ತಮ್ಮ ವಾಹನಗಳಿಗೆ ಇನ್ನೂ HSRP Number Plate ಅಳವಡಿಸದಂತಹ ವಾಹನ ಸವಾರರಿಗೆ ಕರ್ನಾಟಕ ಹೈಕೋರ್ಟ್ ರಿಲೀಫ್ ನೀಡಿದೆ. HSRP Number Plate ಅಳವಡಿಸಲು ಮತ್ತೆ ಗಡುವು ವಿಸ್ತರಿಸಿದೆ. ಹೆಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ಅಳವಡಿಸಲು ಗಡುವು ವಿಸ್ತರಣೆ ಮಾಡುವಂತೆ ಅರ್ಜಿ ಸಲ್ಲಿಕೆಯಾಗಿತ್ತು. ಅರ್ಜಿಯ ವಿಚಾರಣೆಯನ್ನು ನಡೆಸಿದ ನ್ಯಾಯಾಲಯ ವಿಚಾರಣೆಯನ್ನು ಮುಂದೂಡಿದೆ, ಜೊತೆಗೆ ಗಡುವು ಸಹ ವಿಸ್ತರಣೆ ಮಾಡಿದೆ.
ಕರ್ನಾಟಕದಲ್ಲಿ HSRP Number Plate ಅಳವಡಿಸಿದ ವಾಹನ ಸವಾರರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಹೆಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಅವಧಿ ವಿಸ್ತರಣೆ ಮಾಡುವಂತೆ ಮನವಿ ಮಾಡಲಾಗಿತ್ತು. ಈ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಕೆ.ಕಾಮೇಶ್ವರರಾವ್ ಮತ್ತು ಕೆ.ರಾಜೇಶ್ ರೈ ರವರ ನೇತೃತ್ವದ ವಿಭಾಗೀಯ ಪೀಠ ಅರ್ಜಿಯ ವಿಚಾರಣೆ ನಡೆಸಿದೆ. ಈ ಅರ್ಜಿಯ ವಿಚಾರಣೆಯನ್ನು ನ.20ಕ್ಕೆ ಮುಂದಿನ ಮುಂದೂಡಿಕೆ ಮಾಡಿದೆ ಅದರ ಜೊತೆಗೆ ನಂಬರ್ ಪ್ಲೇಟ್ ಅಳವಡಿಕೆಯೂ ಸಹ ಮುಂದೂಡಲಾಗಿದೆ. ಈ ಹಿಂದೆ ಕರ್ನಾಟಕ ಸಾರಿಗೆ ಇಲಾಖೆ ಹೊರಡಿಸಿದ್ದ ಸುತ್ತೋಲೆ ಪ್ರಕಾರ ಸೆ.15 ರೊಳಗೆ HSRP Number Plate ಅಳವಡಿಸಬೇಕಿತ್ತು.
ಇನ್ನೂ ಈಗಾಗಲೇ HSRP Number Plate ಅಳವಡಿಕೆಗೆ ಮೂರು ಬಾರಿ ಅವಕಾಶ ನೀಡಲಾಗಿತ್ತು. 2019 ಏಪ್ರಿಲ್ 1 ರ ಮೊದಲು ರಿಜಿಸ್ಟರ್ ಮಾಡಿಸಿದ ವಾಹನಗಳಿಗೆ ಹೆಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ಅಳವಡಿಸುವುದನ್ನು ಕಡ್ಡಾಯಗೊಳಿಸಿ ಆಗಸ್ಟ್ 2023 ರಲ್ಲಿ ಸಾರಿಗೆ ಇಲಾಖೆ ಘೋಷಣೆ ಮಾಡಿತ್ತು. ಈ ಅಧಿಸೂಚನೆ ಘೋಷಣೆಯಾದ ಮೊದಲಿಗೆ ನವೆಂಬರ್ 17, 2023 ರವರೆಗೆ ಗಡುವು ನೀಡಿತ್ತು ಬಳಿಕ ಮೂರು ಬಾರಿ ಈ ಅವಧಿಯನ್ನು ವಿಸ್ತರಣೆ ಮಾಡುತ್ತಾ ಬಂದಿದೆ. ಇದೀಗ ಹೈಕೋರ್ಟ್ ಆದೇಶದಂತೆ 4ನೇ ಬಾರಿ ಗಡುವು ವಿಸ್ತರಣೆ ಮಾಡಿದೆ. ಇನ್ನೂ ಮೂಲಗಳ ಪ್ರಕಾರ ಸೆ.15ರ ಗಡುವಿನ ವರೆಗೆ ರಾಜ್ಯದಲ್ಲಿ ಎರಡು ಕೋಟಿ ಹಳೆಯ ವಾಹನಗಳ ಪೈಕಿ ಶೆ.26 ರಷ್ಟು ಅಂದರೇ ಸುಮಾರು 52 ಲಕ್ಷ ವಾಹನಗಳಿಗಷ್ಟೆ ಹೆಚ್.ಎಸ್.ಆರ್.ಪಿ ಅಳವಡಿಸಲಾಗಿದೆ.