ಕರ್ನಾಟಕ ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಬಳಿಕ ಪೆಟ್ರೋಲ್, ಡೀಸೆಲ್ ಹಾಗೂ ಹಾಲಿನ ದರ ಏರಿಕೆಯಾಗಿದ್ದು, ಜನರು ಅಸಮಾಧಾನ ಹೊರಹಾಕುತ್ತಿದ್ದಾರೆ. ಈ ನಡುವೆ ಕೆಲ ನಂದಿನಿ ಉತ್ಪನ್ನಗಳನ್ನು ಮಾರಾಟ ಮಾಡುವಂತಹ ವ್ಯಾಪಾರಿಗಳು ಹಾಲಿನ ಎಂ.ಆರ್.ಪಿ ಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುವ ದೂರುಗಳು ಕೇಳಿಬರುತ್ತಿದ್ದು, ಒಂದು ವೇಳೆ ಹೆಚ್ಚಿನ ದರ ಪಡೆದು ಹಾಲು ಮಾರಾಟ ಮಾಡಿದ ಬಗ್ಗೆ ಗ್ರಾಹಕರು ದೂರು ನೀಡಿದರೇ ಲೈಸೆನ್ಸ್ ಕ್ಯಾನ್ಸಲ್ ಮಾಡುವ ಎಚ್ಚರಿಕೆಯನ್ನು ಕೆಎಂಎಫ್ ನೀಡಿದೆ.

ಕಳೆದೆರಡು ದಿನಗಳ ಹಿಂದೆ ಕೆಎಂಎಫ್ ನಂದಿನಿ ಹಾಲಿನ ಬೆಲೆ ಏರಿಕೆ ಮಾಡಿ ಆದೇಶ ಹೊರಡಿಸಿತ್ತು. ಮೊನ್ನೆಯವರೆಗೂ 500 ಎಂ.ಎಲ್. ಹಾಲಿಗೆ 22 ರೂಪಾಯಿ ದರವಿತ್ತು. ಇದೀಗ 550 ಎಂ.ಎಲ್ ಹಾಲಿನ ಪ್ಯಾಕೇಟ್ 24 ರೂಪಾಯಿಯಾಗಿದೆ. ಈ ರೀತಿಯಲ್ಲೇ ಪ್ರತಿಯೊಂದು ಪ್ಯಾಕೇಟ್ ಗೆ 50 ಎಂ.ಎಲ್. ಅಧಿಕ ಹಾಲು ನೀಡಿ 2 ರೂಪಾಯಿ ಹೆಚ್ಚಳ ಮಾಡಲಾಗಿದೆ. ಇನ್ನೂ ಈ ದರ ಏರಿಕೆಯ ವಿರುದ್ದ ವಿರೋಧ ಪಕ್ಷದ ನಾಯಕರು ಸೇರಿದಂತೆ ಸಾರ್ವಜನಿಕರೂ ಸಹ ಆಕ್ರೋಷ ಹೊರಹಾಕಿದ್ದರು. ರಾಜ್ಯ ಕಾಂಗ್ರೇಸ್ ಸರ್ಕಾರ ಜನ ಸಾಮಾನ್ಯರಿಗೆ ಹೊರೆ ಹಾಕುತ್ತಿದೆ. ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ದರ ಏರಿಕೆ ಮಾಡುತ್ತಿದೆ ಎಂದು ಆರೋಪಿಸಿದ್ದರು. ಈ ಕುರಿತು ಸಿಎಂ ಸಿದ್ದರಾಮಯ್ಯ ಸೇರಿದಂತೆ ಅನೇಕ ಕಾಂಗ್ರೇಸ್ ನಾಯಕರು ಬೇರೆ ರಾಜ್ಯಗಳಿಗೆ ಹೋಲಿಸಿದರೇ ಕರ್ನಾಟಕದಲ್ಲಿ ಬೆಲೆ ಕಡಿಮೆ, 50 ಎಂ.ಎಲ್. ಹೆಚ್ಚಿನ ಹಾಲಿಗೆ 2 ರೂಪಾಯಿ ದರ ಏರಿಕೆ ಮಾಡಲಾಗಿದೆ ಎಂದು ಸಮರ್ಥಿಸಿಕೊಂಡಿದ್ದರು.
ಇನ್ನೂ ಇದೀಗ ನಂದಿನ ಹಾಲನ್ನು ಎಂ.ಆರ್.ಪಿ ಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿದೆ. ನಂದಿನಿ ಹಾಲನ್ನು ಅಧಿಕೃತ ಮಳಿಗೆಗಳಲ್ಲಿ ಮಾತ್ರವಲ್ಲದೇ ಬೇರೆ ಅಂಗಡಿಗಳಲ್ಲೂ ಸಹ ಮಾರಾಟ ಮಾಡಲಾಗುತ್ತಿದೆ. ಬೆಳಗಿನ ಜಾವ ಬಿಟ್ಟು ಉಳಿದ ಸಮಯದಲ್ಲಿ ನಂದಿನಿ ಅಧಿಕೃತ ಮಾರಾಟಗಾರರು ಮಾತ್ರವಲ್ಲದೇ ಉಳಿದ ಅನೇಕ ಮಳಿಗೆಗಳಲ್ಲಿ ಎಂ.ಆರ್.ಪಿ ಗಿಂತ ಹೆಚ್ಚಿನ ಬೆಲೆ ಪಡೆಯುತ್ತಿದ್ದಾರೆ ಎಂಬ ದೂರುಗಳು ಕೇಳಿಬರುತ್ತಿವೆ. ಇದೀಗ ಅಂತಹ ಅಂಗಡಿ ಮಾಲೀಕರಿಗೆ ಕೆ.ಎಂ.ಎಫ್ (KMF) ವಾರ್ನಿಂಗ್ ನೀಡಲು ಮುಂದಾಗಿದೆ. ನಂದಿನಿ ಉತ್ಪನ್ನಗಳ ಎಂ.ಆರ್.ಪಿ ಬೆಲೆಗಿಂತ ಹೆಚ್ಚಿನ ಹಣ ಪಡೆದ ಬಗ್ಗೆ ಗ್ರಾಹಕರು ದೂರು ನೀಡಿದರೇ ಅಂತಹವರ ವಿರುದ್ದ ಕಾನೂನಿನ ಕ್ರಮ ತೆಗೆದುಕೊಂಡು, ಲೈಸೆನ್ಸ್ ರದ್ದು ಮಾಡುವ ಎಚ್ಚರಿಕೆಯನ್ನು ನೀಡಿದೆ ಎಂದು ತಿಳಿದುಬಂದಿದೆ.