HomeTechnologyLoan Without CIBIL : ಸಿಬಿಲ್ ಸ್ಕೋರ್ ಕಡಿಮೆ ಇದೆಯೇ? ಚಿಂತಿಸಬೇಡಿ, ಸಾಲ ಪಡೆಯಲು ಇಲ್ಲಿವೆ...

Loan Without CIBIL : ಸಿಬಿಲ್ ಸ್ಕೋರ್ ಕಡಿಮೆ ಇದೆಯೇ? ಚಿಂತಿಸಬೇಡಿ, ಸಾಲ ಪಡೆಯಲು ಇಲ್ಲಿವೆ 5 ಸ್ಮಾರ್ಟ್ ಮಾರ್ಗಗಳು!

ಸಾಮಾನ್ಯವಾಗಿ ಬ್ಯಾಂಕ್‌ಗೆ ಹೋಗಿ ಸಾಲ (Loan) ಕೇಳಿದ್ರೆ ಸಾಕು, ಮ್ಯಾನೇಜರ್ ಮೊದಲು ಕೇಳುವ ಪ್ರಶ್ನೆಯೇ “ನಿಮ್ಮ ಸಿಬಿಲ್ ಸ್ಕೋರ್ (CIBIL Score) ಎಷ್ಟಿದೆ?” ಅಂತ. ಈ ಸ್ಕೋರ್ ಚೆನ್ನಾಗಿದ್ದರೆ ಸಾಲದ ಪ್ರಕ್ರಿಯೆ ಈಜಿ. ಆದರೆ ಎಲ್ಲರಿಗೂ (Loan Without CIBIL) ಒಳ್ಳೆ ಸ್ಕೋರ್ ಇರಲು ಸಾಧ್ಯವಿಲ್ಲ ಅಲ್ವಾ? ಕೆಲವೊಮ್ಮೆ ಕ್ರೆಡಿಟ್ ಹಿಸ್ಟರಿ ಇಲ್ಲದ ಕಾರಣ ಅಥವಾ ಸಣ್ಣಪುಟ್ಟ ತಾಂತ್ರಿಕ ಕಾರಣಗಳಿಂದ ಸ್ಕೋರ್ ಕಡಿಮೆ ಇರಬಹುದು.

Person getting loan without CIBIL using gold loan, property loan and insurance policy

ಹಾಗಂತ ನಿಮಗೆ ಹಣದ ತುರ್ತು ಅವಶ್ಯಕತೆ ಇದ್ದಾಗ ಸಾಲ ಸಿಗೋದೇ ಇಲ್ವಾ? ಖಂಡಿತ ಸಿಗುತ್ತೆ! ಸಿಬಿಲ್ ಚೆಕ್ ಮಾಡದೆಯೇ ತಕ್ಷಣ ಸಾಲ ಪಡೆಯಲು ಇರುವ ಕೆಲವು ಮಾರ್ಗಗಳು ಇಲ್ಲಿವೆ ನೋಡಿ.

Loan Without CIBIL – ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

  1. ಗೋಲ್ಡ್ ಲೋನ್: ಚಿನ್ನವಿದ್ದರೆ ಚಿಂತೆ ಇಲ್ಲ!

ಭಾರತದಲ್ಲಿ ಅತಿ ವೇಗವಾಗಿ ಸಿಗುವ ಸಾಲ ಎಂದರೆ ಅದು ಬಂಗಾರದ ಸಾಲ (Gold Loan). ನಿಮ್ಮ ಹತ್ತಿರ ಇರುವ ಚಿನ್ನದ ಒಡವೆಗಳನ್ನು ಬ್ಯಾಂಕ್ ಅಥವಾ ಎನ್‌ಬಿಎಫ್‌ಸಿಗಳಲ್ಲಿ (NBFC) ಅಡವಿಟ್ಟು ಹಣ ಪಡೆಯಬಹುದು. ಇಲ್ಲಿ ನಿಮ್ಮ ಸಿಬಿಲ್ ಸ್ಕೋರ್ ಯಾರು ಕೇಳಲ್ಲ.

