ನಾವೆಲ್ಲರೂ ಎಷ್ಟೇ ಮುಂದುವರಿದಿದ್ದೇವೆ ಎಂದು ಹೇಳಿಕೊಂಡರೂ, ಇಂದಿಗೂ ಸಮಾಜದಲ್ಲಿ ಅಮಾನವೀಯ ಘಟನೆಗಳು ನಡೆಯುತ್ತಲೇ ಇವೆ. ಸರ್ಕಾರಿ ಆಸ್ಪತ್ರೆಗಳ ಅವ್ಯವಸ್ಥೆಗೆ ಕನ್ನಡಿ ಹಿಡಿಯುವಂತಹ ಹೃದಯವಿದ್ರಾವಕ ಘಟನೆಯೊಂದು (Jharkhand Father Carries) ಜಾರ್ಖಂಡ್ ನಲ್ಲಿ ನಡೆದಿದೆ. ಆಂಬ್ಯುಲೆನ್ಸ್ ನೀಡಲು ಆಸ್ಪತ್ರೆ ನಿರಾಕರಿಸಿದ ಕಾರಣ, ಹತಾಶರಾದ ತಂದೆಯೊಬ್ಬರು ತನ್ನ ಕಂದಮ್ಮನ ಶವವನ್ನು ರಟ್ಟಿನ ಪೆಟ್ಟಿಗೆಯಲ್ಲಿ ಇಟ್ಟುಕೊಂಡು ಕಣ್ಣೀರು ಹಾಕುತ್ತಾ ಊರಿಗೆ ತೆರಳಿದ್ದಾರೆ.

Jharkhand Father Carries – ನಡೆದಿದ್ದೇನು?
ರಾಮಕೃಷ್ಣ ಹೇಂಬ್ರಾಮ್ ಎಂಬವರು ಮಾರ್ಚ್ 5 ರಂದು ತಮ್ಮ ಗರ್ಭಿಣಿ ಪತ್ನಿ ರೀತಾ ತಿರಿಯಾ ಅವರನ್ನು ಹೆರಿಗೆಗಾಗಿ ಚಕ್ರಧರಪುರದ ಉಪವಿಭಾಗದ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ದುರದೃಷ್ಟವಶಾತ್ ರೀತಾ ಅವರು ಮೃತ ಶಿಶುವಿಗೆ ಜನ್ಮ ನೀಡಿದ್ದರು. ಹುಟ್ಟುವ ಮೊದಲೇ ಮಣ್ಣಾದ ಕಂದನನ್ನು ನೋಡಿದ ಆ ತಂದೆಯ ನೋವು ಅಷ್ಟಿಷ್ಟಲ್ಲ.
ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯದ ಆರೋಪ
ಸುಮಾರು 12 ಕಿ.ಮೀ ದೂರದಲ್ಲಿರುವ ತಮ್ಮ ‘ಬಂಗಾರಸಾಯಿ’ ಗ್ರಾಮಕ್ಕೆ ಮಗುವಿನ ದೇಹವನ್ನು ಕೊಂಡೊಯ್ಯಲು ರಾಮಕೃಷ್ಣ ಅವರು ಆಸ್ಪತ್ರೆ ಸಿಬ್ಬಂದಿಯ ಬಳಿ ಆಂಬ್ಯುಲೆನ್ಸ್ಗಾಗಿ ಅಂಗಲಾಚಿದ್ದಾರೆ. ಆದರೆ, ಅಲ್ಲಿನ ಸಿಬ್ಬಂದಿ ಕನಿಷ್ಠ ಮಾನವೀಯತೆಯನ್ನೂ ತೋರದೆ, “ಶವವನ್ನು ಇಲ್ಲಿಂದ ತಕ್ಷಣ ಹೊರಗೊಯ್ಯಿರಿ” (Jharkhand Father Carries) ಎಂದು ಒತ್ತಡ ಹೇರಿದ್ದಾರೆ ಎಂದು ಹೇಂಬ್ರಾಮ್ ಆರೋಪಿಸಿದ್ದಾರೆ.
“ಸಹಾಯ ಮಾಡಲು ಯಾರೂ ಬರಲಿಲ್ಲ. ಕೊನೆಗೆ ಆಸ್ಪತ್ರೆ ಆವರಣದಲ್ಲಿ ಬಿದ್ದಿದ್ದ ಒಂದು ಹಳೆಯ ರಟ್ಟಿನ ಪೆಟ್ಟಿಗೆಯನ್ನು ಆಯ್ದುಕೊಂಡೆ. ಅದರಲ್ಲಿ ನನ್ನ ಮಗುವನ್ನು ಮಲಗಿಸಿ, ದಿನಸಿ ಚೀಲದಲ್ಲಿ ಪ್ಯಾಕ್ ಮಾಡಿ ರಿಕ್ಷಾ ಹಿಡಿದು ಮನೆಗೆ ಬಂದೆ” ಎಂದು ಅವರು ಹಂಚಿಕೊಂಡ ನೋವು ಯಾರಿಗಾದರೂ ಕಣ್ಣೀರು ತರಿಸುವಂತಿದೆ. Read this also : Ambulance : 2 ಗಂಟೆ ಕಾದರೂ ಬರಲಿಲ್ಲ ಆಂಬ್ಯುಲೆನ್ಸ್! ತಳ್ಳುವ ಗಾಡಿಯಲ್ಲಿ ಆಸ್ಪತ್ರೆಗೆ ಸಾಗಿದ ಅಸ್ವಸ್ಥ – ವಿಡಿಯೋ ವೈರಲ್
ಆಸ್ಪತ್ರೆ ಆಡಳಿತ ಮಂಡಳಿಯ ಸ್ಪಷ್ಟನೆ
ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಆಸ್ಪತ್ರೆಯ (Jharkhand Father Carries) ಇನ್ಚಾರ್ಜ್ ಡಾ. ಅಂಶುಮಾನ್ ಶರ್ಮಾ, “ರೋಗಿಯ ಕುಟುಂಬದವರು ಆಂಬ್ಯುಲೆನ್ಸ್ಗಾಗಿ ನಮ್ಮನ್ನು ಕೇಳಿಯೇ ಇರಲಿಲ್ಲ. ಒಂದು ವೇಳೆ ಕೇಳಿದ್ದರೆ ನಾವು ಖಂಡಿತ ವ್ಯವಸ್ಥೆ ಮಾಡುತ್ತಿದ್ದೆವು,” ಎಂದು ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ್ದಾರೆ.

ತನಿಖೆಗೆ ಆದೇಶಿಸಿದ ಸರ್ಕಾರ
ಜಾರ್ಖಂಡ್ನ ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಜಯ್ ಕುಮಾರ್ ಸಿಂಗ್ ಅವರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆಗೆ (Jharkhand Father Carries) ಆದೇಶ ನೀಡಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಇನ್ನೂ ಇದೇ ಜಿಲ್ಲೆಯಲ್ಲಿ ಕಳೆದ ಡಿಸೆಂಬರ್ ತಿಂಗಳಲ್ಲೂ ಇಂತಹದ್ದೇ ಒಂದು ಘಟನೆ ನಡೆದಿತ್ತು. ಅಂದು ತಂದೆಯೊಬ್ಬರು ತನ್ನ 4 ತಿಂಗಳ ಮಗುವಿನ ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ಕೊಂಡುಹೋಗಿದ್ದರು. ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ.
