Jio -ಟೆಲಿಕಾಂ ಕ್ಷೇತ್ರದಲ್ಲಿ ಭಾರಿ ತಲ್ಲಣ ಸೃಷ್ಟಿಸಿದ್ದ ಜಿಯೋ ತನ್ನ ಗ್ರಾಹಕರಿಗಾಗಿ ಮತ್ತೊಮ್ಮೆ ಭರ್ಜರಿ ಆಫರ್ ನೀಡಿದೆ. ಜಿಯೋನ ಹೊಸ 445 ರೂಪಾಯಿ ರೀಚಾರ್ಜ್ ಘೋಷಣೆ ಮಾಡಿದ್ದು, ಇದರಿಂದ ಇತರೆ ಟೆಲಿಕಾಂ ಕಂಪನಿಗಳು ಶಾಕ್ ಆಗಿದೆ ಎನ್ನಲಾಗಿದೆ. ಈ ಹೊಸ ಪ್ಯಾಕ್ ನಲ್ಲಿ ದಿನಕ್ಕೆ 2GB 5G ಡೇಟಾ, ಅನ್ಲಿಮಿಟೆಡ್ ಕಾಲ್, ಉಚಿತ SMS, ಮತ್ತು 10+ ಪ್ರೀಮಿಯಂ OTT ಚಾನೆಲ್ ಗಳ ಸಬ್ಸ್ಕ್ರಿಪ್ಷನ್ ಸೇರಿವೆ. ಇದು ಡೇಟಾ, ಕಾಲ್ ಮತ್ತು ಮನೋರಂಜನೆಯನ್ನು ಒಂದೇ ಪ್ಯಾಕ್ ನಲ್ಲಿ ಒದಗಿಸುವ ತ್ರಿ-ಇನ್-ವನ್ ಆಫರ್ ಆಗಿ ಹೊರಹೊಮ್ಮಿದೆ.

Jio – ಪ್ಲಾನ್ ನ ವಿಶೇಷತೆಗಳು:
- ದಿನಕ್ಕೆ 2GB 5G ಡೇಟಾ: 28 ದಿನಗಳವರೆಗೆ ಹೈ-ಸ್ಪೀಡ್ ಇಂಟರ್ನೆಟ್.
- ಅನ್ಲಿಮಿಟೆಡ್ ವಾಯ್ಸ್ ಕಾಲ್ಸ್: ಎಲ್ಲಾ ನೆಟ್ವರ್ಕ್ಗಳಿಗೆ ಉಚಿತ ಕಾಲಿಂಗ್.
- ದಿನಕ್ಕೆ 100 ಉಚಿತ SMS: 28 ದಿನಗಳಲ್ಲಿ ಒಟ್ಟು 2,800 SMS.
- 10+ OTT ಚಾನೆಲ್ಗಳು ಉಚಿತ: ZEE5, ಸೋನಿ LIV, ಡಿಸ್ಕವರಿ+, ಸನ್ NXT, ಲಯನ್ಗೇಟ್ ಪ್ಲೇ, ಮರಾಠಿ ಪ್ಲಾನೆಟ್, ಚೌಪಾಲ್, ಹೊಯಿಚೊಯಿ, ಮತ್ತು ಜಿಯೋ ಟಿವಿ ಅಪ್ಲಿಕೇಶನ್ ಸೇರಿದಂತೆ ಮನರಂಜನೆ ಪೂರೈಕೆ.
Jio – OTT ಸಬ್ಸ್ಕ್ರಿಪ್ಷನ್ ವಿವರ:
- ZEE5: ಬಾಲಿವುಡ್, ಸೀರಿಯಲ್ಗಳು ಮತ್ತು ಮೂಲ ವಿಷಯಗಳು.
- ಸೋನಿ LIV: ಕ್ರಿಕೆಟ್, ಥ್ರಿಲ್ಲರ್ ಶೋಗಳು, ಮತ್ತು ಎಕ್ಸ್ಕ್ಲೂಸಿವ್ ಸಿನಿಮಾಗಳು.
- ಡಿಸ್ಕವರಿ+: ಡಾಕ್ಯುಮೆಂಟರಿಗಳು ಮತ್ತು ವನ್ಯಜೀವಿ ವಿಶೇಷಗಳು.
- ಸನ್ NXT & ಲಯನ್ಗೇಟ್ ಪ್ಲೇ: ದಕ್ಷಿಣ ಭಾರತೀಯ ಸಿನಿಮಾ ಮತ್ತು ಶೋಗಳು.

ಇನ್ನೂ ರಿಲಿಯನ್ಸ್ ಜಿಯೋ ಹೊಸ ಪ್ಲಾನ್ ಗ್ರಾಹಕರಿ ಒಳ್ಳೆಯ ಸೌಲಭ್ಯಗಳನ್ನು ನೀಡುತ್ತಿದೆ ಎನ್ನಬಹುದಾಗಿದೆ. ಇತ್ತಿಚಿಗೆ ಖಾಸಗಿ ಟೆಲಿಕಾಂ ಕಂಪನಿಗಳು ತಮ್ಮ ಪ್ಲಾನ್ ಗಳ ಬೆಲೆ ಏರಿಕೆ ಮಾಡಿತ್ತು. ಇದೀಗ ಜಿಯೋ 445 ರೂಪಾಯಿ ಪ್ಲಾನ್ ಸಹ ಒಳ್ಳೆಯ ಆಫರ್ ಆಗಿದೆ ಎನ್ನಲಾಗಿದೆ. ಇತ್ತೀಚಿಗೆ ಟ್ರಾಯ್ ನಿರ್ದೇಶನದಂತೆ ವಾಯ್ಸ್ ಹಾಗೂ ಎಸ್.ಎಂ.ಎಸ್ ಪ್ಲಾನ್ ಕೂಡ ಘೋಷಣೆ ಮಾಡಿದೆ. ಈ ವಿಭಾಗದಲ್ಲಿ ಎರಡು ರಿಚಾರ್ಜ್ ಪ್ಲಾನ್ ಘೋಷಣೆ ಮಾಡಿದ್ದು, 448 ಹಾಗೂ 1748 ಪ್ಲಾನ್ ಗಳು ವಾಯ್ಸ್ ಓನ್ಲಿ ಹಾಗೂ ಎಸ್.ಎಂ.ಎಸ್ ಪ್ಲಾನ್ ಆಗಿದೆ. ಇನ್ನೂ 448 ಪ್ಲಾನ್ ರೂಪಾಯಿ ಪ್ಲಾನ್ 84 ದಿನಗಳ ವ್ಯಾಲಿಟಿಡಿ ಹಾಗೂ 1748 ರೂಪಾಯಿ ಪ್ಲಾನ್ 336 ದಿನ ವ್ಯಾಲಿಟಿಡಿಯನ್ನು ಹೊಂದಿದೆ.
Jio – ಸಾಮಾನ್ಯ ಪ್ರಶ್ನೆಗಳು (FAQ):
Q1. 5G ಡೇಟಾವನ್ನು 4G ಫೋನ್ಗಳಲ್ಲಿ ಬಳಸಬಹುದು?
- Ans : ಹೌದು, ಆದರೆ 4G ಸ್ಪೀಡ್ ನಲ್ಲಿ ಮಾತ್ರ ಲಭ್ಯ.
Q2. OTT ಸಬ್ಸ್ಕ್ರಿಪ್ಷನ್ ಗಳನ್ನು ಹೇಗೆ ಆಕ್ಟಿವೇಟ್ ಮಾಡುವುದು?
- Ans : JioCinema/MyJio ಆ್ಯಪ್ → “Rewards” ಸೆಕ್ಷನ್ → ಸಬ್ಸ್ಕ್ರಿಪ್ಷನ್ ಕೋಡ್ ರಿಡೀಮ್ ಮಾಡಿ.
Q3. ಈ ಪ್ಲಾನ್ ಪ್ರೀಪೇಯ್ಡ್ ಅಥವಾ ಪೋಸ್ಟ್ಪೇಯ್ಡ್?
- Ans : ಇದು ಪ್ರೀಪೇಯ್ಡ್ ರೀಚಾರ್ಜ್ ಪ್ಲಾನ್.