Saturday, December 6, 2025
HomeNationalಇನ್ ​ಸ್ಟಾಗ್ರಾಂ ಲವ್ (Instagram Love), ಮದುವೆಗೆ ಬಿತ್ತು ಬ್ರೇಕ್! 350 ಕಿ.ಮೀ ಪ್ರಯಾಣಿಸಿ ಮಂಟಪಕ್ಕೆ...

ಇನ್ ​ಸ್ಟಾಗ್ರಾಂ ಲವ್ (Instagram Love), ಮದುವೆಗೆ ಬಿತ್ತು ಬ್ರೇಕ್! 350 ಕಿ.ಮೀ ಪ್ರಯಾಣಿಸಿ ಮಂಟಪಕ್ಕೆ ಬಂದ ವರನಿಗೆ ಕಾದಿತ್ತು ಬಿಗ್ ಶಾಕ್

ಸೋಷಿಯಲ್ ಮೀಡಿಯಾ ಜಮಾನದಲ್ಲಿ ಪ್ರೀತಿ ಹುಟ್ಟುವುದು ಎಷ್ಟು ವೇಗವೋ, ಅದು ಮುರಿದು ಬೀಳುವುದೂ ಅಷ್ಟೇ ವೇಗ ಎನ್ನುವುದಕ್ಕೆ ಇಲ್ಲೊಂದು ತಾಜಾ ಉದಾಹರಣೆ ಸಿಕ್ಕಿದೆ. ಇಲ್ಲೊಬ್ಬ ಯುವಕ ಇನ್‌ಸ್ಟಾಗ್ರಾಮ್ (Instagram Love) ಗೆಳತಿಯನ್ನು ನಂಬಿ ಮದುವೆಗೆಂದು 350 ಕಿಲೋಮೀಟರ್ ದೂರ ಪ್ರಯಾಣಿಸಿ ಬಂದಿದ್ದ. ಆದರೆ ಮಂಟಪದಲ್ಲಿ ಆತ ಅನುಭವಿಸಿದ ಅವಮಾನ ಮಾತ್ರ ಯಾರಿಗೂ ಬೇಡ!

instagram love wedding drama, heartbroken Indian groom sitting alone in mandap after bride goes missing, emotional wedding scene, viral news moment

Instagram Love – ಇನ್‌ಸ್ಟಾಗ್ರಾಮ್ ಪರಿಚಯ ಪ್ರಣಯವಾಯ್ತು!

ಉತ್ತರ ಪ್ರದೇಶದ ಸಹರಾನ್‌ಪುರದ ಬದ್ಗಾಂವ್ ಪ್ರದೇಶದ ಯುವಕನೊಬ್ಬನಿಗೆ ಬರೇಲಿಯ ಯುವತಿಯ ಪರಿಚಯ ಇನ್‌ಸ್ಟಾಗ್ರಾಮ್ ಮೂಲಕ ಆಗಿತ್ತು. ಚಾಟಿಂಗ್ ಮೂಲಕ ಶುರುವಾದ ಸ್ನೇಹ, ನೋಡನೋಡುತ್ತಿದ್ದಂತೆ ಗಾಢವಾದ ಪ್ರೀತಿಗೆ ತಿರುಗಿತ್ತು. ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದರು. ಡಿಸೆಂಬರ್ 2ರಂದು ಮದುವೆ ದಿನಾಂಕ ಕೂಡ ಫಿಕ್ಸ್ ಆಗಿತ್ತು.

