ಇಂದು ಅನೇಕ ಕಾರಣಗಳಿಂದ ನಮ್ಮ ಹಿಂದೂ ಸಮಾಜದಲ್ಲಿ ಸಂಘಟನೆಯ ಕೊರತೆ ಎದ್ದು ಕಾಣುತ್ತಿದ್ದು, ಇದರಿಂದ ಇತರರಿಗೆ ನಾವೇ ನಮ್ಮ ಧರ್ಮದ ಬಗ್ಗೆ ಮಾತನಾಡುವಂತೆ ಮಾಡುತ್ತಿದ್ದೇವೆ. ಈ ನಿಟ್ಟಿನಲ್ಲಿ ಎಲ್ಲಾ ಹಿಂದೂಗಳು ಜಾತಿ, ಪಕ್ಷ ಭೇದ ಮರೆತು ಸಂಘಟತಿರಾಗಬೇಕು ಎಂದು ವಿಶ್ವ ಹಿಂದೂ ಪರಿಷತ್ ನ ಪ್ರಾಂತ ಸಂಪರ್ಕ ಪ್ರಮುಖ ಮಂಜುನಾಥ್ ಸ್ವಾಮೀಜಿ ರವರು ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದಲ್ಲಿ (Hindu Samajotsava) ಹಿಂದೂ ಸಮಾಜೋತ್ಸವ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ, ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.

Hindu Samajotsava – ಸಂಘಟನೆಯೇ ಶಕ್ತಿ: ಆರ್.ಎಸ್.ಎಸ್ ಮತ್ತು ಹಿಂದುತ್ವದ ಹಾದಿ
ವಿಶ್ವದಲ್ಲಿ ಇರುವ ಏಕೈಕ ಹಿಂದೂ ರಾಷ್ಟ್ರ ಭಾರತ. ಆದರೆ ಇಂದು ಭಾರತದಲ್ಲಿ ಹಲವಾರು ಕಾರಣಗಳಿಂದ ಹಿಂದೂಗಳಲ್ಲಿ ಒಗ್ಗಟ್ಟು ಒಡೆಯುತ್ತಿದೆ. ಸುಮಾರು ವರ್ಷಗಳ ಹಿಂದೆ ಹಿಂದೂಗಳನ್ನು ಒಗ್ಗೂಡಿಸಲು ಆರ್.ಎಸ್.ಎಸ್. ಸಂಘಟನೆಯನ್ನು ಸ್ಥಾಪನೆ ಮಾಡಲಾಯಿತು. ಅಂದಿನಿಂದ ಇಲ್ಲಿಯವರೆಗೂ ಸಂಘಟನೆ ಹಿಂದೂಗಳ ಸಂಘಟನೆ ಮಾಡುವಲ್ಲಿ ನಿರತವಾಗಿದೆ. ಹಿಂದೂಗಳಲ್ಲಿ ಸಾಕಷ್ಟು ಜಾತಿಗಳಿವೆ, ಯಾರಾದರೂ ಯಾವ ದೇವರನ್ನು ಬೇಕಾದರೂ ಪೂಜೆ ಮಾಡಬಹುದು. ನಮ್ಮ ಹಿಂದೂ ಧರ್ಮ ಭವ್ಯ ಪರಂಪರೆಯನ್ನು ಹೊಂದಿದೆ. ಹಿಂದೂ ಸಂಸ್ಕೃತಿ, ಸಮಾಜವನ್ನು ಇಂದು ನಾವೆಲ್ಲರೂ ಒಗ್ಗಟ್ಟಿನಿಂದ ಗತವೈಭವಕ್ಕೆ ತರಲು ಶ್ರಮಿಸಬೇಕು. ರಾಮ, ಕೃಷ್ಣ, ವಾಲ್ಮೀಕಿ, ವ್ಯಾಸ ಈ ರೀತಿ ಅನೇಕ ಮಹನೀಯರನ್ನು ನಾವು ಜಾತಿಗೆ ಸೀಮಿತ ಮಾಡಿ ಅನುಸರಿಸೊಲ್ಲ. ಆ ರೀತಿ ಹಿಂದೂ ಧರ್ಮದಲ್ಲಿ ಯಾವುದೇ ಜಾತಿಗಳರಲಿ, ಯಾವುದೇ ದೇವರನ್ನು ಪೂಜಿಸಲಿ ನಾವೆಲ್ಲರೂ ಹಿಂದೂಗಳು ಎಂಬುದನ್ನು ಮರೆಯಬಾರದು ಎಂದರು.

