿಂದ ಪೊಲೀಸರ ಮೇಲೆ ಗುಂಡಿನ ದಾಳಿ, ಸಿನಿಮೀಯ ರೀತಿಯಲ್ಲಿ ಪರಾರಿ..!
Viral Video – ಪೊಲೀಸ್ ಅಧಿಕಾರಿಗಳ ಹೇಳಿಕೆ
ಕನೌಜ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ವಿನೋದ್ ಕುಮಾರ್ ಅವರು ಈ ಕುರಿತು ಮಾತನಾಡಿ, “ಖಚಿತ ಮಾಹಿತಿ ಮೇರೆಗೆ ನಾವು ಆತನನ್ನು ಬಂಧಿಸಲು ತೆರಳಿದ್ದೆವು. ಆತ ತನ್ನ ಸಹೋದರನ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ಪೊಲೀಸರು ಬಂದಿದ್ದು, ತಪ್ಪಿಸಿಕೊಳ್ಳುವ ಉದ್ದೇಶದಿಂದ ಮೇಲಂತಸ್ತಿನಲ್ಲಿ ಅಡಗಿಕೊಳ್ಳಲು ಪ್ರಯತ್ನಿಸಿದ್ದಾನೆ” ಎಂದು ತಿಳಿಸಿದ್ದಾರೆ. ಕೈಶ್ ಖಾನ್ ವಿರುದ್ಧ ಗೂಂಡಾ ಕಾಯ್ದೆಯ ಸೆಕ್ಷನ್ 3 ಮತ್ತು 10 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಹಿಂದೆ, ಜನವರಿ 6 ರಂದು, ಆತನ ಒಡೆತನದ ಮದುವೆ ಮಂಟಪವನ್ನು ಅಕ್ರಮವಾಗಿ ನಿರ್ಮಿಸಲಾಗಿದೆ ಎಂಬ ಆರೋಪದ ಮೇಲೆ ನೆಲಸಮ ಮಾಡಲಾಗಿತ್ತು.

ವಿಡಿಯೋ ಇಲ್ಲಿದೆ ನೋಡಿ : Click Here
Viral Video – ರಾಜಕೀಯ ನಂಟು ಮತ್ತು ಗಡಿಪಾರು ಆದೇಶ
ಜುಲೈ 25 ರಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಕನೌಜ್‌ಗೆ ಭೇಟಿ ನೀಡಿ ಕೈಶ್ ಖಾನ್ ಅವರನ್ನು ಭೇಟಿಯಾಗಿದ್ದರು. ಇದರ ಮೂರು ದಿನಗಳ ನಂತರ, ಜುಲೈ 28 ರಂದು ಕನೌಜ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಶುತೋಷ್ ಮೋಹನ್ ಅಗ್ನಿಹೋತ್ರಿ ಅವರು ಕೈಶ್ ಖಾನ್ ಅವರನ್ನು ಜಿಲ್ಲೆಯಿಂದ ಗಡಿಪಾರು ಮಾಡಲು ಆದೇಶಿಸಿದ್ದರು. ನ್ಯಾಯಾಲಯ ಕೂಡಲೇ ಜಿಲ್ಲೆ ತೊರೆಯುವಂತೆ ಆದೇಶಿಸಿದ್ದರೂ, ಆತ ಕಾನೂನು ಉಲ್ಲಂಘಿಸಿದ್ದರಿಂದ ಪೊಲೀಸರು ಅವರನ್ನು ಬಂಧಿಸಿದ್ದಾರೆ.
