ಗುಡಿಬಂಡೆ: ತಾಲೂಕಿನ ಮಾಚಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಶಾಲಾ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳ ಮನೆಗಳಿಗೆ ತೆರಳಿ ಅವರು ಮುಂದಿನ ಶಿಕ್ಷಣಕ್ಕೆ ಮಾರ್ಗದರ್ಶನ ನೀಡುವ ಮೂಲಕ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂಧಿಸಲಾಯಿತು.
ವಿದ್ಯಾರ್ಥಿನಿ ದೀಪ: ಗುಡಿಬಂಡೆ ತಾಲ್ಲೂಕು ಲಕ್ಕೇನಹಳ್ಳಿ ಗ್ರಾಮದ ವಾಸಿಯಾದ ಶ್ರೀರಾಮಕೃಷ್ಣಪ್ಪ L A (ಆಟೋ ಚಾಲಕ) ಮತ್ತು ಶ್ರೀಮತಿ ವೆಂಕಟ ಲಕ್ಷ್ಮಮ್ಮ ದಂಪತಿಗಳ ಮಗಳಾದ ದೀಪ 593 ಅಂಕಗಳನ್ನು ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಪ್ರಥಮ ಭಾಷೆ ಕನ್ನಡ 124, ದ್ವಿತೀಯ ಭಾಷೆ ಇಂಗ್ಲಿಷ್ 93, ದ್ವಿತೀಯ ಭಾಷೆ ಹಿಂದಿ 98, ಗಣಿತ 92, ವಿಜ್ಞಾನ 92, ಸಮಾಜವಿಜ್ಞಾನ 94, ಒಟ್ಟು 593(94.88%) ಅಂಕಗಳನ್ನು ಪಡೆಯುವ ಮೂಲಕ ಗುಡಿಬಂಡೆ ತಾಲೂಕಿಗೆ ಎಸ್ ಎಸ್ಎಲ್ ಸಿ ಫಲಿತಾಂಶದಲ್ಲಿ ಟಾಪರ್ ಆಗಿ ಹೊರಹೊಮ್ಮಿರುತ್ತಾಳೆ.
ವಿದ್ಯಾರ್ಥಿ ಪಿ.ಸಿ. ಮೋಹನ್ : ಗುಡಿಬಂಡೆ ತಾಲ್ಲೂಕು ಪಶುಪಲೋಡು ಗ್ರಾಮದ ವಾಸಿಯಾದ ಚಂದ್ರಪ್ಪ ಮತ್ತು ರತ್ನಮ್ಮ ಎಂಬ ರೈತ ದಂಪತಿಗಳ ಮಗನಾದ ಪಿ ಸಿ ಮೋಹನ್ ಪ್ರಥಮ ಭಾಷೆ ಕನ್ನಡ 104, ದ್ವಿತೀಯ ಭಾಷೆ ಇಂಗ್ಲಿಷ್ 82, ದ್ವಿತೀಯ ಭಾಷೆ ಹಿಂದಿ 90, ಗಣಿತ 70, ವಿಜ್ಞಾನ 74, ಸಮಾಜ ವಿಜ್ಞಾನ 94, ಒಟ್ಟು 514 (82.24%) ಅಂಕಗಳನ್ನು ಪಡೆಯುವ ಮೂಲಕ ಶಾಲೆಯ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶದಲ್ಲಿ ಮಾಚಹಳ್ಳಿ ಶಾಲೆಗೆ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.
ವಿದ್ಯಾರ್ಥಿನಿ ಪಿ.ಎಸ್.ಲಹರಿ: ಗುಡಿಬಂಡೆ ತಾಲೂಕು ಪಸುಪಲೋಡು ಗ್ರಾಮದ ವಾಸಿಯಾದ ಸುರೇಶ್ ಬಾಬು ಮತ್ತು ರೆಡ್ಡಮ್ಮ ಎಂಬ ರೈತ ದಂಪತಿಗಳ ಮಗಳಾದ ಲಹರಿ ಪಿಎಸ್ ಪ್ರಥಮ ಭಾಷೆ ಕನ್ನಡ 111, ದ್ವಿತೀಯ ಭಾಷೆ ಇಂಗ್ಲಿಷ್ 76, ತೃತೀಯ ಭಾಷೆ ಹಿಂದಿ 83, ಗಣಿತ 57, ವಿಜ್ಞಾನ 81, ಸಮಾಜ ವಿಜ್ಞಾನ 93, ಒಟ್ಟು 501(80.16%) ಅಂಕಗಳನ್ನು ಪಡೆಯುವ ಮೂಲಕ ಶಾಲೆಯ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ 3ನೇ ಸ್ಥಾನವನ್ನು ಗಳಿಸಿಕೊಂಡಿರುತ್ತಾರೆ.
ಈ ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ನೀಡಿದ ಸರ್ಕಾರಿ ಪ್ರೌಢಶಾಲೆ ಮಾಚಹಳ್ಳಿ ಶಾಲೆಯ ಮುಖ್ಯ ಶಿಕ್ಷಕರಾದ ಮಂಜಾ ನಾಯಕ್ ಸಿ, ಹಾಗೂ ಸಹಶಿಕ್ಷಕರಾದ ಚಂದ್ರಶೇಖರ ಎಲ್ ವಿ , ಹಸೀನಾ ಬಾನು, ಶಾಂಭವಿ, ಸೋಮಶೇಖರ್ ರವರು ಅತ್ಯಂತ ಸಂತೋಷದಿಂದ ಮಕ್ಕಳನ್ನು ಗೌರವಿಸಿ, ಸನ್ಮಾನಿಸಿ ಮುಂದಿನ ಶಿಕ್ಷಣಕ್ಕೆ ಉತ್ತಮ ಮಾರ್ಗದರ್ಶನ ನೀಡುವ ಮೂಲಕ ಶುಭ ಹಾರೈಸಿದ್ದಾರೆ.