ಸಾಮಾಜಿಕ ಸವಾಲುಗಳು ಮತ್ತು ಯುವಪಡೆಯ ಜವಾಬ್ದಾರಿ
ಇನ್ನೂ ಇಂದು ಪರಕೀಯರ ದೌರ್ಜನ್ಯ ಹೆಚ್ಚಾಗುತ್ತಿದೆ. ಕೆಲ ಮತಾಂದರು ಹಿಂದೂ ಧರ್ಮವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಲವ್ ಜಿಹಾದ್ ಹೆಸರಿನಲ್ಲಿ ನಮ್ಮ ಹಿಂದೂ ಹೆಣ್ಣು ಮಕ್ಕಳನ್ನು ಬಲವಂತದ ಮತಾಂತರ ಮಾಡಲಾಗುತ್ತಿದೆ. ಇದರ ಜೊತೆಗೆ ಗೋ ಹತ್ಯೆ ಹೆಚ್ಚಾಗಿ ನಡೆಯುತ್ತಿದೆ. ಈ ಮತಾಂಧ ಶಕ್ತಿಗಳನ್ನು ಎದುರಿಸಲು ನಾವೆಲ್ಲರೂ ಸಂಘಟಿತರಾಗಬೇಕು. ಲವ್ ಜಿಹಾದ್, ಗೋ ಹತ್ಯೆಯಂತಹ ಕೃತ್ಯಗಳನ್ನು ತಡೆಯಲು ಯುವಕ ಪಡೆ ಸಜ್ಜಾಗಬೇಕು. ಈ ಕಾರಣದಿಂದ ದೇಶದಾದ್ಯಂತ ಹಿಂದೂ ಸಮಾಜೋತ್ಸವ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ ಎಂದರು.
ಹಿಂದೂಗಳು ಒಗ್ಗಟ್ಟಾಗಬೇಕಿದೆ
ಬಳಿಕ ಬಾಗೇಪಲ್ಲಿ ತಾಲೂಕಿನ ಆನಂದಾಶ್ರಮದ ಶ್ರೀ ನರೋತ್ತಮಾನಂದ ಸ್ವಾಮೀಜಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡುತ್ತಾ, ಹಿಂದೂಗಳೆಲ್ಲರೂ ಒಂದೇ, ಜಾತಿ, ಉಪಜಾತಿಗಳು ಸಾಕಷ್ಟು ಇರಬಹುದು, ಆದರೆ ಹಿಂದೂ ಧರ್ಮ ಒಂದೇ ಆಗಿದೆ. ಅನಾದಿ ಕಾಲದಿಂದಲೂ ಆಚರಣೆಯಲ್ಲಿದ್ದ ಹಿಂದೂ ಧರ್ಮದ ಪಾವಿತ್ಯ್ರತೆ, ಸಂಸ್ಕೃತಿಯನ್ನು ನಾವೆಲ್ಲರೂ ಒಗ್ಗಟ್ಟಾಗಿ ಕಾಪಾಡಬೇಕು, ಹಿಂದೂ ಧರ್ಮವನ್ನು ಉನ್ನತೀಕರಿಸಲು ಮುಂದಾಗಬೇಕು ಎಂದರು. Read this also : ಹಿಂದೂ ಸಮಾಜೋತ್ಸವ (Hindu Samajotsava) ಹಬ್ಬದಂತೆ ಆಚರಿಸಬೇಕು: ಬೈಕ್ ಜಾಥಾಗೆ ಚಾಲನೆ ನೀಡಿದ ಸಿ. ಮುನಿರಾಜು
