ಸದಾ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಸುದ್ದಿಯಾಗುತ್ತಿದ್ದ ಸಾಹಿತಿ ಪ್ರೊ ಕೆ.ಎಸ್.ಭಗವಾನ್ ಮತ್ತೊಮ್ಮೆ ನಾಲಿಗೆ ಹರಿಬಿಟ್ಟಿದ್ದಾರೆ. ಹಿಂದೂ ಧರ್ಮ ಹಿಂದೂಗಳ ಧರ್ಮವಲ್ಲ, ಅದು ಬ್ರಾಹ್ಮಣ ಧರ್ಮ, ಹಿಂದೂ ಎಂದರೇ ಹಿಂದಕ್ಕೆ ಹೋಗುವ ಜನ ಎಂದು ಸಾಹಿತಿ ಪ್ರೊ. ಕೆ.ಎಸ್.ಭಗವಾನ್ ಮಹಿಷ ದಸರಾ ಕಾರ್ಯಕ್ರಮದಲ್ಲಿ ಹೇಳಿದ್ದು, ಅವರ ಹೇಳಿಕಗೆ ಭಾರಿ ಆಕ್ರೋಷ ವ್ಯಕ್ತವಾಗುತ್ತಿದೆ. ಅವರು ಮೈಸೂರಿನ ಟೌನ್ ಹಾಲ್ ನಲ್ಲಿ ಆಯೋಜಿಸಿದದ ಮಹಿಷ ದಸರಾ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ವೇಳೆ ಬೌದ್ದರನ್ನು ಹೊಗಳುವ ಭರದಲ್ಲಿ ಹಿಂದೂ ಧರ್ಮದ ಕುರಿತು ಹೀನಾಯವಾಗಿ ಮಾತನಾಡಿದ್ದಾರೆ.
ಇಂದು ಅನೇಕರು ಜ್ಞಾನದ ಹಸಿವು ಇಲ್ಲದೇ ಬ್ರಾಹ್ಮಣರ ಗುಲಾಮರಾಗಿದ್ದಾರೆ. ಹಿಂದೂಗಳ ಅಂದ್ರೆ ಹಿಂದಕ್ಕೆ ಹೋಗುವ ಜನ, ತಾವು ಮುಂದಕ್ಕೆ ಹೋಗದೇ, ಇತರರನ್ನು ಮುಂದಕ್ಕೆ ಹೋಗಲು ಬಿಡದಂತಹ ಜನ, ಗಂಡಸರನ್ನು ಮಾತ್ರ ಬ್ರಾಹ್ಮಣರು ಅಂತಾರೆ. ಆದರೆ ಹೆಂಗಸರನ್ನು ಬ್ರಾಹ್ಮಣರು ಅನ್ನೊಲ್ಲ ಬದಲಿಗೆ ಶೂದ್ರರು ಅಂತಾರೆ. ದೇವಾಲಯವನ್ನು ಕಟ್ಟುವುದು ಶೂದ್ರರು. ದೇವಾಲಯದ ಒಳಗೆ ಇರೋವರು ಬ್ರಾಹ್ಮಣರು. ಆದರೆ ದೇವಾಲಯ ನಿರ್ಮಾಣ ಮಾಡಿದಂತಹ ಶೂದ್ರರನ್ನೇ ಒಳಗೆ ಬಿಟ್ಟುಕೊಳ್ಳುವುದಿಲ್ಲ. ನಾವು ಶೂದ್ರರೆಲ್ಲಾ ಒಂದಾಗಿ ಬ್ರಾಹ್ಮಣರ ದೇವಾಲಯಗಳಿಗೆ ಹೋಗುವುದನ್ನು ಮೊದಲು ನಿಲ್ಲಿಸಬೇಕಿದೆ ಎಂದಿದ್ದಾರೆ.
ನಾನು ದೇವಾಲಯಕ್ಕೆ ಹೋಗಿ 50 ವರ್ಷ ಆಗಿದೆ. ದೇವಾಲಯಕ್ಕೆ ಹೋದರೇ ಏನೂ ಆಗೊಲ್ಲ. ಹೋಗದೇ ಇದ್ದರೂ ಏನಾಗಲ್ಲ. ದೇವಾಲಯದಲ್ಲಿ ತಟ್ಟೆಗೆ ದುಡ್ಡು ಹಾಕ್ತೀರಾ, ಒಡೆದ ತೆಂಗಿನಕಾಯಿಯ ಅರ್ಧ ಕಾಯಿ ಇಟ್ಟುಕೊಂಡು ಅರ್ಧ ಕೊಡ್ತಾರೆ ಅಷ್ಟೆ. ಶೂದ್ರರಿಗೆ ಏನಾದರೂ ಮಾನ ಮಾರ್ಯದೆಯಿದ್ದರೇ ಅವರು ದೇವಾಲಯಕ್ಕೆ ಹೋಗಬಾರದು. ಮನುಸ್ಮೃತಿಯಲ್ಲಿ ಶೂದ್ರ ಅಂದ್ರೇ ಸೂಳೆಗೆ ಹುಟ್ಟಿದವನು ಅಂತಾ ಇದೆ. ಈಗ ಹೇಳಿ ನಾವು ಶೂದ್ರರು ಎಂದು ಒಪ್ಪಿಕೊಳ್ಳಬೇಕಾ ಎಂದು ಪ್ರಶ್ನೆ ಮಾಡಿದರು. ಮುಂದುವರೆದು ಹಿಂದೂ ಧರ್ಮ ನಮ್ಮದಲ್ಲ. ನಮಗೆ ಹಿಂದೂ ಧರ್ಮ ಬೇಕಿಲ್ಲ. ಎಲ್ಲರೂ ಬೌದ್ಧಗುರುಗಳನ್ನು ನಂಬಿ. ನಾನು ಹೇಳಿದ್ದು ನಂಬಿ ಎಂದು ಬುದ್ದ ಹೇಳೊಲ್ಲ. ಆದರೆ ನಾನು ಹೇಳಿದ್ದನ್ನು ಕೇಳಿ ಎಂದು ಏಸು ಹೇಳ್ತಾರೆ. ನಾನು ಹೇಳಿದ್ದು ಕೇಳದಿದ್ರೆ ನರಕಕ್ಕೆ ಹೋಗ್ತೀರಿ ಅಂತಾ ಕೃಷ್ಣ ಹೇಳ್ತಾನೆ. ನಾವು ಬುದ್ಧ ಧರ್ಮಕ್ಕೆ ಹೋಗಬೇಕು. ಶೂದ್ರರು ಎಂಬ ಗುಲಾಮರನ್ನು ಎಚ್ಚರಿಸಬೇಕು. ಯಾರು ಹೀನನಾಗಿದ್ದಾನೆ ಅವನು ಹಿಂದೂ. ಹಿಂದೂ ಎಂದರೆ ಹೀನಾ ಎಂದು ಅರ್ಥ. ಯಾರು ಹಿಂದೂ ಆಗಬಾರದು ಎಂದು ತಿಳಿಸಿದರು.