  • ಬಡ್ಡಿ ದರ: ಸಾಮಾನ್ಯವಾಗಿ ಶೇ. 8.50 ರಿಂದ ಪ್ರಾರಂಭವಾಗುತ್ತದೆ.
  • ಅನುಕೂಲ: ದಾಖಲೆಗಳ ಕಿರಿಕಿರಿ ಕಡಿಮೆ, ನಿಮಿಷಗಳಲ್ಲಿ ಹಣ ನಿಮ್ಮ ಕೈ ಸೇರುತ್ತದೆ.
  1. ಶೂರಿಟಿ ಅಥವಾ ಗ್ಯಾರಂಟರ್ ಸಹಾಯ

ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೆ, ಉತ್ತಮ ಸ್ಕೋರ್ ಹೊಂದಿರುವ ನಿಮ್ಮ ಕುಟುಂಬದ ಸದಸ್ಯರನ್ನು ಅಥವಾ ಆತ್ಮೀಯ ಸ್ನೇಹಿತರನ್ನು ಗ್ಯಾರಂಟರ್ ಆಗಿ ತೋರಿಸಬಹುದು. ಅವರ ಕ್ರೆಡಿಟ್ ಹಿಸ್ಟರಿ ಆಧಾರದ (Loan Without CIBIL) ಮೇಲೆ ಬ್ಯಾಂಕುಗಳು ನಿಮಗೆ ವೈಯಕ್ತಿಕ ಅಥವಾ ಶಿಕ್ಷಣ ಸಾಲವನ್ನು ನೀಡುತ್ತವೆ.

ಗಮನಿಸಿ: ಒಂದು ವೇಳೆ ನೀವು ಸಾಲ ಮರುಪಾವತಿ ಮಾಡದಿದ್ದರೆ, ಅದರ ನೇರ ಪರಿಣಾಮ ನಿಮ್ಮ ಶೂರಿಟಿ ನಿಂತವರ ಸಿಬಿಲ್ ಸ್ಕೋರ್ ಮೇಲೂ ಆಗುತ್ತದೆ. ಹಾಗಾಗಿ ಹುಷಾರಾಗಿರಿ!

  1. ವಿಮಾ ಪಾಲಿಸಿ (Insurance Policy) ಮೇಲೆ ಸಾಲ

ನೀವು ಎಲ್‌ಐಸಿ (LIC) ಅಥವಾ ಇತರ ಜೀವ ವಿಮಾ ಪಾಲಿಸಿಗಳನ್ನು ಹೊಂದಿದ್ದು, ಕನಿಷ್ಠ ಮೂರು ವರ್ಷಗಳಿಂದ ಪ್ರೀಮಿಯಂ ಪಾವತಿಸುತ್ತಿದ್ದರೆ ಆ ಪಾಲಿಸಿ ಪತ್ರವನ್ನು ಅಡಮಾನವಿಟ್ಟು ಸಾಲ ಪಡೆಯಬಹುದು.

  • ಬಡ್ಡಿ ದರ: ವಾರ್ಷಿಕ ಸುಮಾರು ಶೇ. 9-10 ಇರುತ್ತದೆ.
  • ಪ್ರಯೋಜನ: ಇಲ್ಲಿ ಪಾಲಿಸಿಯ ‘ಸರೆಂಡರ್ ವ್ಯಾಲ್ಯೂ’ (Surrender Value) ಮುಖ್ಯವಾಗುತ್ತದೆಯೇ ಹೊರತು (Loan Without CIBIL) ಸಿಬಿಲ್ ಸ್ಕೋರ್ ಅಲ್ಲ.
  1. ಆಸ್ತಿ ಮೇಲಿನ ಸಾಲ (Loan Against Property)

ನಿಮ್ಮ ಹೆಸರಿನಲ್ಲಿ ಮನೆ, ಸೈಟ್ ಅಥವಾ ವಾಣಿಜ್ಯ ಮಳಿಗೆಗಳಿದ್ದರೆ ಅದನ್ನು ಗಿರವಿ ಇಟ್ಟು ದೊಡ್ಡ ಮೊತ್ತದ ಸಾಲ ಪಡೆಯಬಹುದು. ಇದನ್ನು ಲೋನ್ ಅಗೇನ್ಸ್ಟ್ ಪ್ರಾಪರ್ಟಿ ಎಂದು ಕರೆಯಲಾಗುತ್ತದೆ. ಸ್ವಯಂ ಉದ್ಯೋಗ ಮಾಡುವವರಿಗೆ ಮತ್ತು ಹೆಚ್ಚಿನ ಹಣದ ಅವಶ್ಯಕತೆ ಇರುವವರಿಗೆ ಇದು ಬೆಸ್ಟ್ ಆಯ್ಕೆ. ಬಡ್ಡಿ ದರ ಕೂಡ ಪರ್ಸನಲ್ ಲೋನ್‌ಗಿಂತ ಕಡಿಮೆಯೇ ಇರುತ್ತದೆ.