ಹಿಂದೂ ಸಮಾಜ ಜಾಗೃತರಾಗಬೇಕಿದೆ
ಬಳಿಕ ಸಮಾಜ ಸೇವಕ, ಬಿಜೆಪಿ ಪಕ್ಷದ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜು ಮಾತನಾಡಿ, ಗುಡಿಬಂಡೆಯಲ್ಲಿ ಎಲ್ಲಾ ಹಿಂದೂಗಳ ಸಹಕಾರದಿಂದ ಹಿಂದೂ ಸಮಾಜೋತ್ಸವ ವಿಜೃಂಭಣೆಯಿಂದ ನೆರವೇರಿದೆ. ಈ ರೀತಿಯ ಕಾರ್ಯಕ್ರಮಗಳು ಆಗಾಗ ನಡೆಯುತ್ತಿರಬೇಕು. ಹಿಂದೂ ಸಮಾಜವನ್ನು ಜಾಗೃತಗೊಳಿಸುವಂತಹ ಕೆಲಸಗಳು ನಡೆಯುತ್ತಿರಬೇಕು. ಮುಂದಿನ ದಿನಗಳಲ್ಲಿ ಈ ರೀತಿಯ ಕಾರ್ಯಕ್ರಮಗಳನ್ನು ಮತ್ತಷ್ಟು ಆಯೋಜನೆ ಮಾಡಲು ಎಲ್ಲರೂ ಮುಂದಾಗಬೇಕು. ಇಂದು ಗುಡಿಬಂಡೆಯಲ್ಲಿ ಎಲ್ಲರ ಸಹಕಾರದೊಂದಿಗೆ ಹಿಂದೂ ಸಮಾಜೋತ್ಸವ ಅತ್ಯಂತ ವೈಭವದಿಂದ ನೆರವೇರಿದ ಎಂದರು.

ಸಂಭ್ರಮದ ಶೋಭಾಯಾತ್ರೆ ಮತ್ತು ಗಣ್ಯರ ಉಪಸ್ಥಿತಿ
ಇನ್ನೂ ವೇದಿಕೆ ಕಾರ್ಯಕ್ರಮಕ್ಕೂ ಮುನ್ನಾ ಗುಡಿಬಂಡೆ ಪಟ್ಟಣದ ರಾಜಬೀದಿಯಲ್ಲಿ ಹಿಂದೂ ಸಮಾಜೋತ್ಸವದ ಶೋಭಾಯಾತ್ರೆ ವಿವಿಧ ಕಲಾತಂಡಗಳೊಂದಿಗೆ, ಭಜನಾ ಮಂಡಳಿಗಳ ಭಜನೆಯೊಂದಿಗೆ ವಿಜೃಂಭಣೆಯಿಂದ ನೆರವೇರಿತು. ಈ ವೇಳೆ ಹಿಂದೂ ಸಮಾಜೋತ್ಸವದ ಅಧ್ಯಕ್ಷ ಗಜನಾಣ್ಯ ನಾಗರಾಜು, ಬೆಂಗಳೂರಿನ ತಜ್ಞ ವೈದ್ಯ ಡಾ.ಸಂಜಯ್ ಸುಬ್ಬಯ್ಯ, ಗ್ರಾಮ ವಿಕಾಸ ಸಂಸ್ಥೆಯ ಶ್ರೀಧರ್ ಸಾಗರ್ ಜೀ, ಸಮಾಜೋತ್ಸವದ ಹೆಚ್.ಎನ್.ಮಂಜುನಾಥರೆಡ್ಡಿ, ಜಿ.ಎನ್.ದ್ವಾರಕನಾಥನಾಯ್ಡು, ಜಿ.ವಿ.ಅಮರೇಶ್, ವಾಹಿನಿ ಸುರೇಶ್, ರಾಜಗೋಪಾಲ್, ಪದ್ಮಾವತಮ್ಮ ಸೇರಿದಂತೆ ಹಲವರು ಹಾಜರಿದ್ದರು.
