Job Alert – ಅನೇಕರಿಗೆ ಕೇಂದ್ರ ಸರ್ಕಾರದ ಹುದ್ದೆಗಳನ್ನು ಪಡೆಯಬೇಕೆಂಬ ಆಸೆಯಿರುತ್ತದೆ. ಅಂತಹವರಿಗೆ ನ್ಯಾಷನಲ್ ಸೀಡ್ಸ್ ಕಾರ್ಪೋರೇಷನ್ ಲಿಮಿಟೆಡ್ (NSCL) ಟ್ರೈನಿ ಪೋಸ್ಟ್ ಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದ್ದು, ಈ ಸಂಬಂಧ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಯಾವೆಲ್ಲಾ ಹುದ್ದೆಗಳಿವೆ, ವಿದ್ಯಾರ್ಹತೆ, ವೇತನ ಸೇರಿದಂತೆ ಪ್ರಮುಖ ಮಾಹಿತಿಯನ್ನು ಈ ಲೇಖನದ ಮೂಲಕ ಹಂಚಿಕೊಳ್ಳಲಾಗಿದೆ.
ನ್ಯಾಷನಲ್ ಸೀಡ್ಸ್ ಕಾರ್ಪೊರೇಷನ್ ಲಿಮಿಟೆಡ್ (ಎನ್ಎಸ್ಸಿಎಲ್) ಟ್ರೈನಿ ಪೋಸ್ಟ್‌ಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಹೊರಡಿಸಿದ್ದು, ಒಟ್ಟು 188 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಉಪ ಪ್ರಧಾನ ವ್ಯವಸ್ಥಾಪಕರು, ಸಹಾಯಕ ವ್ಯವಸ್ಥಾಪಕ, ಮ್ಯಾನೇಜ್‌ಮೆಂಟ್ ಟ್ರೈನಿ (ಹೆಚ್ಆರ್), ಮ್ಯಾನೇಜ್‌ಮೆಂಟ್ ಟ್ರೈನಿ (ಕ್ಯೂಸಿ), ಮ್ಯಾನೇಜ್‌ಮೆಂಟ್ ಟ್ರೈನಿ (ಎಲೆಕ್ಟ್ರಿಕಲ್ ಇಂಜಿನಿಯರಿಂಗ್), ಹಿರಿಯ ತರಬೇತಿ (ವಿಜಿಲೆನ್ಸ್), ತರಬೇತಿ (ಕೃಷಿ), ತರಬೇತಿ (Quality Control), ತರಬೇತಿ ಹುದ್ದೆಗಳು- ಮಾರ್ಕೆಟಿಂಗ್, ಮಾನವ ಸಂಪನ್ಮೂಲ, ಸ್ಟೆನೋಗ್ರಾಫರ್, ಖಾತೆಗಳು, ಕೃಷಿ ಮಳಿಗೆಗಳು, ಎಂಜಿನಿಯರಿಂಗ್ ಸ್ಟೋರ್ಸ್, ತಂತ್ರಜ್ಞ ಕೆಲಸಗಳಿಗೆ ನೇಮಕಾತಿ ನಡೆಯಲಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ದೇಶದ ಯಾವುದಾದರೂ ಬ್ರಾಂಚ್ ಗಳಲ್ಲಿ ನೇಮಕಾತಿ ಮಾಡಬಹುದು.
ಅಭ್ಯರ್ಥಿಗಳು ಗಮನಿಸಬೇಕಾದ ಪ್ರಮುಖ ಮಾಹಿತಿ:
- ವಿದ್ಯಾರ್ಹತೆ- ಆಯಾಯ ಉದ್ಯೋಗಗಳಿಗೆ ಸಂಬಂಧಿಸಿದಂತೆ ಕೇಳಲಾಗಿದೆ. (ಐಟಿಐ ಇಂದ ಪಿಜಿವರೆಗೆ ವಿದ್ಯಾರ್ಹತೆ ನಿಗಧಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ನ್ಯಾಷನಲ್ ಸೀಡ್ಸ್ ಕಾರ್ಪೊರೇಷನ್ ಲಿಮಿಟೆಡ್ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸುವುದು )
- ವಯೋಮಿತಿ- 27 ರಿಂದ 50 ವರ್ಷಗಳು, ಎಸ್ಸಿ, ಎಸ್ಟಿ ಅಭ್ಯರ್ಥಿಗಳು: 05 ವರ್ಷಗಳು, ವಿಷೇಶ ಚೇತನರು ಅಭ್ಯರ್ಥಿಗಳು: 10 ವರ್ಷಗಳು ಹಾಗೂ ಒಬಿಸಿ ಅಭ್ಯರ್ಥಿಗಳಿಗೆ : 03 ವರ್ಷಗಳು (ಅಧಿಸೂಚನೆಯಲ್ಲಿ ತಿಳಿಸಲಾಗಿದೆ)
- ಮಾಸಿಕ ಸಂಬಳ- ಹುದ್ದೆಗಳಿಗೆ ತಕ್ಕಂತೆ ಬೇರೆ ಬೇರೆ ಇದೆ (₹24616, ₹57920, ₹31856, ₹57920, ₹80720, 141260 ರೂಪಾಯಿಗಳು)
- ಅರ್ಜಿ ಶುಲ್ಕ: ಸಾಮಾನ್ಯ ಅಭ್ಯರ್ಥಿ, ಒಬಿಸಿ ಅಭ್ಯರ್ಥಿಗಳು: 500 ರೂ. ಎಸ್ಸಿ, ಎಸ್ಟಿ ಅಭ್ಯರ್ಥಿಗಳು: ಇಲ್ಲ ಆನ್ ಲೈನ್ ಮೂಲಕವೇ ಶುಲ್ಕವನ್ನು ಪಾವತಿಸಬೇಕು.
- ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ- 30 ನವೆಂಬರ್ 2024
- ಅರ್ಜಿ ಸಲ್ಲಿಸಲು ನೇರವಾಗಿ ಈ ಲಿಂಕ್ ಕ್ಲಿಕ್ ಮಾಡಿ: https://apply.registernow.in/NationalSeedsCorp/Multipleposts24