Saturday, November 23, 2024

Job Notification : Gail ನಲ್ಲಿ ಖಾಲಿಯಿರುವ 391 ಹುದ್ದೆಗಳಿಗೆ ಅರ್ಜಿ ಆಹ್ವಾನ, ಸೆ.7 ರೊಳಗೆ ಅರ್ಜಿ ಸಲ್ಲಿಸಿ….!

Job Notification – Gas Authority of India Limited (ಗ್ಯಾಸ್‌ ಅಥಾರಟಿ ಆಫ್‌ ಇಂಡಿಯಾ ಲಿಮಿಟೆಡ್‌) ನಲ್ಲಿ ಖಾಲಿಯಿರುವ 391 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. Gail ನಲ್ಲಿ ಖಾಲಿಯಿರುವ ಜೂನಿಯರ್‍ ಇಂಜನೀಯರ್‍, ಫಾರ್‍ ಮ್ಯಾನ್, ಜೂನಿಯರ್‍ ಸೂಪರಿಟೆಂಡೆಂಟ್ ಸೇರಿದಂತೆ ಒಟ್ಟು 391 ಹುದ್ದಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಡಿಪ್ಲೊಮಾ, ದ್ವಿತೀಯ ಪಿಯುಸಿ, ಪದವಿ ವಿದ್ಯಾರ್ಹತೆ ಹೊಂದಿರುವವರು ಅರ್ಜಿ ಸಲ್ಲಿಸಬಹುದಾಗಿದ್ದು, ಸೆ.7 ಕೊನೆಯ ದಿನಾಂಕವಾಗಿದೆ. ಇನ್ನೂ ಹುದ್ದೆಗಳ ಸಂಪೂರ್ಣ ವಿವರಗಳಿಗೆ ಬಂದರೇ,

Gail recruitment notification 0

ಹುದ್ದೆಗಳ ವಿವರ:

  • ಜೂನಿಯರ್ ಎಂಜಿನಿಯರ್ (ಕೆಮಿಕಲ್)- 2 ಹುದ್ದೆ, ವಿದ್ಯಾರ್ಹತೆ: ಕೆಮಿಕಲ್ / ಪೆಟ್ರೋಕೆಮಿಕಲ್/ ಕೆಮಿಕಲ್ ಟೆಕ್ನಾಲಜಿ/ ಪೆಟ್ರೋಕೆಮಿಕಲ್ ಟೆಕ್ನಾಲಜಿ ಎಂಜಿನಿಯರಿಂಗ್‌ನಲ್ಲಿ ಡಿಪ್ಲೋಮಾ.
  • ಜೂನಿಯರ್ ಇಂಜಿನಿಯರ್ (ಮೆಕ್ಯಾನಿಕಲ್)- 1 ಹುದ್ದೆ, ವಿದ್ಯಾರ್ಹತೆ: ಮೆಕ್ಯಾನಿಕಲ್/ ಪ್ರೊಡಕ್ಷನ್/ ಪ್ರೊಡಕ್ಷನ್ & ಇಂಡಸ್ಟ್ರಿಯಲ್/ ಮ್ಯಾನುಫ್ಯಾಕ್ಚರಿಂಗ್/ ಮೆಕ್ಯಾನಿಕಲ್ ಮತ್ತು ಆಟೋಮೊಬೈಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೋಮಾ
  • ಫಾರ್‌ಮ್ಯಾನ್‌ (ಎಲೆಕ್ಟ್ರಿಕಲ್) 1 ಹುದ್ದೆ, ವಿದ್ಯಾರ್ಹತೆ: ಎಲೆಕ್ಟ್ರಿಕಲ್/ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ
  • ಫಾರ್‌ಮ್ಯಾನ್‌ (ಇನ್‌ಸ್ಟ್ರುಮೆಂಟೇಶನ್) 14 ಹುದ್ದೆ, ವಿದ್ಯಾರ್ಹತೆ: ಇನ್‌ಸ್ಟ್ರುಮೆಂಟೇಶನ್ / ಇನ್‌ಸ್ಟ್ರುಮೆಂಟೇಶನ್ & ಕಂಟ್ರೋಲ್/ ಎಲೆಕ್ಟ್ರಾನಿಕ್ಸ್ & ಇನ್‌ಸ್ಟ್ರುಮೆಂಟೇಶನ್/ ಎಲೆಕ್ಟ್ರಿಕಲ್ & ಇನ್‌ಸ್ಟ್ರುಮೆಂಟೇಶನ್/ ಎಲೆಕ್ಟ್ರಾನಿಕ್ಸ್/ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ
  • ಫಾರ್‌ಮ್ಯಾನ್‌ (ಸಿವಿಲ್) 6 ಹುದ್ದೆ, ವಿದ್ಯಾರ್ಹತೆ: ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ
  • ಜೂನಿಯರ್‌ ಸೂಪರಿಟೆಂಡೆಂಟ್‌ 5 ಹುದ್ದೆ, ವಿದ್ಯಾರ್ಹತೆ: ಪದವಿ
  • ಜೂನಿಯರ್ ಕೆಮಿಸ್ಟ್ 8 ಹುದ್ದೆ, ವಿದ್ಯಾರ್ಹತೆ: ಸ್ನಾತಕೋತ್ತರ ಪದವಿ, ಎಂ.ಎಸ್‌ಸಿ
  • ಜೂನಿಯರ್ ಅಕೌಂಟೆಂಟ್ 14 ಹುದ್ದೆ, ವಿದ್ಯಾರ್ಹತೆ: ಸಿಎ ಅಥವಾ ಐಸಿಡಬ್ಲ್ಯುಎ (ಇಂಟರ್), ಸ್ನಾತಕೋತ್ತರ ಪದವಿ, ಎಂ.ಕಾಂ
  • ಟೆಕ್ನಿಕಲ್ ಅಸಿಸ್ಟೆಂಟ್ (ಲ್ಯಾಬೊರೇಟರಿ) 3 ಹುದ್ದೆ, ವಿದ್ಯಾರ್ಹತೆ: ಪದವಿ, ಬಿ.ಎಸ್‌ಸಿ
  • ಆಪರೇಟರ್ (ಕೆಮಿಕಲ್) 73 ಹುದ್ದೆ, ವಿದ್ಯಾರ್ಹತೆ: ಪದವಿ, ಬಿ.ಎಸ್‌ಸಿ
  • ಬಿಸಿನೆಸ್ ಅಸಿಸ್ಟೆಂಟ್ 65 ಹುದ್ದೆ, ವಿದ್ಯಾರ್ಹತೆ: ಬಿಬಿಎ, ಬಿಬಿಎಸ್, ಬಿಬಿಎಂ, ಪದವಿ
  • ಅಕೌಂಟ್ಸ್ ಅಸಿಸ್ಟೆಂಟ್ 13 ಹುದ್ದೆ, ವಿದ್ಯಾರ್ಹತೆ: ಕಾಮರ್ಸ್‌ನಲ್ಲಿ ಪದವಿ, ಬಿ.ಕಾಂ
  • ಆಪರೇಟರ್ (ಫೈರ್) 39 ಹುದ್ದೆ, ವಿದ್ಯಾರ್ಹತೆ: 12ನೇ ತರಗತಿ
  • ಟೆಕ್ನಿಷಿಯನ್ (ಮೆಕ್ಯಾನಿಕಲ್) 39 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿ, ಐಟಿಐ
  • ಟೆಕ್ನಿಷಿಯನ್ (ಟೆಲಿಕಾಂ ಮತ್ತು ಟೆಲಿಮೆಟ್ರಿ) 11 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿ, ಐಟಿಐ
  • ಆಪರೇಟರ್ (ಬಾಯ್ಲರ್) 8 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿ, ಐಟಿಐ
  • ಟೆಕ್ನಿಷಿಯನ್ (ಎಲೆಕ್ಟ್ರಿಕಲ್) 44 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿ, ಐಟಿಐ
  • ಟೆಕ್ನಿಷಿಯನ್ (ಇನ್‌ಸ್ಟ್ರುಮೆಂಟೇಶನ್) 45 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿ, ಐಟಿಐ

ಇನ್ನೂ ವಿವಿಧ ಹುದ್ದೆಗಳಿಗೆ ಅನುಗುಣವಾಗಿ 26ರಿಂದ 45 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಪಿಡಬ್ಲ್ಯುಬಿಡಿ ಅಭ್ಯರ್ಥಿಗಳಿಗೆ 10 ವರ್ಷಗಳ ರಿಯಾಯಿತಿ ಇದೆ. ಸಾಮಾನ್ಯ, EWS ಮತ್ತು OBC ವಿಭಾಗದ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 50 ರೂ. ಪಾವತಿಸಬೇಕು. ಉಳಿದ ವರ್ಗಗಳ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲ. ಲಿಖಿತ ಪರೀಕ್ಷೆ, ಕಂಪ್ಯೂಟರ್‌ ಕೌಶಲ್ಯ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು GAIL ನ ಅಧಿಕೃತ ವೆಬ್ ಸೈಟ್ (https://gailonline.com/CRApplyingGail.html) ಭೇಟಿ ನೀಡಬಹುದು.

by Admin
by Adminhttp://ismkannadanews.com
Welcome to ISM News, if you want to contact us, then feel free to say anything about www.ismkannadanews.com. We'll appreciate your feedback.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe

Latest Articles

error: Content is protected !!