Instagram Love – ಅದ್ದೂರಿಯಾಗಿ ನಡೆದಿತ್ತು ಅರಿಶಿನ ಶಾಸ್ತ್ರ

ಮದುವೆ ಫಿಕ್ಸ್ ಆಗಿದ್ದೇ ತಡ, ಯುವಕನ ಮನೆಯಲ್ಲಿ ಸಂಭ್ರಮ ಮುಗಿಲು ಮುಟ್ಟಿತ್ತು. ಸಂಬಂಧಿಕರೆಲ್ಲರೂ ಸೇರಿ ಯುವಕನಿಗೆ ಅರಿಶಿನ, ಎಣ್ಣೆ ಹಚ್ಚಿ ಶಾಸ್ತ್ರ ಮುಗಿಸಿದ್ದರು. ತಲೆಗೆ ಪೇಟ ಸುತ್ತಿ, ಕೈಯಲ್ಲಿ ಹಾರ ಹಿಡಿದು, ವಾದ್ಯಮೇಳದೊಂದಿಗೆ ಕುದುರೆ ಏರಿ ಆತ ಮದುವೆಗೆ ಹೊರಟಿದ್ದ. ಬರೋಬ್ಬರಿ 350 ಕಿ.ಮೀ ದೂರ ಪ್ರಯಾಣಿಸಿ ಮದುವೆ ಮಂಟಪವನ್ನೂ ತಲುಪಿದ್ದ. Read this also : ಮದುವೆಗೆ ಒಪ್ಪದ ಪ್ರಿಯತಮೆ: ‘ಶೋಲೆ’ ಸ್ಟೈಲ್‌ನಲ್ಲಿ ಹೈವೋಲ್ಟೇಜ್ ಟವರ್ ಏರಿದ ಪ್ರೇಮಿ! ಕ್ಲೈಮ್ಯಾಕ್ಸ್ ಏನಾಯ್ತು ಗೊತ್ತಾ?

ಫೋನ್ ಸ್ವಿಚ್ ಆಫ್ – ವರನಿಗೆ ಶಾಕ್!

ವರನ ಕಡೆಯವರು ಮಂಟಪಕ್ಕೆ ಬಂದಿಳಿದರು. ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಅಸಲಿ ನಾಟಕ ಶುರುವಾಯ್ತು. ವರ ಎಷ್ಟೇ ಕಾದು ಕುಳಿತರೂ ವಧು ಮಾತ್ರ ಮಂಟಪಕ್ಕೆ ಬರಲೇ ಇಲ್ಲ. ಗಾಬರಿಯಾದ ವರ ಆಕೆಗೆ ಫೋನ್ ಮಾಡಿದಾಗ, ಆಕೆ ಕರೆಯನ್ನು ಕಟ್ ಮಾಡಿದಳು. ಮತ್ತೆ ಮಾಡಿದಾಗ ಫೋನ್ ‘ಸ್ವಿಚ್ ಆಫ್’ ಆಗಿತ್ತು. (Instagram Love) ಗಂಟೆಗಟ್ಟಲೆ ಕಾದರೂ ವಧುವಿನ ಸುಳಿವೇ ಇರಲಿಲ್ಲ. ಕೊನೆಗೆ ವಿಧಿಯಿಲ್ಲದೆ ಆ ಯುವಕ, ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ತನ್ನ ದಿಬ್ಬಣದೊಂದಿಗೆ ವಾಪಸ್ ಊರಿಗೆ ಮರಳಬೇಕಾಯ್ತು.

instagram love wedding drama, heartbroken Indian groom sitting alone in mandap after bride goes missing, emotional wedding scene, viral news moment

ಕಾರಿನ ಆಸೆ ತೋರಿಸಿ ಯಾಮಾರಿಸಿದ್ಲಾ?

ಕೇವಲ 5 ದಿನಗಳ ಹಿಂದಷ್ಟೇ ವಧು, ವರನಿಗೆ ವರದಕ್ಷಿಣೆಯಾಗಿ ಕಾರು ಕೊಡಿಸುವುದಾಗಿ ಭರವಸೆ ನೀಡಿದ್ದಳಂತೆ. ಇದನ್ನು ನಂಬಿ ಆತ ಸ್ನೇಹಿತರೊಂದಿಗೆ ಶೋರೂಂಗೆ ಹೋಗಿ (Instagram Love) ತನಗೆ ಇಷ್ಟವಾದ ‘ಬ್ರೆಝಾ’ (Brezza) ಕಾರನ್ನು ಕೂಡ ಸೆಲೆಕ್ಟ್ ಮಾಡಿದ್ದನಂತೆ. ಆದರೆ ವಿಪರ್ಯಾಸವೆಂದರೆ, ಕಾರು ಸಿಗುವ ಆಸೆಯಲ್ಲಿದ್ದವನಿಗೆ ಕೊನೆಗೆ ಜೋಡಿಯಾಗಬೇಕಿದ್ದ ವಧು ಕೂಡ ಸಿಗಲಿಲ್ಲ!

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular