Thursday, January 8, 2026
HomeInternationalCalifornia Hero Mom : ಮಕ್ಕಳ ರಕ್ಷಣೆಗಾಗಿ ಕೋಟ್ಯಂತರ ಬೆಲೆಯ ಐಷಾರಾಮಿ ಕಾರನ್ನೇ ವಿಲನ್‌ಗಳ ಮೇಲೆ...

California Hero Mom : ಮಕ್ಕಳ ರಕ್ಷಣೆಗಾಗಿ ಕೋಟ್ಯಂತರ ಬೆಲೆಯ ಐಷಾರಾಮಿ ಕಾರನ್ನೇ ವಿಲನ್‌ಗಳ ಮೇಲೆ ಹರಿಸಿದ ‘ವೀರ ತಾಯಿ’! ಕಳ್ಳರ ಗ್ಯಾಂಗ್ ಸುಸ್ತು

ಮಕ್ಕಳಿಗಾಗಿ ಅಮ್ಮ ಎಂತಹ ಸಾಹಸಕ್ಕೂ ಸಿದ್ಧ ಎನ್ನುವುದಕ್ಕೆ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ. ಮನೆಯೊಳಗೆ ನುಗ್ಗಲು ಯತ್ನಿಸುತ್ತಿದ್ದ ದರೋಡೆಕೋರರಿಗೆ ತಕ್ಕ ಪಾಠ ಕಲಿಸಲು ಈಕೆ ಮಾಡಿದ ಕೆಲಸ ಈಗ ಇಡೀ ಜಗತ್ತಿನಾದ್ಯಂತ ವೈರಲ್ ಆಗಿದೆ. ಆಕೆಯ ಸಮಯಪ್ರಜ್ಞೆ ಮತ್ತು ಧೈರ್ಯಕ್ಕೆ ನೆಟ್ಟಿಗರು ‘ಹೀರೋ ಮಾಮ್’ (Hero Mom) ಎಂದು ಬಿರುದು ಕೊಟ್ಟಿದ್ದಾರೆ.

Brave mother in Sherman Oaks, California, rams her Mercedes G-Wagon into burglars’ car to protect her children

California Hero Mom – ನಡೆದಿದ್ದೇನು? ಬೆಚ್ಚಿಬೀಳಿಸುವ ಘಟನೆ

ಡಿಸೆಂಬರ್ 20, ಶನಿವಾರದಂದು ಶರ್ಮನ್ ಓಕ್ಸ್ ಎಂಬ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮಹಿಳೆಯೊಬ್ಬರು ಕಾಫಿ ಕುಡಿಯಲು ಹೊರಗೆ ಹೋಗಿದ್ದಾಗ, ಮನೆಯಲ್ಲಿದ್ದ ಆಕೆಯ ತಾಯಿಯಿಂದ ಗಾಬರಿಯ ಕರೆ ಬಂದಿದೆ. “ಮುಖಕ್ಕೆ ಮುಸುಕು ಧರಿಸಿದ ಕೆಲವರು ಮನೆಗೆ ನುಗ್ಗಲು ಯತ್ನಿಸುತ್ತಿದ್ದಾರೆ, ಮಕ್ಕಳು ಮನೆಯಲ್ಲಿದ್ದಾರೆ” ಎಂದು ತಾಯಿ ಕಿರುಚಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಆಕೆ ಕಿಂಚಿತ್ತೂ ತಡಮಾಡದೆ ಮನೆಗೆ ಧಾವಿಸಿದ್ದಾರೆ. ಅವರು ಮನೆ ತಲುಪುವಷ್ಟರಲ್ಲಿ ಮೂವರು ಆರೋಪಿಗಳು ಮನೆಯಿಂದ ಹೊರಬಂದು, ಅಲ್ಲಿಯೇ ನಿಲ್ಲಿಸಿದ್ದ ಬಿಳಿ ಬಣ್ಣದ ಹೋಂಡಾ ಕಾರನ್ನು ಹತ್ತಿ ಪರಾರಿಯಾಗಲು ಸಜ್ಜಾಗಿದ್ದರು.

ಮರ್ಸಿಡಿಸ್ ಕಾರನ್ನೇ ಶಸ್ತ್ರವನ್ನಾಗಿಸಿಕೊಂಡ ಅಮ್ಮ!

ಗಾಬರಿ ಮತ್ತು ಆತಂಕದ ನಡುವೆಯೂ ಆಕೆ ಮೌನವಾಗಿರಲಿಲ್ಲ. ತನ್ನ 1.25 ಕೋಟಿ ರೂ.ಗೂ ಅಧಿಕ ಮೌಲ್ಯದ ($150,000) ಐಷಾರಾಮಿ ಮರ್ಸಿಡಿಸ್ ಜಿ-ವ್ಯಾಗನ್ (Mercedes G-Wagon) ಕಾರನ್ನು ನೇರವಾಗಿ ದರೋಡೆಕೋರರ ಕಾರಿಗೆ ಡಿಕ್ಕಿ ಹೊಡೆಸಿದ್ದಾರೆ. ಡಿಕ್ಕಿಯ ರಭಸಕ್ಕೆ ಕಳ್ಳರ ಹೋಂಡಾ ಕಾರು (California Hero Mom) ಸಂಪೂರ್ಣ ಜಖಂಗೊಂಡು ಚಲಿಸಲಾಗದ ಸ್ಥಿತಿಗೆ ತಲುಪಿತು.

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here

ತನ್ನ ಕಾರು ಹೋದರೂ ಪರವಾಗಿಲ್ಲ, ಕುಟುಂಬಕ್ಕೆ ತೊಂದರೆಯಾಗಬಾರದು ಎಂದು ಆಕೆ ತೋರಿದ ಈ ಸಾಹಸಕ್ಕೆ ಪೊಲೀಸರೇ ಬೆರಗಾಗಿದ್ದಾರೆ. ವಿಡಿಯೋದಲ್ಲಿ ಸೆರೆಯಾಗಿರುವಂತೆ, ಕಾರು ಕೆಟ್ಟು ನಿಂತಿದ್ದರಿಂದ ಕಳ್ಳರು ಕಾರನ್ನು ಅಲ್ಲಿಯೇ ಬಿಟ್ಟು ಕಾಲ್ಕಿತ್ತಿದ್ದಾರೆ. “ನಾನು ತುಂಬಾ ಗಾಬರಿಯಾಗಿದ್ದೆ, ಶಾಕ್‌ನಲ್ಲಿದ್ದೆ. ಅವರನ್ನು ನೋಡಿದಾಗ ಏನೂ ತೋಚದೆ ಉದ್ದೇಶಪೂರ್ವಕವಾಗಿಯೇ ಅವರ ಕಾರಿಗೆ ಡಿಕ್ಕಿ ಹೊಡೆದೆ” (California Hero Mom) ಎಂದು ಆಕೆ ನಂತರ ಮಾಧ್ಯಮಗಳಿಗೆ ತಿಳಿಸಿದ್ದಾರೆ. Read this also : “ಪಪ್ಪಾ.. ಪಪ್ಪಾ..” ಹುತಾತ್ಮ ತಂದೆಯ ಮೃತದೇಹ ಕಂಡು ಕಂದಮ್ಮನ ಆಕ್ರಂದನ; ಕಣ್ಣೀರು ತರಿಸುತ್ತೆ ಈ ವೈರಲ್ ವಿಡಿಯೋ!

Brave mother in Sherman Oaks, California, rams her Mercedes G-Wagon into burglars’ car to protect her children

ಹೈಟೆಕ್ ಕಳ್ಳರ ಕೈಚಳಕ?

ಪೊಲೀಸ್ ತನಿಖೆಯ ಪ್ರಕಾರ, ಈ ದರೋಡೆಕೋರರು ಬಹಳ ಚಾಲಾಕಿಗಳಾಗಿದ್ದರು. ಇವರು ಮನೆಯ ಸಿಸಿಟಿವಿ ಕ್ಯಾಮೆರಾಗಳನ್ನು ಮೊದಲೇ ನಿಷ್ಕ್ರಿಯಗೊಳಿಸಿದ್ದರು ಮತ್ತು ಪೊಲೀಸರ (California Hero Mom) ವೈರ್‌ಲೆಸ್ ಸಿಗ್ನಲ್‌ಗಳನ್ನು ಗಮನಿಸುತ್ತಿದ್ದರು ಎನ್ನಲಾಗಿದೆ. ಸದ್ಯಕ್ಕೆ ಆರೋಪಿಗಳಿಗಾಗಿ ಹುಡುಕಾಟ ಮುಂದುವರಿದಿದ್ದು, ಯಾರಿಗೂ ಗಂಭೀರ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.

by ISM Kannada News Deskhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular