Jio Payments Bank – ಇದು ನಿಮ್ಮ ಅಕೌಂಟ್ನಲ್ಲಿ ಸುಮ್ಮನೆ ಬಿದ್ದಿರುವ ಹಣಕ್ಕೆ ಅಧಿಕ ಬಡ್ಡಿ ತಂದುಕೊಡುವಂತಹ ಒಂದು ಹೊಸ ಯೋಜನೆ. ರಿಲಯನ್ಸ್ ಇಂಡಸ್ಟ್ರೀಸ್ನ ಅಂಗಸಂಸ್ಥೆಯಾದ ಜಿಯೋ ಫೈನಾನ್ಷಿಯಲ್ ಸರ್ವಿಸಸ್ ನ ಜಿಯೋ ಪೇಮೆಂಟ್ಸ್ ಬ್ಯಾಂಕ್ ತನ್ನ ಗ್ರಾಹಕರಿಗಾಗಿ ‘ಸೇವಿಂಗ್ಸ್ ಪ್ರೋ’ (Savings Pro) ಎಂಬ ವಿಶೇಷ ಫೀಚರ್ ಪರಿಚಯಿಸಿದೆ. ಇದರಿಂದ ನೀವು ನಿಮ್ಮ ಹಣವನ್ನು ಸೇವಿಂಗ್ಸ್ ಅಕೌಂಟ್ನಲ್ಲಿ ಇಟ್ಟುಕೊಂಡೇ, ಶೇ. 6.5ರಷ್ಟು ಬಡ್ಡಿಯನ್ನು ಗಳಿಸಬಹುದು.

Jio Payments Bank – ಸಾಮಾನ್ಯ ಸೇವಿಂಗ್ಸ್ ಅಕೌಂಟ್ಗಿಂತ ಇದು ಹೇಗೆ ಭಿನ್ನ?
ಸಾಮಾನ್ಯವಾಗಿ ಬ್ಯಾಂಕ್ ಸೇವಿಂಗ್ಸ್ ಅಕೌಂಟ್ಗಳಲ್ಲಿ ಸಿಗುವ ಬಡ್ಡಿ ಶೇ. 2.5 ರಿಂದ ಶೇ. 4.5 ರ ಆಸುಪಾಸಿನಲ್ಲಿರುತ್ತದೆ. ಆದರೆ, ಜಿಯೋ ಪೇಮೆಂಟ್ಸ್ ಬ್ಯಾಂಕ್ನ ಈ ‘ಸೇವಿಂಗ್ಸ್ ಪ್ರೋ’ ಫೀಚರ್ ನಿಮ್ಮ ಹಣಕ್ಕೆ ಹೆಚ್ಚಿನ ಲಾಭ ತಂದುಕೊಡುತ್ತದೆ. ನಿಮ್ಮ ಖಾತೆಯಲ್ಲಿ ನಿರ್ದಿಷ್ಟ ಮೊತ್ತಕ್ಕಿಂತ ಹೆಚ್ಚು ಹಣವಿದ್ದರೆ, ಆ ಹೆಚ್ಚುವರಿ ಮೊತ್ತವನ್ನು ಬ್ಯಾಂಕ್ ತಾನಾಗಿಯೇ ಓವರ್ನೈಟ್ ಮ್ಯೂಚುವಲ್ ಫಂಡ್ಗಳಲ್ಲಿ (Overnight Mutual Funds) ಹೂಡಿಕೆ ಮಾಡುತ್ತದೆ. ಇದರಿಂದ ನಿಮ್ಮ ಹಣ ವ್ಯರ್ಥವಾಗದೆ ಹೆಚ್ಚುವರಿ ಬಡ್ಡಿ ಗಳಿಸುತ್ತದೆ.
Jio Payments Bank – ಹಣ ಹೇಗೆ ಹೂಡಿಕೆಯಾಗುತ್ತದೆ?
ನಿಮ್ಮ ಖಾತೆಯಲ್ಲಿರುವ ಹೆಚ್ಚುವರಿ ಹಣವನ್ನು ಬ್ಯಾಂಕ್ ಸುರಕ್ಷಿತ ಓವರ್ನೈಟ್ ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡುತ್ತದೆ. ಈ ಫಂಡ್ಗಳು ಸಾಮಾನ್ಯವಾಗಿ ಕನಿಷ್ಠ ಅಪಾಯವನ್ನು ಹೊಂದಿರುತ್ತವೆ. ಈ ಪ್ರಕ್ರಿಯೆ ನಡೆಯಲು ನೀವು ನಿಮ್ಮ ಖಾತೆಯಲ್ಲಿ ಕನಿಷ್ಠ 5,000 ರೂಗಳ ‘ಥ್ರೆಶೋಲ್ಡ್’ ಮೊತ್ತವನ್ನು (Threshold Amount) ನಿಗದಿಪಡಿಸಬೇಕು. ಒಮ್ಮೆ ನೀವು ಈ ಥ್ರೆಶೋಲ್ಡ್ ಅನ್ನು ಸೆಟ್ ಮಾಡಿದರೆ, ಅದಕ್ಕಿಂತ ಹೆಚ್ಚಿರುವ ಹಣ ತನ್ನಿಂದ ತಾನೇ ಹೂಡಿಕೆಯಾಗಲು ಆರಂಭಿಸುತ್ತದೆ. Read this also : ಜಿಯೋ ಫೈನಾನ್ಸ್ ನಿಂದ ಭರ್ಜರಿ ಕೊಡುಗೆ: 10 ನಿಮಿಷದಲ್ಲಿ 1 ಕೋಟಿ ರೂ.ವರೆಗೆ ಸಾಲ!

Jio Payments Bank – ಗಮನಿಸಬೇಕಾದ ಪ್ರಮುಖ ವಿಷಯಗಳು:
- ಒಂದು ದಿನಕ್ಕೆ ಗರಿಷ್ಠ ರೂ. 1.5 ಲಕ್ಷದವರೆಗೆ ಹೂಡಿಕೆ ಮಾಡಬಹುದು.
- ಹೂಡಿಕೆ ಮತ್ತು ವಿತ್ಡ್ರಾ ಮಾಡಲು ಯಾವುದೇ ಪ್ರವೇಶ ಅಥವಾ ನಿರ್ಗಮನ ಶುಲ್ಕ ಇರುವುದಿಲ್ಲ.
- ಯಾವುದೇ ರೀತಿಯ ಹಿಡನ್ ಚಾರ್ಜ್ಗಳು (Hidden charges) ಅಥವಾ ಲಾಕಿನ್ ಪೀರಿಯಡ್ (Lock-in period) ಇರುವುದಿಲ್ಲ.
Jio Payments Bank – ಹಣ ಹಿಂಪಡೆಯುವುದು ಹೇಗೆ?
ನಿಮಗೆ ಯಾವಾಗ ಹಣ ಬೇಕಾಗಿದೆಯೋ ಆಗ ಸುಲಭವಾಗಿ ಹಿಂಪಡೆಯಬಹುದು. ಆದರೆ, ಕೆಲವು ನಿರ್ಬಂಧಗಳಿರುತ್ತವೆ:
- ಹೂಡಿಕೆಯಾದ ಒಟ್ಟು ಮೊತ್ತದಲ್ಲಿ ಶೇ. 90ರಷ್ಟನ್ನು ಮಾತ್ರ ಹಿಂಪಡೆಯಲು ಸಾಧ್ಯ.
- ಒಂದೇ ಬಾರಿಗೆ ರೂ. 50,000ದವರೆಗೆ ತಕ್ಷಣವೇ ಹಣ ಸಿಗುತ್ತದೆ.
- ಉಳಿದ ಮೊತ್ತವನ್ನು 1-2 ಕೆಲಸದ ದಿನಗಳಲ್ಲಿ ನಿಮ್ಮ ಖಾತೆಗೆ ವರ್ಗಾಯಿಸಲಾಗುತ್ತದೆ.