Person getting loan without CIBIL using gold loan, property loan and insurance policy

  1. ಉಳಿತಾಯ ಖಾತೆಯ ಓವರ್‌ಡ್ರಾಫ್ಟ್ (Overdraft Facility)

ನೀವು ಯಾವುದಾದರೂ ಒಂದು ಬ್ಯಾಂಕ್‌ನಲ್ಲಿ ಬಹಳ ವರ್ಷಗಳಿಂದ ವ್ಯವಹಾರ ಮಾಡುತ್ತಿದ್ದು, ಬ್ಯಾಂಕ್‌ನೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರೆ ಅವರು ನಿಮಗೆ ಓವರ್ಡ್ರಾಫ್ಟ್ ಸೌಲಭ್ಯ ನೀಡುತ್ತಾರೆ. ಅಂದರೆ ನಿಮ್ಮ (Loan Without CIBIL) ಖಾತೆಯಲ್ಲಿ ಬ್ಯಾಲೆನ್ಸ್ ಇಲ್ಲದಿದ್ದರೂ ಸಹ ಒಂದು ನಿಗದಿತ ಮಿತಿಯವರೆಗೆ ಹಣವನ್ನು ಡ್ರಾ ಮಾಡಬಹುದು. Read this also : ‘ಪ್ರಿ-ಅಪ್ರೂವ್ಡ್’ ಪರ್ಸನಲ್ ಲೋನ್ ಆಫರ್ (Personal Loan Alert) ಬಂದಿದೆಯೇ? ಸಾಲ ಪಡೆಯುವ ಮುನ್ನ ಈ 4 ವಿಷಯಗಳನ್ನು ಮರೆಯಬೇಡಿ!

  1. ಬಾಡಿಗೆ ಡಿಪಾಸಿಟ್ ಸಾಲ (Rental Deposit Loans)

ಬೆಂಗಳೂರಿನಂತಹ ಮೆಟ್ರೋ ನಗರಗಳಲ್ಲಿ ಬಾಡಿಗೆಗೆ ಮನೆ ಪಡೆಯುವುದು ದೊಡ್ಡ ಸಾಹಸ. 6 ರಿಂದ 10 ತಿಂಗಳ ಡಿಪಾಸಿಟ್ ಒಮ್ಮೆಗೆ ಕಟ್ಟುವುದು ಕಷ್ಟವಾಗಬಹುದು. ಇದಕ್ಕಾಗಿ ಈಗ ‘Magicbricks’ ನಂತಹ ಪ್ಲಾಟ್‌ಫಾರ್ಮ್‌ಗಳು ವಿಶೇಷ ಸಾಲ ನೀಡುತ್ತಿವೆ. ಇಲ್ಲಿ ನಿಮ್ಮ ಸಿಬಿಲ್ ಸ್ಕೋರ್‌ಗಿಂತ ನಿಮ್ಮ ಮಾಸಿಕ (Loan Without CIBIL) ಆದಾಯವನ್ನು ಪ್ರಮುಖವಾಗಿ ಪರಿಗಣಿಸಲಾಗುತ್ತದೆ.

ಸಿಬಿಲ್ ಸ್ಕೋರ್ ಕಡಿಮೆ ಇದೆ ಎಂದು ಸಾಲ ಸಿಗುವುದಿಲ್ಲ ಎಂದು ಕೊರಗಬೇಕಿಲ್ಲ. ಮೇಲೆ ಹೇಳಿದ ಯಾವುದಾದರೂ ಒಂದು ಸೆಕ್ಯೂರಿಟಿ (Collateral) ನೀಡುವ ಮೂಲಕ ನಿಮ್ಮ ಹಣಕಾಸಿನ ತುರ್ತು ಪರಿಸ್ಥಿತಿಯನ್ನು ನಿಭಾಯಿಸಬಹುದು. ಆದರೆ ನೆನಪಿರಲಿ, ಇಂತಹ ಸಾಲಗಳನ್ನು ಪಡೆದ ನಂತರ ಸರಿಯಾದ ಸಮಯಕ್ಕೆ ಇಎಂಐ (EMI) ಪಾವತಿಸಿದರೆ, ನಿಮ್ಮ ಸಿಬಿಲ್ ಸ್ಕೋರ್ ಭವಿಷ್ಯದಲ್ಲಿ ತಾನಾಗಿಯೇ ಸುಧಾರಿಸುತ್ತದೆ!

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular