ಇಂದಿನ ಕಾಲದಲ್ಲಿ ಮದುವೆ ಎಂದರೆ ಕೇವಲ ಲಕ್ಷಾಂತರ ರೂಪಾಯಿಗಳ ಖರ್ಚು, ರಾಜಕಾರಣಿಗಳು, ಉದ್ಯಮಿಗಳಂತಹ ವಿಐಪಿ ಅತಿಥಿಗಳ ಪಟ್ಟಿ ಮತ್ತು ಆಡಂಬರದ ಪ್ರದರ್ಶನ ಎಂದೇ ಬಿಂಬಿತವಾಗಿದೆ. ಆದರೆ ಉತ್ತರ ಪ್ರದೇಶದ ಘಾಜಿಪುರದಲ್ಲಿ ನಡೆದ ಒಂದು ವಿವಾಹ ಈಗ ಇಡೀ ದೇಶದ ಜನರ ಗಮನ ಸೆಳೆಯುತ್ತಿದೆ. ಇದಕ್ಕೆ ಕಾರಣ ಅಲ್ಲಿನ ಸಡಗರವಲ್ಲ, ಬದಲಿಗೆ ಆ (Humanity) ಕುಟುಂಬ ಮೆರೆದ ಅಪ್ರತಿಮ ಮಾನವೀಯತೆ.

Humanity – ಯಾರು ಈ ಸಿದ್ದಾರ್ಥ್ ರೈ? ಏನು ಮಾಡಿದ್ರು?
ಘಾಜಿಪುರದ ನಿವಾಸಿ ಸಿದ್ದಾರ್ಥ್ ರೈ ಅವರು ತಮ್ಮ ತಂಗಿಯ ಮದುವೆಯನ್ನು ಕೇವಲ ಒಂದು ಸಂಪ್ರದಾಯವನ್ನಾಗಿ ಮಾಡದೆ, ಸಮಾಜಕ್ಕೆ ದೊಡ್ಡ ಸಂದೇಶ ನೀಡಲು ನಿರ್ಧರಿಸಿದ್ದರು. ಸಾಮಾನ್ಯವಾಗಿ ಇಂತಹ ಶುಭಕಾರ್ಯಗಳಿಗೆ ದೊಡ್ಡ ದೊಡ್ಡ ಗಣ್ಯರನ್ನು ಆಹ್ವಾನಿಸುವುದು ವಾಡಿಕೆ. ಆದರೆ ಸಿದ್ದಾರ್ಥ್ ಮಾತ್ರ ನಗರದ ಬೀದಿ ಬದಿಯ ನಿರಾಶ್ರಿತರನ್ನು ಮತ್ತು ಭಿಕ್ಷುಕರನ್ನು ತನ್ನ ತಂಗಿಯ ಮದುವೆಗೆ ‘ಮುಖ್ಯ ಅತಿಥಿಗಳಾಗಿ’ ಆಹ್ವಾನಿಸುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ.
Humanity – ವಿಶೇಷ ವಾಹನ, ರಾಜಾತಿಥ್ಯ!
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಈ ದೃಶ್ಯಗಳು ಮನಕಲಕುವಂತಿವೆ. ನಿರಾಶ್ರಿತರನ್ನು ಗೌರವಪೂರ್ವಕವಾಗಿ ವಿಶೇಷ ವಾಹನಗಳಲ್ಲಿ ಮದುವೆ ಮಂಟಪಕ್ಕೆ ಕರೆತರಲಾಯಿತು. ಶ್ರೀಮಂತ ಅತಿಥಿಗಳಿಗೆ ಮತ್ತು ಬಂಧು-ಮಿತ್ರರಿಗೆ ಸಿದ್ಧಪಡಿಸಲಾಗಿದ್ದ ಅದೇ ಭರ್ಜರಿ ಭೋಜನವನ್ನು ಈ ವಿಶೇಷ ಅತಿಥಿಗಳಿಗೂ ಅಷ್ಟೇ ಪ್ರೀತಿಯಿಂದ ಬಡಿಸಲಾಯಿತು. ಕೇವಲ ಊಟ ನೀಡಿ ಕೈತೊಳೆದುಕೊಳ್ಳದ ಸಿದ್ದಾರ್ಥ್ ಮತ್ತು ಅವರ ಕುಟುಂಬದವರು, ಈ ಅತಿಥಿಗಳೊಂದಿಗೆ ಸೇರಿ ಹಾಡು-ಕುಣಿತದಲ್ಲಿ ಪಾಲ್ಗೊಂಡು ಸಂಭ್ರಮಿಸಿದ್ದು ವಿಶೇಷವಾಗಿತ್ತು. Read this also : ಬಾಬಾ ವಂಗಾ (Baba Vanga) 2026ರ ಭವಿಷ್ಯವಾಣಿ: 2026ರಲ್ಲಿ ಜಗತ್ತು ತಲೆಕೆಳಗಾಗುತ್ತಾ? ಮೈ ಜುಂ ಎನಿಸುವ ಆ 7 ಭವಿಷ್ಯಗಳಿವು!
“ಯಾರೂ ಇಲ್ಲದವರ ಆಶೀರ್ವಾದ ಎಲ್ಲಕ್ಕಿಂತ ದೊಡ್ಡದು. ಆ ಆಶೀರ್ವಾದ ನಮ್ಮ ತಂಗಿಯ ಜೀವನದಲ್ಲಿ ಇರಲಿ ಎಂಬುದು ನಮ್ಮ ಆಸೆ,” ಎನ್ನುತ್ತಾರೆ ಸಿದ್ದಾರ್ಥ್ ರೈ.
Humanity – ಕಣ್ಣೀರು ಹಾಕಿದ ವೃದ್ಧ ಅತಿಥಿ
ಮದುವೆಗೆ ಬಂದಿದ್ದ ವೃದ್ಧರೊಬ್ಬರು ಭಾವುಕರಾಗಿ ಮಾತನಾಡುತ್ತಾ, “ನನ್ನ ಇಡೀ ಜೀವನದಲ್ಲಿ ಮೊದಲ ಬಾರಿಗೆ ಒಂದು ಮದುವೆಯಲ್ಲಿ ಇಷ್ಟೊಂದು ಗೌರವ ಸಿಕ್ಕಿದೆ. ಇದು ಕೇವಲ ಹೊಟ್ಟೆ ತುಂಬಿಸುವ ಊಟವಲ್ಲ, ನಮಗೆ ಕಳೆದುಹೋಗಿದ್ದ ಆತ್ಮಗೌರವವನ್ನು ಮರಳಿ ನೀಡಿದ ಕ್ಷಣ,” ಎಂದು ಕಣ್ಣೀರಿಟ್ಟಿದ್ದಾರೆ. ಹೋಗುವಾಗಲೂ ಈ ಅತಿಥಿಗಳನ್ನು ಬರಿಗೈಲಿ ಕಳುಹಿಸದ ಸಿದ್ದಾರ್ಥ್ ರೈ, ಎಲ್ಲರಿಗೂ ಉಪಯುಕ್ತ ಉಡುಗೊರೆಗಳನ್ನು ನೀಡಿ ಗೌರವದಿಂದ ಬೀಳ್ಕೊಟ್ಟಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
Humanity – ನೆಟ್ಟಿಗರ ಮೆಚ್ಚುಗೆಯ ಮಹಾಪೂರ
ಈ ವಿಡಿಯೋ ವೈರಲ್ ಆದಾಗಿನಿಂದ ಸಿದ್ದಾರ್ಥ್ ಅವರ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ. “ನಿಜವಾದ ಮಾನವೀಯತೆ ಎಂದರೆ ಇದೇ,” ಎಂದು ಒಬ್ಬರು ಕಮೆಂಟ್ ಮಾಡಿದರೆ, ಮತ್ತೊಬ್ಬರು “ಸಂತೋಷವನ್ನು ಹಂಚಿಕೊಂಡಾಗ ಅದು ನಿಜವಾಗಿಯೂ ಹೆಚ್ಚಾಗುತ್ತದೆ ಎಂಬುದನ್ನು ನೀವು ಸಾಬೀತುಪಡಿಸಿದ್ದೀರಿ,” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
