ಪ್ರೀತಿ ಎನ್ನುವುದು ಮನುಷ್ಯನನ್ನು ಎಷ್ಟು ಕುರುಡು ಮಾಡುತ್ತದೆ ಎಂಬುದಕ್ಕೆ ಹೈದರಾಬಾದ್‌ನ (Hyderabad Crime) ಜವಾಹರ್‌ನಗರದಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ತನ್ನ ಪ್ರೇಮಕ್ಕೆ ಅಡ್ಡಿಯಾಗುತ್ತಿದ್ದಾಳೆಂಬ ಒಂದೇ ಕಾರಣಕ್ಕೆ ಮಗಳೊಬ್ಬಳು ತನ್ನ ಪ್ರಿಯಕರನ ಜೊತೆ ಸೇರಿ ಹೆತ್ತ ತಾಯಿಯನ್ನೇ ಕೊಂದು, ಆಕೆಯ ಶವವನ್ನು ಮನೆಯೊಳಗೇ ಹೂತು ಹಾಕಿರುವ ದಾರುಣ ಘಟನೆ ಈಗ ಬೆಳಕಿಗೆ ಬಂದಿದೆ. ಕಳೆದ ಒಂದು ವರ್ಷದಿಂದ ಯಾರಿಗೂ ಸಂಶಯ ಬಾರದಂತೆ ನಾಟಕವಾಡುತ್ತಿದ್ದ ಈ ಕಿರಾತಕಿ, ಕೊನೆಗೆ ಒಂದು ಹಳೆಯ ಸ್ಕೂಟರ್‌ನಿಂದಾಗಿ ಸಿಕ್ಕಿಬಿದ್ದಿದ್ದಾಳೆ.

Hyderabad Crime – ಪ್ರೀತಿಗಾಗಿ ನಡೆದ ಕ್ರೂರ ಸಂಚು
ಜವಾಹರ್‌ನಗರದ ಭರತ್ ನಗರದಲ್ಲಿ ವಾಸವಿದ್ದ 40 ವರ್ಷದ ಅಂಜು ಅವರಿಗೆ ಇಷಿಕಾ ಎಂಬ ಮಗಳಿದ್ದಳು. ಇಷಿಕಾ ಮತ್ತು ಮೌಂಟಿ ರಾಜ್‌ಪುತ್ ಎಂಬ ಯುವಕ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಈ ಸಂಬಂಧಕ್ಕೆ ತಾಯಿ ಅಂಜು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದೇ ವಿಷಯಕ್ಕೆ ತಾಯಿ ಮತ್ತು ಮಗಳ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಕೊನೆಗೆ ತನ್ನ ಪ್ರೇಮ ಸುಗಮವಾಗಿ ಸಾಗಬೇಕಾದರೆ ತಾಯಿ ಇರಬಾರದು ಎಂದು ನಿರ್ಧರಿಸಿದ ಇಷಿಕಾ, ಪ್ರಿಯಕರನ ಜೊತೆ ಸೇರಿ ಅಂಜು ಅವರ ಕೊಲೆಗೆ ಸಂಚು ರೂಪಿಸಿದಳು.
ಮನೆಯಲ್ಲೇ ಹೂತು ಹಾಕಿ ನಾಪತ್ತೆಯ ನಾಟಕ
ಕಳೆದ ವರ್ಷ (Hyderabad Crime) ಮೇ ತಿಂಗಳಲ್ಲಿ ಇಷಿಕಾ ಮತ್ತು ಮೌಂಟಿ ಸೇರಿ ಅಂಜು ಅವರನ್ನು ಮನೆಯಲ್ಲೇ ಹತ್ಯೆ ಮಾಡಿದ್ದರು. ಅಷ್ಟಕ್ಕೇ ನಿಲ್ಲದ ಇವರು, ಯಾರಿಗೂ ತಿಳಿಯದಂತೆ ಶವವನ್ನು ಮನೆಯ ಒಳಗೇ ಗುಂಡಿ ತೆಗೆದು ಹೂತು ಹಾಕಿದರು. ನಂತರ ಇಷಿಕಾ ಪೊಲೀಸ್ ಸ್ಟೇಷನ್‌ಗೆ ಹೋಗಿ, ತನ್ನ ತಾಯಿ ಮತ್ತು ಸ್ಕೂಟರ್ ಇಬ್ಬರೂ ಕಾಣೆಯಾಗಿದ್ದಾರೆ ಎಂದು ದೂರು ನೀಡಿದ್ದಳು. ಪೊಲೀಸರು ತನಿಖೆ ನಡೆಸಿದರೂ ಯಾವುದೇ ಸುಳಿವು ಸಿಗದೆ ಈ ಪ್ರಕರಣ ಒಂದು ವರ್ಷದಿಂದ ನನೆಗುದಿಗೆ ಬಿದ್ದಿತ್ತು. ಈ ಅವಧಿಯಲ್ಲಿ ಇಷಿಕಾ ಏನೂ ಅರಿಯದ ಮುಗ್ಧೆಯಂತೆ ಸಮಾಜದಲ್ಲಿ ಓಡಾಡಿಕೊಂಡಿದ್ದಳು. Read this also : ಫೇಸ್‌ಬುಕ್‌ನಲ್ಲಿ ‘ನೀಲಿ ಡ್ರಮ್’ ಪೋಸ್ಟ್: ಪ್ರಾಣ ಉಳಿಸಿಕೊಳ್ಳಲು ಹೆಂಡತಿಯನ್ನೇ ಪ್ರೇಮಿ ಜೊತೆ ಕಳಿಸಿದ ಗಂಡ!
ಸ್ಕೂಟರ್ ಮಾರಾಟ ಮಾಡಲು ಹೋಗಿ ಸಿಕ್ಕಿಬಿದ್ದ ಪ್ರಿಯಕರ
ಒಂದು ವರ್ಷದ ನಂತರ ಈ ರಹಸ್ಯ ಬಯಲಾಗಿದ್ದು ಆಕಸ್ಮಿಕವಾಗಿ. ಮೃತ ಅಂಜು ಅವರ ಸ್ಕೂಟರನ್ನು ಮಾರಾಟ ಮಾಡಲು ಮೌಂಟಿ ರಾಜ್‌ಪುತ್ ರಾಂಕೋಟಿಯ ಹಳೆಯ ವಾಹನಗಳ (Hyderabad Crime) ಮಾರುಕಟ್ಟೆಗೆ ಹೋಗಿದ್ದನು. ಅಲ್ಲಿ ವಾಹನದ ದಾಖಲೆಗಳ ಬಗ್ಗೆ ಕೇಳಿದಾಗ ಆತ ಗಲಿಬಿಲಿಗೊಂಡು ತಪ್ಪು ತಪ್ಪು ಮಾಹಿತಿ ನೀಡಿದನು. ಇದರಿಂದ ಅನುಮಾನಗೊಂಡ ಅಂಗಡಿ ಮಾಲೀಕ ತಕ್ಷಣ ಪೊಲೀಸರಿಗೆ ಫೋನ್ ಮಾಡಿದ್ದಾನೆ. ಪೊಲೀಸರು ಸ್ಥಳಕ್ಕೆ ಬಂದು ಮೌಂಟಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇಡೀ ಕೊಲೆ ರಹಸ್ಯದ ಎಳೆಎಳೆಯೂ ಬಿಚ್ಚಿಕೊಂಡಿದೆ.

ತನಿಖೆ ಮತ್ತು ಆರೋಪಿಗಳ ಬಂಧನ
ಪ್ರಿಯಕರ ನೀಡಿದ ಮಾಹಿತಿಯ ಆಧಾರದ ಮೇಲೆ (Hyderabad Crime) ಪೊಲೀಸರು ಇಷಿಕಾಳನ್ನು ಬಂಧಿಸಿದ್ದಾರೆ. ಕ್ಲೂಸ್ ಟೀಮ್ ಮತ್ತು ಅಧಿಕಾರಿಗಳ ಸಮ್ಮುಖದಲ್ಲಿ ಮನೆಯನ್ನು ತಪಾಸಣೆ ನಡೆಸಿದಾಗ ಶವವನ್ನು ಹೂತು ಹಾಕಿದ ಜಾಗ ಪತ್ತೆಯಾಗಿದೆ. ಅಲ್ಲಿ ಉತ್ಖನನ ನಡೆಸಿದಾಗ ಅಂಜು ಅವರ ಅವಶೇಷಗಳು ಪತ್ತೆಯಾಗಿವೆ. ಸದ್ಯಕ್ಕೆ ಇಷಿಕಾ ಮತ್ತು ಮೌಂಟಿ ಇಬ್ಬರೂ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಈ ಘಟನೆ ಹೈದರಾಬಾದ್ ಜನತೆಯನ್ನು ಬೆಚ್ಚಿಬೀಳಿಸಿದ್ದು, ಅಪ್ಪಿತಪ್ಪಿಯೂ ಇಂತಹ ಘಟನೆಗಳು ನಡೆಯಬಾರದು ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
